ನವದೆಹಲಿ : ದೇಶದಲ್ಲಿ ಎಲೆಕ್ಟ್ರಿಕ್ ಕಾರುಗಳ ಜಮಾನ ಶುರುವಾಗ್ತಿದೆ.. ಹುಂಡೈ ಕೋನಾ 20 ಲಕ್ಷ ಮೌಲ್ಯದ ಎಲೆಕ್ಟ್ರಿಕ್ ಕಾರು ಬಿಡುಗಡೆಯ ಬೆನ್ನಲ್ಲೇ ಟಾಟಾ ಕಂಪನಿ ಅತೀ ಕಡಿಮೆ ದರದಲ್ಲಿ ಅಂದ್ರೆ ದೆಹಲಿ ಷೋರೂಂ ಗಳಲ್ಲಿ 9.44 ಲಕ್ಷ ( ಸರ್ಕಾರದ ಸಬ್ಸಿಡಿಯ ನಂತರ ) ಮೌಲ್ಯದ ಕಾರನ್ನ ಇಂದು ಬಿಡುಗಡೆ ಮಾಡಿದೆ. ಟಿಗೋರ್ ಎಲೆಕ್ಟ್ರಿಕ್ ಕಾರು ನಾಲ್ಕು ಮಾಡೆಲ್ ಗಳಲ್ಲಿ ಬಿಡುಗಡೆಯಾಗಿದ್ದು ಒಂದು ಬಾರಿ ಚಾರ್ಜ್ ಮಾಡಿದ್ರೆ 213 ಕಿಲೋಮೀಟರ್ ಚಲಾಯಿಸಬಹುದಾಗಿದೆ. ಈ ಕಾರಿನಲ್ಲಿ ಎರಡು ಕಡೆ ಚಾರ್ಜಿಂಗ್ ಪಾಯಿಂಟ್ ಇದ್ದು ವೇಗವಾಗಿ ಚಾರ್ಜ್ ಮಾಡಬಹುದಾಗಿದೆ.
ಟಾಟಾ ಟಿಗೋರ್ ಎಲೆಕ್ಟ್ರಿಕ್ ಕಾರಿಗೆ ಭಾರೀ ಬೇಡಿಕೆ
ಕಾರು ಇಂದು ಬಿಡುಗಡೆಯಾದರೂ ಈಗಾಗಲೇ ಭಾರೀ ಬೇಡಿಕೆ ಕ್ರಿಯೇಟ್ ಆಗಿದೆ.. ವಾಣೀಜ್ಯ ಗ್ರಾಹಕರು ಸೇರಿದಂತೆ ಸರ್ಕಾರಿ ಸಂಸ್ಥೆಗಳಿಂದ ಈಗಾಗಲೇ ಸಾವಿರಾರು ಕಾರುಗಳನ್ನ ಬುಕ್ ಮಾಡಲಾಗಿದೆ ಅಂತ ಟಾಟಾ ಎಲೆಕ್ಟ್ರಿಕ್ ಕಾರುಗಳ ಮಾರಾಟ ವಿಭಾಗದ ಮುಖ್ಯಸ್ಥ ಆಶೀಶ್ ದಾರ್ ತಿಳಿಸಿದ್ದಾರೆ.
ಒಟ್ಟಾರೆ ಹೊಗೆ ರಹಿತ ಭಾರತ ನಿರ್ಮಾಣಕ್ಕೆ ಕೈಗೆಟುಕುವ ದರದಲ್ಲಿ ಟಾಟಾ ಟಿಗೋರ್ ಎಲೆಕ್ಟ್ರಿಕ್ ಕಾರು ಮಹತ್ವದ ಪಾತ್ರ ವಹಿಸುವ ಸಾಧ್ಯತೆ ಇದೆ.. ಇನ್ನೂ ಹಲವು ಕಂಪನಿಗಳೂ ಎಲೆಕ್ಟಿಕ್ ಕಾರುಗಳನ್ನ ಮಾರುಕಟ್ಟೆಗೆ ಬಿಡುಗಡೆ ಮಾಡಲು ಸನ್ನದ್ಧವಾಗಿವೆ.. ಹೀಗಾಗಿ ಗ್ರಾಹಕರು ತಮ್ಮ ಬಜಟ್ ತಕ್ಕಂತೆ ಕಾರುಗಳನ್ನ ತೆಗೆದುಕೊಳ್ಳಬಹುದು.