- Advertisement -
Sullia News : ವಿದೇಶದಲ್ಲಿಯೇ ಕುಳಿತುಕೊಂಡು ಪತ್ನಿಗೆ ತ್ರಿವಳಿ ತಲಾಕ್ ನೀಡಿದ ಘಟನೆ ಸುಳ್ಯದ ಜಯನಗರದ ಬಳಿ ನಡೆದಿದೆ.
ಕೇರಳ ಮೂಲದ ಕೇರಳದ ತ್ರಿಶೂರ್ ನಿವಾಸಿ ರಾಶಿದ್ ಎಂಬಾತ ಏಳು ವರ್ಷಗಳ ಹಿಂದೆ ಸುಳ್ಯ ಜಯನಗರ ನಿವಾಸಿಯನ್ನು ವಿವಾಹವಾಗಿ ಅವರಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಒಂದು ವರ್ಷದ ಹಿಂದೆ ಪತ್ನಿಯನ್ನು ರಾಶಿದ್ ವಿದೇಶಕ್ಕೆ ಕರೆಯಿಸಿಕೊಂಡಿದ್ದನು. ನಂತರ ಎರಡನೇ ಮಗುವಿನ ಹೆರಿಗೆಗಾಗಿ ಸುಳ್ಯದ ತವರು ಮನೆಗೆ ಕಳುಹಿಸಿದ್ದನು.
ತದನಂತರ ಸಂಸಾರದ ಭಿನ್ನಹವನ್ನು ಹಿರಿಯರಿದ್ದು ಬಗೆ ಹರಿಸಿದ್ದಾರೆ. ಆದರೆ ಇದೀಗ ವಿದೇಶಕ್ಕೆ ಆಗಮಿಸಿದ ನಂತರ ರಾಶಿದ್ ವಾಟ್ಸಾಪ್ ನಲ್ಲಿ ಪತ್ನಿಗೆ ತಲಾಕ್ ತಲಾಕ್ ತಲಾಕ್ ಎಂದು 3 ಬಾರಿ ಸಂದೇಶ ಕಳುಹಿಸಿದ್ದಾನೆ. ಇದರಿಂದ ಗಾಬರಿಗೊಂಡ ಪತ್ನಿ ಇದೀಗ ಪೊಲೀಸ್ ಠಾಣಾ ಮೆಟ್ಟಿಲೇರಿದ್ದಾಳೆ. ಸುಳ್ಯಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -