ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ನಟಿ ರಮ್ಯಾ ಬಗ್ಗೆ ವದಂತಿಗಳು ಕೇಳಿಬರ್ತಾಯಿವೆ. ಈ ಎಲ್ಲ ವದಂತಿಗಳ ಕುರಿತು ನಟಿ ರಮ್ಯಾ ಕೊನೆಗೂ ಮೌನ ಮುರಿದು ಸ್ಪಷ್ಟನೆ ನೀಡಿದ್ದಾರೆ. ನಾನು ಮದುವೆಯಾದರೆ, ಅದನ್ನು ನಾನೇ ತಿಳಿಸುತ್ತೇನೆ ಎಂದು ಸಾಮಾಜಿಕ ಜಾಲತಾಣಗಳಲ್ಲಿರುವ ಗಾಸಿಪ್‌ಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗಷ್ಟೇ ನಟಿ ರಮ್ಯಾ ಅಮೆರಿಕ ಪ್ರವಾಸದಲ್ಲಿದ್ರು. ನಟ ವಿನಯ್ ರಾಜ್‌ಕುಮಾರ್ ಹಾಗೂ ಪುನೀತ್ ರಾಜ್‌ಕುಮಾರ್ ಪುತ್ರಿ ವಂದಿತಾ ಅವರೊಂದಿಗೆ ತೆಗೆದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ಇದರಲ್ಲಿ ಹೆಚ್ಚಾಗಿ ವಿನಯ್ ಜತೆಗಿನ ಫೋಟೋಗಳು ಇದ್ದವು. ಈ ಹಿನ್ನೆಲೆಯಲ್ಲಿ ವಿನಯ್ ಮತ್ತು ರಮ್ಯಾ ನಡುವೆ ಪ್ರೀತಿ ಇರಬಹುದು. ಇಬ್ಬರೂ ಮದುವೆಯಾಗುತ್ತಿದ್ದಾರೆ. ಲಿವ್ ಇನ್ ರಿಲೇಶನ್‌ಶಿಪ್ ಇದ್ದಾರೆ. ರಮ್ಯಾ ದೊಡ್ಮನೆ ಸೊಸೆಯಾಗ್ತಾರಾ? ಹೀಗೆ ಹತ್ತು ಹಲವು ಕಾಮೆಂಟ್‌ಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಾಯಿದ್ವು.
ಈ ಎಲ್ಲಾ ವದಂತಿಗಳಿಗೆ ರಮ್ಯಾ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. ವಿನಯ್ ನನ್ನ ತಮ್ಮನಂತೆ. ನಿಮ್ಮ ಕಲ್ಪನೆಗೂ ಒಂದು ಮಿತಿ ಇರಲಿ ಎಂದು ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದಾರೆ. ನಾನು ಡೇಟಿಂಗ್ ಮಾಡುತ್ತಿದ್ದರೆ ಅಥವಾ ಮದುವೆಯಾಗುತ್ತಿದ್ದರೆ ಅದನ್ನು ನಾನೇ ನಿಮಗೆ ತಿಳಿಸುತ್ತೇನೆ. ನನ್ನ ಇನ್‌ಸ್ಟಾಗ್ರಾಮ್‌ನಲ್ಲಿ ನನಗೆ ಇಷ್ಟವಾದ ವಿಷಯಗಳನ್ನು ಹಂಚಿಕೊಳ್ಳುವ ಸ್ವಾತಂತ್ರ್ಯ ನನ್ನದ್ದಾಗಿದೆ.
ದಯವಿಟ್ಟು ನಿರ್ಣಯಿಸುವುದನ್ನು ನಿಲ್ಲಿಸಿ, ವಿಶೇಷವಾಗಿ ಮಹಿಳೆಯರ ಬಗ್ಗೆ. ನಾನು ಪುರುಷ ಸ್ನೇಹಿತರೊಂದಿಗೆ ಫೋಟೋಗಳನ್ನು ಹಂಚಿಕೊಂಡರೆ ಅದನ್ನೇ ಮದುವೆ ಅಥವಾ ಡೇಟಿಂಗ್ ಎಂದು ಊಹಿಸುವ ಮನಸ್ಥಿತಿಯಿಂದ ಹೊರಬನ್ನಿ ಅಂತ ಇನ್‌ಸ್ಟಾಗ್ರಾಮ್ ಸ್ಟೋರಿಯೊಂದರಲ್ಲಿ ಹೀಗೆ ರಮ್ಯಾ ಬರೆದುಕೊಂಡಿದ್ದಾರೆ
ಗಾಸಿಪ್‌ಗೊಳಿಸುವ ಬದಲು, ಸ್ನೇಹದ ಶುದ್ಧತೆಯನ್ನು ಮನಗಂಡು ಮೆಚ್ಚಿಕೊಳ್ಳುವ ಮನೋಭಾವ ಸಾಕಷ್ಟು ಮಂದಿಯಲ್ಲಿ ಕಾಣಿಸಿಕೊಳ್ಳಬೇಕು ಎಂಬುದನ್ನು ರಮ್ಯಾ ತಮ್ಮ ಪೋಸ್ಟ್‌ಗಳಲ್ಲಿ ಸೂಚಿಸಿದ್ದಾರೆ.
ವರದಿ : ಲಾವಣ್ಯ ಅನಿಗೋಳ