www.karnatakatv.net: ಚಿಕ್ಕಮಕ್ಕಳು ತಪ್ಪು ಮಾಡೋದು ಸಹಜ ಆದರೆ ಅದೇ ಒಂದು ದೊಡ್ಡ ತಪ್ಪು ಅಂತಾ ಅವರನ್ನ ಹೊಡೆಯುವುದು ಏಷ್ಟು ಸರಿ ಹೇಳಿ.. ಹಾಗೇ ಮಕ್ಕಳು ಶಾಲೆಯಲ್ಲಿ ಕೊಟ್ಟಿರುವ ಹೋಮ್ ವರ್ಕ್ ಪೂರ್ಣವಾಗಿ ಮಾಡಿಲ್ಲ ಅಂತಾ ಶಿಕ್ಷಕ 7ನೇ ತರಗತಿ ವಿದ್ಯಾರ್ಥಿಯೊಬ್ಬನಿಗೆ ಹೊಡೆದ ಪರಿಣಾಮ ಆತ ಸಾವನ್ನಪ್ಪಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ಶಾಲೆಯಲ್ಲಿ ಮಕ್ಕಳು ಕ್ಲಾಸ್ ವರ್ಕ್ ಮಾಡಿ ನಂತರ ಮನೆಯಲ್ಲಿ ಕೊಟ್ಟಿರುವ ಹೋಮ್ ವರ್ಕ್ ಮಾಡದೆ ಇದ್ದದ್ದಕ್ಕ ರಾಜಸ್ಥಾನದ ಚುರು ಜಿಲ್ಲೆಯ ಸಾಲ್ಸಾರ್ ಗ್ರಾಮದ ಖಾಸಗಿ ಶಾಲೆಯ ಶಿಕ್ಷಕ ಹಿಗ್ಗಾಮುಗ್ಗಾ ಹೊಡೆದ ಪರಿಣಾಮ ಆತ ಸಾವನ್ನಪ್ಪಿದ್ದಾರೆ. 13 ವರ್ಷದ ಬಾಲಕನಿಗೆ ಶಿಕ್ಷಕ ಮನೋಜ್ ಕುಮಾರ್ ಕೋಲಿನಿಂದ ಥಳಿಸಿದ್ದು, ಬಾಲಕ ನೆಲದ ಮೇಲೆ ಪ್ರಜ್ಞೆ ತಪ್ಪಿ ಬಿದ್ದಿದ್ದ. ಕೋಲಾಸರ್ ನಿವಾಸಿ ಓಂಪ್ರಕಾಶ್ ಅವರ ಪುತ್ರ ಖಾಸಗಿ ಶಾಲೆಯ 7ನೇ ತರಗತಿ ವಿದ್ಯಾರ್ಥಿಯಾಗಿದ್ದ. ಬುಧವಾರ ಬೆಳಗ್ಗೆ 9.15ಕ್ಕೆ ಆರೋಪಿ ಶಿಕ್ಷಕ ಮನೋಜ್ ಕುಮಾರ್ ಬಾಲಕನ ತಂದೆಗೆ ಕರೆ ಮಾಡಿ, ನಿಮ್ಮ ಮಗ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ ಎಂದು ತಿಳಿಸಿದ್ದ. ಪೋಷಕರು ಶಿಕ್ಷಕನಿಗೆ ನಿವು ನನ್ನ ಮಗನನ್ನು ಕೊಂದಿದ್ದಿರಾ ಎಂದು ಹೇಳಿದ್ದಕ್ಕೆ ಶಿಕ್ಷಕ ನಿಮ್ಮ ಮಗ ನಿಮ್ಮ ಮಗ ಸತ್ತಂತೆ ನಾಟಕವಾಡುತ್ತಿದ್ದಾನೆ ಎಂದು ಪ್ರತಿಕ್ರಿಯೆ ನೀಡಿದ್ದ. ನಂತರ ಆ ಬಾಲಕನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಆತ ಸಾವನ್ನಪ್ಪಿರುವ ಸುದ್ದಿ ವೈದ್ಯರು ತಿಳಿಸಿದ್ದಾರೆ.
ಶಾಲಾ ಮುಖ್ಯ ಶಿಕ್ಷಕ ಸಂದೀಪ್ ವೈಷ್ಣೋಯಿ ಅವರ ಸಲಹೆ ಮೇರೆಗೆ ಬಾಲಕನ ತಂದೆ ಓಂಪ್ರಕಾಶ್ ಅವರು ಪೊಲೀಸರಿಗೆ ದೂರು ನೀಡಿದ್ದು, ಬಳಿಕ ಆರೋಪಿ ಶಿಕ್ಷಕ ಮನೋಜ್ ಕುಮಾರ್ ನನ್ನು ಸೆಕ್ಷನ್ 302ರ ಪ್ರಕಾರ ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ.