BREAKING: ನಾಲ್ವರು ಭಾರತೀಯರು ಸೇರಿ 22 ಮಂದಿ ಪ್ರಯಾಣಿಕರಿದ್ದ ನೇಪಾಳ ವಿಮಾನ ನಾಪತ್ತೆ

ನೇಪಾಳ: ಖಾಸಗಿ ವಿಮಾನ ಸಂಸ್ಥೆಯೊಂದು ನಿರ್ವಹಿಸುತ್ತಿದ್ದಂತ ಸಣ್ಣ ವಿಮಾನವೊಂದು, ಇಂದು ನಾಪತ್ತೆಯಾಗಿದೆ. ಈ ವಿಮಾನದಲ್ಲಿ ನಾಲ್ವರು ಭಾರತೀಯರು ಸಹಿತ 22 ಪ್ರಯಾಣಿಕರಿದ್ದರು ಎಂಬುದಾಗಿ ತಿಳಿದು ಬಂದಿದೆ.

ಪೋಖರಾದಿಂದ ಜೋಮ್ಸಮ್ ಕಡೆಗೆ ಬೆಳಿಗ್ಗೆ 9.55ರ ವೇಳೆಗೆ ಪ್ರಯಾಣ ಆರಂಭಿಸಿದ ಕೆಲ ಹೊತ್ತಿನಲ್ಲಿಯೇ ತಾರಾ ಏರ್ 9 ಎನ್ಎಇಟಿ ಅವಳಿ ಎಂಜಿನ್ ವಿಮಾನವು ನಾಪತ್ತೆಯಾಗಿದೆ.

ಈ ವಿಮಾನ ಮುಸ್ತಾಂಗ್ ಜಿಲ್ಲೆಯ ಜೋಮ್ಸಮ್ ನಲ್ಲಿ ಕಾಣಿಸಿಕೊಂಡಿತ್ತು, ಅಲ್ಲಿಂದ ಮೌಂಟ್ ಧೌಲಗಿರಿಗೆ ತಿರುಗಿದೆ. ಆ ಬಳಿಕ ಸಂಪರ್ಕಕ್ಕೆ ಸಿಕ್ಕಿಲ್ಲ ಎಂಬುದಾಗಿ ಜಿಲ್ಲಾಧಿಕಾರಿ ನೇತ್ರಾ ಪ್ರಸಾದ್ ಶರ್ಮಾ ಮಾಹಿತಿ ನೀಡಿದ್ದಾರೆ.

ಇದೀಗ ನಾಪತ್ತೆಯಾಗಿರುವಂತ ಪುಟ್ಟ ವಿಮಾನದಲ್ಲಿ ನಾಲ್ವರು ಭಾರತೀಯರು, ಮೂವರು ಜಪಾನ್ ಪ್ರಜೆಗಳು, ನೇಪಾಳಿ ಪ್ರಜೆಗಳು, ವಿಮಾನ ಸಿಬ್ಬಂದಿಗಳ ಸಹಿತ 22 ಮಂದಿ ಪ್ರಯಾಣಿಕರಿದ್ದರು ಎಂಬುದಾಗಿ ತಿಳಿದು ಬಂದಿದೆ.

About The Author