ಟಾಲಿವುಡ್ನ ಖ್ಯಾತ ನಟ, ಡಾರ್ಲಿಂಗ್ ಪ್ರಭಾಸ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ಕಲ್ಕಿ 2898 AD OTTಯಲ್ಲಿ ರಿಲೀಸ್ಗೆ ಸಜ್ಜಾಗಿದೆ. ಈ ಬ್ಲಾಕ್‌ಬಸ್ಟರ್ ಸಿನಿಮಾದಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್, ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಹಾಗೂ ಬಹುಭಾಷಾ ನಟ ಕಮಲ್ ಹಾಸನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕಲ್ಕಿ 2898 ಎಡಿ ಇದೇ ಆಗಸ್ಟ್ 22ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗಲಿದೆ. ಇನ್ನು ಅದೇ ದಿನ ಹಿಂದಿ ವರ್ಷನಲ್ಲಿ ನೆಟ್‌ಫ್ಲಿಕ್ಸ್‌ನಲ್ಲೂ ರಿಲೀಸ್ ಆಗಲಿದೆ.
ನಾಗ್ ಅಶ್ವಿನ್ ನಿರ್ದೇಶನದ ಈ ಸಿನಿಮಾವು ಕನ್ನಡ, ಮಲಯಾಳಂ, ತಮಿಳು, ತೆಲುಗು ಭಾಷೆಗಳಲ್ಲಿ ಪ್ರೈಮ್ ವಿಡಿಯೋದಲ್ಲಿ ಪ್ರಸಾರವಾಗಲಿದೆ. ಕಾರಣಾಂತರದಿಂದ ಥಿಯೇಟರ್ಗಳಲ್ಲಿ ಸಿನಿಮಾ ನೋಡುವುದನ್ನ ಮಿಸ್ ಮಾಡಿಕೊಂಡ ಅಭಿಮಾನಿಗಳು ಇದೀಗ ಮನೆಯಲ್ಲಿಯೇ ಕುಳಿತು ಸಿನಿಮಾ ನೋಡಬಹುದು.
ಪ್ರೈಮ್ ವಿಡಿಯೋ ತಮ್ಮ ಅಫಿಶಿಯಲ್ ಇನ್ಸ್ಟಾಗ್ರಾಮ್ನಲ್ಲಿ, ಅಪೋಕ್ಯಾಲಿಪ್ಸ್ ನಂತರದ ಜಗತ್ತಿನಲ್ಲಿ ಹಿಂದೂ ಪುರಾಣಗಳಿಂದ ಪ್ರೇರಿತವಾದ ಚಿತ್ರದ ಪೋಸ್ಟರ್ ಅನ್ನು ಹಂಚಿಕೊಂಡಿದ್ದು, “ಹೊಸ ಯುಗದ ಉದಯವು ನಿಮಗಾಗಿ ಕಾಯುತ್ತಿದೆ. ಮತ್ತು ಇದು ಕಲ್ಕಿಯ ಭವ್ಯ ಪ್ರಪಂಚಕ್ಕೆ ನಿಮ್ಮ ಗೇಟ್‌ವೇ… ಕಲ್ಕಿ 2898 AD ಪ್ರೈಮ್‌ನಲ್ಲಿ… ಆಗಸ್ಟ್ 22.”ಎಂದು ಶೀರ್ಷಿಕೆಯನ್ನ ನೀಡಿದೆ. ಅಷ್ಟೇ ಅಲ್ಲದೆ ಪ್ಯಾನ್ ಇಂಡಿಯಾ ಸ್ಟಾರ್ ನಟನೆಯ ಸಿನಿಮಾ ಕಲ್ಕಿ 2898 AD ಕೊನೆಗೂ ಪ್ರೈಮ್ ವಿಡಿಯೋದಲ್ಲಿ ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡದಂತಹ ಹಲವಾರು ಭಾರತೀಯ ಭಾಷೆಗಳಲ್ಲಿ ಸ್ಟ್ರೀಮ್ ಮಾಡಲಿದೆ. ಜೊತೆಗೆ ಅದೇ ದಿನ, ಆಗಸ್ಟ್ 22 ರಂದು ಹಿಂದಿ ವರ್ಷನ್ನಲ್ಲಿ ನೆಟ್‌ಫ್ಲಿಕ್ಸ್‌ನಲ್ಲೂ ಬಿಡುಗಡೆಯಾಗಲಿದೆ.
ಈ ಸಿನಿಮಾ ಡೈಸ್ಟೊಪಿಯನ್ ಫ್ಯೂಚರ್ ಕಥೆ ಹೊಂದಿದೆ. ಅಂದರೆ, ಮಹಾಭಾರತದಲ್ಲಿ ಕುರುಕ್ಷೇತ್ರ ಯುದ್ಧ ಸಂಭವಿಸಿದ 6 ಸಾವಿರ ವರ್ಷಗಳ ಬಳಿಕ ಏನಾಗಲಿದೆ ಎಂಬ ಭವಿಷ್ಯದ ದೃಷ್ಟಿಕೋನವನ್ನು ಈ ಸಿನಿಮಾ ಹೊಂದಿದೆ. ಕ್ರಿಸ್ತ ಶಕ 2898ರಲ್ಲಿ ಕಾಶಿ ಮಾತ್ರ ಉಳಿಯಲಿದ್ದು, ಅಲ್ಲಿನ ಜನರು ಅಲ್ಲಿ ಬದುಕಲಾಗದೆ ಪರಿತಪಿಸುವಂತಹ ಮತ್ತು ಕಾಂಪ್ಲೆಕ್ಸ್ ಎಂಬ ಕೃತಕ ಜಗತ್ತಿನಲ್ಲಿ ವಾಸಿಸಲು ಬಯಸುವಂತಹ ಚಿತ್ರಣವನ್ನ ತೋರಿಸಲಾಗಿದೆ. ವೈಜಯಂತಿ ಮೂವೀಸ್ ನಿರ್ಮಿಸಿದ ಸಿನಿಮಾವಾದ ಕಲ್ಕಿ, ವಿಶ್ವಾದ್ಯಂತ 1000 ಕೋಟಿ ರೂಪಾಯಿಯ ಮೈಲಿಗಲ್ಲನ್ನ ಮುಟ್ಟಿದ ಇತ್ತೀಚೆಗಿನ ಭಾರತೀಯ ಸಿನಿಮಾವಾಗಿದೆ.
*ಸ್ವಾತಿ.ಎಸ್.