Tech News: ನಾವು ಸೇವಿಸುವ ಆಹಾರ ಬಿಸಿ ಬಿಸಿಯಾಗಿರಬೇಕು ಅಂದ್ರೆ, ತಿನ್ನುವ ಹೊತ್ತಿಗೆ ಅದನ್ನು ಬಿಸಿ ಮಾಡಬೇಕು. ಆದರೆ ಆಫೀಸಗೆ ಹೋದಾಗ, ಆಹಾರವನ್ನು ಯಾರು ಬಿಸಿ ಮಾಡ್ತಾರೆ..? ಮನೆಯಲ್ಲಿದ್ದರೂ, ಕೆಲವೊಂದು ಆಹಾರಗಳನ್ನು ಇನ್ನೊಮ್ಮೆ ಬಿಸಿ ಮಾಡಲು ಆಗುವುದಿಲ್ಲ. ಆದರೆ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಒಂದು ಮ್ಯಾಟ್ ಮೇಲೆ ನೀವು ಆಹಾರವನ್ನು ಇರಿಸಿದರೆ, ನಿಮ್ಮ ಊಟ ಬಿಸಿ ಬಿಸಿಯಾಗಿರುತ್ತದೆ.
ಫ್ರಿಜ್‌ನಲ್ಲಿ ಇರಿಸಿದ ಆಹಾರ ಅಥವಾ ಬೇರೆ ಯಾವುದೇ ತಣಿದಿರುವ ಆಹಾರವನ್ನು ತಂದು ನೀವು ಈ ಮ್ಯಾಟ್ ಮೇಲೆ ಇರಿಸಬಹುದು. ಮ್ಯಾಟ್ ಬಿಡಿಸಿ, ವಾಯರನ್ನು ಕರೆಂಟಿಗೆ ಸಿಕ್ಕಿಸಿ, ಸ್ವಿಚ್ ಆನ್ ಮಾಡಿದರೆ, ಮ್ಯಾಟ್ ಬಿಸಿಯಾಗುತ್ತದೆ. ಬಳಿಕ ಆಹಾರವನ್ನು ಇದರ ಮೇಲೆ ಇರಿಸಬೇಕು. ಆಗ ಆಹಾರವೂ ಬಿಸಿ ಬಿಸಿಯಾಗಿರುತ್ತದೆ.
ಇನ್ನು ಊಟ ಮುಗಿದ ಬಳಿಕ, ಇದರ ಮೇಲೆ ಏನಾದರೂ ಚೆಲ್ಲಿದ್ದರೆ, ಅದನ್ನು ಸುಲಭವಾಗಿ ಒರೆಸಿ, ಚಾಪೆಯಂತೆ ಮ್ಯಾಟ್ ಮಡಿಚಿ ಇಡಬಹುದು. ಇನ್ನೊಬ್ಬರ ಮನೆಗೆ, ಆಫೀಸಿಗೆ ಸೇರಿ ಕರೆಂಟ್ ಇರುವ ಜಾಗಕ್ಕೆ ತೆಗೆದುಕೊಂಡು ಹೋಗಿ ನೀವು, ಬಿಸಿ ಬಿಸಿಯಾದ ಊಟವನ್ನು ಸವಿಯಬಹುದು.
ಇದರ ಬೆಲೆ ಬಗ್ಗೆ ಹೇಳುವುದಾದರೆ, 11 ಸಾವಿರ ರೂಪಾಯಿಯಿಂದ ಈ ಮ್ಯಾಟ್ ಬೆಲೆ ಶುರುವಾಗುತ್ತದೆ. ಆನ್‌ಲೈನ್‌ನಲ್ಲಿ ನೀವು ಈ ಮ್ಯಾಟ್‌ನಾ ಖರೀದಿ ಮಾಡಬಹುದು.