Sagara News : ಎಲ್ಲಾ ದೇವಾಲಯದಲ್ಲೂ ಹುಂಡಿ ಇರುತ್ತೆ. ಆದ್ರೆ ಇಲ್ಲಿ ದೇಗುಲದ ಒಳಗೆ ಹುಂಡಿ ಇಲ್ಲ. ದೇಗುಲದ ಹೊರಗಿರೋ ಹುಂಡಿ ಇದು. ಇದರಲ್ಲಿ ಕಾಸು ಹಾಕೋದಿಲ್ಲ, ದೇವರನ್ನೇ ಹಾಕುತ್ತಾರೆ. ಇದೇನು ಆಶ್ಚರ್ಯ ಅಂತೀರಾ ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್……
ಶಿವಮೊಗ್ಗದ ಆನಂದಸಾಗರ ಟ್ರಸ್ಟ್ 5 ವರ್ಷದಿಂದ ಜನಸೇವೆಯಲ್ಲಿ ತೊಡಗಿಕೊಂಡಿದೆ. ಸಾಗರದ ಸುತ್ತಮುತ್ತಲಿನ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಹೆಜ್ಜೆ ಹಾಕುತ್ತಿದೆ. ಈ ಪುಟ್ಟ ಟ್ರಸ್ಟ್‍ಗೆ ದೇವರ ಮೂರ್ತಿಗಳನ್ನು ಜನ ಎಲ್ಲೆಂದರಲ್ಲಿ ಬಿಸಾಡುವುದು, ದೇಗುಲದ ಕಟ್ಟೆಗೆ, ಅಶ್ವತ್ಥ ಮರದಡಿಗೆ ತಂಡಿದುವುದು ನೋಡಿ ಬೇಸರವಾಗಿತ್ತು.
ದೇವರನ್ನು ಈ ರೀತಿ ಹಾಕುವುದರಿಂದ ಪರಿಸರವೂ ಹಾಳು, ನಗರದ ಸೌಂದರ್ಯವೂ ಹಾಳು. ಮೇಲಾಗಿ ವರ್ಷಾನುಗಟ್ಟಲೇ ಪೂಜಿಸಿದ ಮೂರ್ತಿಗಳನ್ನು ನಿರ್ಭಾವುಕರಾಗಿ ಜನರು ಎಸೆದು ಬರುವುದು ನೋವಿನ ಸಂಗತಿಯಾಗಿತ್ತು. ಅದಕ್ಕೆ ಟ್ರಸ್ಟ್ ಈ ದೇವರ ಹುಂಡಿಯನ್ನು ಶುರು ಮಾಡಿದೆ.
ಈ ಕಬ್ಬಿಣದ ಡಬ್ಬಿಯು ಐವತ್ತು ಸಣ್ಣ ಫೋಟೋ ಅಥವಾ 20 ದೊಡ್ಡ ಫೋಟೋ ತುಂಬಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಅದನ್ನ ತಂಡದವರು ವಾರಕ್ಕೊಮ್ಮೆ ವಿಲೇವಾರಿ ಮಾಡುತ್ತಾರೆ. ಯಾವುದ್ಯಾವುದು ವಸ್ತುಗಳು ರಿಸೈಕಲ್ ಆಗಬಹುದೋ ಅದನ್ನೆಲ್ಲಾ ನಗರಸಭೆಗೆ ಕೊಡುತ್ತಾರೆ ಉಳಿದ ತ್ಯಾಜ್ಯವನ್ನು ಪೂಜೆ ಮಾಡಿ ಅಗ್ನಿಗೆ ಆಹುತಿ ಕೊಡುತ್ತಾರೆ.
Police station;ಈ ಹಿಂದೆ ಪೊಲೀಸ್ ವಾಹನಗಳಿಗೆ ಕಲ್ಲು ಹೊಡೆದಿದ್ರು ಈಗ ಬೆಂಕಿ ಹಚ್ಚುತ್ತಾರೆ ;ಟೆಂಗಿನಕಾಯಿ..!
ಹಳೇ ಹುಬ್ಬಳ್ಳಿ ಗಲಾಟೆ ಪ್ರಕರಣ ಕೈ ಬಿಡುವಂತೆ ಪ್ರಭಾವಿ ಸಚಿವರ ಪತ್ರ..!