Sunday, October 5, 2025

Latest Posts

“JDS-BJP ಮೈತ್ರಿ ಮುಂದುವರಿಕೆ”

- Advertisement -

ಬಿಜೆಪಿ-ಜೆಡಿಎಸ್ ಮೈತ್ರಿ ಕುರಿತು, ಜೆಡಿಎಸ್‌ ವರಿಷ್ಠ, ಮಾಜಿ ಪ್ರಧಾನಮಂತ್ರಿ ಹೆಚ್‌.ಡಿ. ದೇವೇಗೌಡ್ರು ಮಹತ್ವದ ಕ್ಲಾರಿಟಿ ಕೊಟ್ಟಿದ್ದಾರೆ. ಬೆಂಗಳೂರಿನ ಸುದ್ದಿಗೋಷ್ಠಿಯಲ್ಲಿ, ಹರಿದಾಡ್ತಿದ್ದ ಊಹಾಪೋಹಗಳಿಗೆಲ್ಲಾ ತೆರೆ ಎಳೆದಿದ್ದಾರೆ.

ಯಾವುದೇ ಚುನಾವಣೆಯಾದರೂ ಮೈತ್ರಿ ಮುಂದುವರಿಯುತ್ತದೆ. ಮೈತ್ರಿಕೂಟದ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಪಂಚಾಯಿತಿ ಮತ್ತು ವಿಧಾನಸಭಾ ಚುನಾವಣೆಗಳಿಗೂ ಬಿಜೆಪಿ-ಜೆಡಿಎಸ್‌ ಮೈತ್ರಿ ಮುಂದುವರಿಯಲಿದೆ ಎಂದು ಹೇಳಿದ್ರು.

ನನಗೆ ಕಾಲಿನ ನೋವು ಬಿಟ್ಟರೆ ಬೇರೆ ಯಾವುದೇ ತೊಂದರೆ ಇಲ್ಲ.
ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಉತ್ತರ ಕರ್ನಾಟಕಕ್ಕೆ ನಾನೇ ಹೋಗ್ತೀನಿ. ಕೆಲವು ಸ್ಥಳಗಳಿಗೆ ಸಾಧ್ಯವಾದ್ರೆ ರಸ್ತೆ ಮಾರ್ಗವಾಗೇ ಹೋಗ್ತೇನೆ. ಪರಿಹಾರ ಎಷ್ಟು ಕೊಟ್ಟಿದ್ದಾರೆ. ಏನೆಲ್ಲಾ ಕ್ರಮಗಳನ್ನು ಕೈಗೊಂಡಿದ್ದಾರೆ. ವಾಸ್ತವ ತಿಳಿದುಕೊಂಡ ಮೇಲೆ ನನ್ನ ಅಭಿಪ್ರಾಯ ಹೇಳುತ್ತೇನೆ.

ಪ್ರಧಾನಮಂತ್ರಿ ಮತ್ತು ಅಮಿತ್‌ ಶಾ ಅವರಿಗೆ, ಕುಮಾರಸ್ವಾಮಿ ಪತ್ರ ಬರೆದಿದ್ದಾರೆ. ಅಗತ್ಯ ಬಿದ್ರೆ ನಾನೂ ಕೂಡ ದೆಹಲಿಗೆ ಹೋಗಿ, ಅವರನ್ನು ಭೇಟಿಯಾಗಿ ಪರಿಹಾರಕ್ಕೆ ಒತ್ತಾಯ ಮಾಡ್ತೀನಿ. ನಾನು ರಾಜಕೀಯ ಮಾಡೋದಕ್ಕೆ ಹೋಗಲ್ಲ. ಕಾಂಗ್ರೆಸ್ಸಿನ ಶಾಸಕರು ಗ್ಯಾರಂಟಿಯ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲು ಹೋಗಿ ರಾಜ್ಯ ಬರಡಾಗಿದೆ. ಹಣಕಾಸು ಸ್ಥಿತಿ ಹದಗೆಟ್ಟಿದೆ. ಇದನ್ನು ಕಾಂಗ್ರೆಸ್ ಶಾಸಕರೇ ಹೇಳುತ್ತಿದ್ದಾರೆ.

ಮುಂಬರುವ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕನಿಷ್ಠ 50ರಿಂದ 60 ಸ್ಥಾನ ಗೆಲ್ಲುವ ಗುರಿಯನ್ನು ಹೊಂದಿದ್ದು, ಈ ನಿಟ್ಟಿನಲ್ಲಿ ಶೀಘ್ರದಲ್ಲೇ ಸಭೆ ನಡೆಸುತ್ತೇವೆ. ಅಕ್ಟೋಬರ್‌ 12ರಂದು ಜೆಡಿಎಸ್‌ ಶಕ್ತಿ ಪ್ರದರ್ಶನ ಮತ್ತು ಅಭಿಯಾನ ಹಮ್ಮಿಕೊಳ್ಳಲಾಗಿದೆ ಅಂತಾ ಹೆಚ್‌ಡಿಡಿ ಹೇಳಿದ್ರು.

- Advertisement -

Latest Posts

Don't Miss