Hubli News: ಹುಬ್ಬಳ್ಳಿ: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಕಮ್ಯೂನಿಯಲ್ ಶಬ್ದಕ್ಕೆ ತುಂಬಾ ಅರ್ಥ ಬಂದಿದೆ. ಕಾಂಗ್ರೆಸ್ ಬಂದಾಗೆಲ್ಲಾ ಭಯೋತ್ಪಾದಕ ಮನಸ್ಸುಳ್ಳವರಿಗೆ ಭಯವೇ ಇರಲ್ಲ ಎಂದು ಹುಬ್ಬಳ್ಳಿಯಲ್ಲಿ ಬಿಜೆಪಿ ಶಾಸಕ ಮಹೇಶ ತೆಂಗಿನಕಾಯಿ ಕಿಡಿಕಾರಿದರು.
ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ್ರೇ ಭಯೋತ್ಪಾದಕ ಮನಸ್ಸುಗಳಿಗೆ ಕಾನೂನು ಭಯ ಇರಲ್ಲ. ಪಂಜರದ ಗಿಳಿ ಹೊರಗೆ ಬಿಟ್ಟರೆ ಹೇಗೆ ಹಾರಾಡುತ್ತೋ ಹಾಗೇ ಕೋಮುವಾದಿಗಳು, ಭಯೋತ್ಪಾದಕರು ಹಾರಾಟ ನಡೆಯುತ್ತದೆ. ಮೊನ್ನೆ ನಾಗಮಂಗಲ, ದಕ್ಷಿಣ ಕನ್ನಡ ಜಿಲ್ಲೆ ಕಳೆದ ದಿನ ದಾವಣಗೆರೆ. ಈ ಹಿಂದೆ ಹಳೇ ಹುಬ್ಬಳ್ಳಿಯಲ್ಲಿ ಗಲಾಟೆ ಮಾಡಿದ್ದವರ ವಿರುದ್ಧ ಅಂದು ನಮ್ಮ ಸರ್ಕಾರ ಕಠಿಣ ಕ್ರಮ ಜಾರಿ ಮಾಡಿತ್ತು. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೊದಲು ಮಾಡಿದ್ದು ಏನು..? ಎಂದು ಅವರು ಪ್ರಶ್ನಿಸಿದರು.
ಹಳೇ ಹುಬ್ಬಳ್ಳಿ ಗಲಾಟೆ ಕೋರರನ್ನು ಬಿಡಿಸುವ ಕೆಲಸ ಮಾಡಿತ್ತು. ಈ ಸರ್ಕಾರ ಪೊಲೀಸರಿಗೆ ಫ್ರೀ ಹ್ಯಾಂಡ್ ನೀಡುವುದಿಲ್ಲ. ಪ್ರೀ ಹ್ಯಾಂಡ್ ನೀಡಿದ್ದರೆ ಕೋಮುವಾದಿಗಳು ಭಯೋತ್ಪಾದಕರಿಗೆ ನಮ್ಮ ಪೊಲೀಸ್ ಬುದ್ದಿ ಕಲ್ಲಿಸುತ್ತಾರೆ. ಈ ಸರ್ಕಾರದ ಅಲ್ಪಸಂಖ್ಯಾತರ ತುಷ್ಟೀಕರಣ ನೀತಿಯಿಂದಾಗಿ ಗಲಾಟೆ ಗಲಭೆಗಳು ಹೆಚ್ಚಾಗುತ್ತವೆ. ತುಷ್ಟೀಕರ ಹೀಗೆ ಮುಂದವರೆದ್ರೆ ಇನ್ನೂ ಮುಂದೆ ಈ ರೀತಿಯ ಗಲಾಟೆ ಗಲಭೆಗಳು ಹೆಚ್ಚಾಗುತ್ತವೆ. ರಾಜ್ಯದಲ್ಲಿ ಗಲಭೆ ಗಲಾಟೆಗಳು ಸಾಮನ್ಯವಾಗುವುದಕ್ಕೆ ಸರ್ಕಾರದ ವೈಫಲ್ಯವೇ ಕಾರಣ. ಗೃಹ ಸಚಿವರಿಗೆ ಗಲಭೆ ಗಲಾಟೆಗೆ ನಡೆದರೆ ಆಕಸ್ಮಿಕ ಅನ್ನೋದು ಬಿಟ್ಟರೆ ಬೇರೆ ಏನು ಗೊತ್ತಿಲ್ಲ ಎಂದು ಲೇವಡಿ ಮಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ಮೇಲೆ ಕಾನೂನು ಸುವ್ಯವಸ್ಥೆ ಹದಗೆಟ್ಟ ಹೈದರಾಬಾದ್ ಆಗಿದೆ. ಪ್ಯಾಲಿಸ್ಟೈನ್ ಧ್ವಜ್ ಹಾರಿಸಿದ್ರಲ್ಲಿ ತಪ್ಪೇನಿದೆ ಎಂಬ ಸಚಿವ ಜಮೀರ ಅಹ್ಮದ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಜಮೀರ ಅಹ್ಮದ ಅವರು ಮೊದಲು ಯಾವುದು ತಪ್ಪು ಯಾವುದು ಸರಿ ಅಂತ ತಿಳಿದುಕೊಳ್ಳಲಿ. ವಿಧಾನ ಸೌಧದಲ್ಲಿ ಪಾಕಿಸ್ತಾನಜಿಂದಾಬಾದ್ ಅಂದಾಗ ಇದೇ ಕಾಂಗ್ರೆಸನವರು ಹಾಗಂದಿಲ್ಲ ಅಂದಿದ್ದರು. ಭಾರತದಲ್ಲಿ ಪಾಕಿಸ್ತಾನ ಧ್ವಜ ಹಿಡಿದು ಓಡಾಡುವ ಅವಶ್ಯ ಏನಿದೆ. ಧರ್ಮಾಚರಣೆಯಲ್ಲಿ ಧರ್ಮದ ಹಿಡಿದು ಓಡಾಡಲಿ. ಅದು ಬಿಟ್ಡು ಪಾಕಿಸ್ತಾನ ಧ್ವಜ ಹಿಡಿದು ಓಡಾಡುವುದರ ಹಿಂದಿನ ಉದ್ದೇಶ ಏನು..?ದೇಶದಲ್ಲಿ ಪಾಕಿಸ್ತಾನ ಧ್ವಜಹಿಡಿದು ಓಡಾಡಿದ್ರೆ ಅದೂ ದೇಶದ್ರೋಹ ಘಟನೆಯಾಗುತ್ತೆ. ಯಾವ ದೇಶದ ಜತೆ ನಾವು ಹೇಗಿರಬೇಕು ಅಂತಾ ನಮ್ಮ ವಿದೇಶಾಂಗ ನೀತಿ ಇದೆ. ಜಮ್ಮಿರ ಅಹ್ಮದ್ ಅವರ ಜವಾಬ್ದಾರಿಯುತವಾಗಿ ಹೇಳಿಕೆ ನೀಡಬೇಕು. ಈ ರೀತಿ ಬೇಜವಾಬ್ದರಿ ಹೇಳಿಕೆ ನೀಡುವುದನ್ನು ಜಮ್ಮೀರ ನಿಲ್ಲಿಸಲಿ ಎಂದು ಅವರು ಹೇಳಿದರು.