ನಾಳೆಯಿಂದ ರಾಜ್ಯದ ಪ್ರಮುಖ ದೇವಾಲಯಗಳು ತೆರೆಯಲಿದ್ದು, ಹಲವು ಷರತ್ತುಗಳು ಅನ್ವಯವಾಗಲಿದೆ.
ಮಂತ್ರಾಲಯದ ರಾಯರ ಮಠ, ಧರ್ಮಸ್ಥಳ ದೇವಸ್ಥಾನ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ, ಕೂಡಲಸಂಗಮ, ಬಾದಾಮಿ ಬನಶಂಕರಿ ದೇವಸ್ಥಾನ ಸೇರಿ ರಾಜ್ಯದ ಪ್ರಮುಖ ದೇವಸ್ಥಾನಗಳು ನಾಳೆ ತೆರೆಯಲಿದೆ.
ಇನ್ನು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ದೇವಾಲಯದ ಅನ್ನಪೂರ್ಣ ಭೋಜನಾಲಯದಲ್ಲಿ ಅನ್ನ ಸಂತರ್ಪಣೆ ಇರುತ್ತದೆ. ಆದ್ರೆ ಸಾಮಾಜಿಕ ಅಂತರ ಕಾಯ್ದುಕೊಂಡು ಅನ್ನ ಪ್ರಸಾದ ಸ್ವೀಕರಿಸಬೇಕು.
ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಕೂಡ ನಾಳೆ ತೆರೆಯಲಿದ್ದು, ವಿಶೇಷ ಸೇವೆಗಳಿಗೆ ಅವಕಾಶವಿರುವುದಿಲ್ಲ. ಬರೀ ದೇವರ ದರ್ಶನ ಮಾಡಲಷ್ಟೇ ದೇವಸ್ಥಾನಕ್ಕೆ ಆಗಮಿಸಬೇಕು.
ದೇವಸ್ಥಾನ ತೆರೆದರೂ ಕೂಡ ಷರತ್ತುಗಳು ಅನ್ವಯವಾಗಲಿದ್ದು,
1.. ಪುಟ್ಟ ಪುಟ್ಟ ಮಕ್ಕಳು, ವಯಸ್ಸಾದ ವೃದ್ಧರನ್ನ ದೇವಸ್ಥಾನಕ್ಕೆ ಕರೆತರುವಂತಿಲ್ಲ.
2.. ದೇವಸ್ಥಾನದಲ್ಲಿ ವಿಶೇಷ ಸೇವೆ ಸಲ್ಲಿಸಲು ಅವಕಾಶವಿರುವುದಿಲ್ಲ.
3.. ತೀರ್ಥ, ಪ್ರಸಾದ ವಿತರಣೆ ಮಾಡುವುದಿಲ್ಲ.
4.. ಗಂಟೆ ಬಾರಿಸುವಂತಿಲ್ಲ.
5.. ಸಾಮೂಹಿಕ ಪ್ರಾರ್ಥನೆ ಸಲ್ಲಿಸುವಂತಿಲ್ಲ.
6.. ರೆಕಾರ್ಡ್ ಮಾಡಿರುವ ಹಾಡಗಳನ್ನ ಪ್ರಸಾರ ಮಾಡಬೇಕು.

7.. ಪ್ರವೇಶಕ್ಕೆ, ನಿರ್ಗಮನಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗುವುದು.
8.. ಭಕ್ತರಿಗೆ ಸ್ಯಾನಿಟೈಸರ್ ವ್ಯವಸ್ಥೆ ಮಾಡಬೇಕು.
9.. ಮೂರ್ತಿ, ಗೋಡೆ ಮುಟ್ಟಿ ನಮಸ್ಕಾರ ಮಾಡುವಂತಿಲ್ಲ.
10.. ಊಟದ ಹಾಲ್‌ನಲ್ಲಿ ಅಂತರ ಕಾಯ್ದುಕೊಳ್ಳಬೇಕಾಗುವುದು.
11.. ರೋಗದ ಲಕ್ಷಣವಿಲ್ಲದವರಿಗೆ ಮಾತ್ರ ದೇವಸ್ಥಾನದಲ್ಲಿ ಪ್ರವೇಶಕ್ಕೆ ಅವಕಾಶವಿರುತ್ತದೆ.
12.. ದೇವಸ್ಥಾನದ ಆಡಳಿತ ಮಂಡಳಿಯಿಂದ ಭಕ್ತರಿಗೆ ವಸತಿ ಉಳಿಯಲು ಅವಕಾಶವಿರುವುದಿಲ್ಲ. ದೇವಸ್ಥಾನಕ್ಕೆ ಬಂದ ದಿನವೇ ದೇವರ ದರ್ಶನ ಮಾಡಿ ಹಿಂದಿರುಗಬೇಕು.
13.. ಜೊತೆಗೆ ಮಾಸ್ಕ್, ಸ್ಯಾನಿಟೈಸರ್ ಕಡ್ಡಾಯವಾಗುತ್ತದೆ.
ನಾಳೆ ಯಾವ ದೇವಸ್ಥಾನಗಳು ತೆರೆಯಲಿದೆಯೋ ಆ ಎಲ್ಲ ದೇವಸ್ಥಾನಗಳಲ್ಲಿ ಈ ಎಲ್ಲ ಷರತ್ತು ಅನ್ವಯವಾಗಲಿದ್ದು, ಭಕ್ತರು ದೇವರ ದರ್ಶನ ಮಾಡಿಕೊಂಡು ಹಿಂದಿರುಗಬೇಕು.