Sunday, October 5, 2025

Latest Posts

ತುಮಕೂರು ಬಳಿ ಭೀಕರ ಅಪಘಾತ – ಮೂವರು ಸ್ಥಳದಲ್ಲೇ ಸಾವು!

- Advertisement -

ತುಮಕೂರು ತಾಲ್ಲೂಕಿನ ಬೆಳಧರ ಗೇಟ್ ಬಳಿ ಖಾಸಗಿ ಬಸ್ ಹಾಗೂ ಕಾರಿನ ನಡುವೆ ಭೀಕರ ಮುಖಾಮುಖಿ ಅಪಘಾತ ಸಂಭವಿಸಿದೆ. ಕಾರಿನಲ್ಲಿ ಇದ್ದ ಐವರ ಪೈಕಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರು ಧರ್ಮಸ್ಥಳಕ್ಕೆ ಹೋಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.

ಕಾರಿನಲ್ಲಿದ್ದ ಮೃತರಾದವರು ಕೊರಟಗೆರೆ ತಾಲ್ಲೂಕಿನವರು. ಕತ್ತಿನಾಗೇನಹಳ್ಳಿಯ ಶಿವಕುಮಾರ್ (28), ಬೈಚಾಪುರದ ಶಿವಶಂಕರ್ (28), ಹಾಗೂ ಗೋವಿಂದಪ್ಪ (60) ಎಂಬವರು ದುರ್ಘಟನೆಯಲ್ಲಿಯೇ ಸಾವನ್ನಪ್ಪಿದ್ದಾರೆ. ಗಾಯಗೊಂಡ ಶಂಕರ್ (ರೆಡ್ಡಿಹಳ್ಳಿ) ಮತ್ತು ವೇಣುಗೋಪಾಲ್ (ಕತ್ತಿನಾಗೇನಹಳ್ಳಿ) ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತದ ನಂತರ ಬಸ್ ಚಾಲಕ ಪರಾರಿ ಆಗಿದ್ದು, ತುಮಕೂರು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಪ್ರಕರಣ ಸಂಬಂಧ ಕಾನೂನು ಕ್ರಮ ಆರಂಭಿಸಲಾಗಿದೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss