Friday, July 4, 2025

Latest Posts

ಭಾರತೀಯರ ಹೆಗಲೇರಿದ ಸಾಲದ ಹೊರೆ : ಒಬ್ಬೊಬ್ಬರಿಗೆ ಎಷ್ಟು ಗೊತ್ತಾ..?

- Advertisement -

ನವದೆಹಲಿ : ಭಾರತದಲ್ಲಿನ ಪ್ರತಿ ವ್ಯಕ್ತಿಯ ಮೇಲಿನ ಸಾಲದ ಪ್ರಮಾಣವು 4.8 ಲಕ್ಷ ರೂಪಾಯಿಗಳಿಗೆ ಏರಿಕೆಯಾಗಿದೆ. ಆದರೆ ಕಳೆದ 2023ರ ಮಾರ್ಚ್ ತಿಂಗಳಲ್ಲಿ ಒಬ್ಬ ವ್ಯಕ್ತಿಯ ಮೇಲೆ ತಲಾ 3.9 ಲಕ್ಷ ರೂಪಾಯಿಗಳಷ್ಟು ಸಾಲವಿತ್ತು ಈ ವರ್ಷದ ಮಾರ್ಚ್ ತಿಂಗಳ ವೇಳೆಗೆ ಇದು ಶೇಕಡಾ 23 ರಷ್ಟು ಅಧಿಕವಾಗಿದೆ. ಆದರೆ ಆರ್​ಬಿಐ ಬಿಡುಗಡೆ ಮಾಡಿರುವ 2025ರ ಜೂನ್ ತಿಂಗಳ ಆರ್ಥಿಕ ಸ್ಥಿರತೆಯ ವರದಿಯಲ್ಲಿನ ಈ ಅಂಶಗಳು ಜನಸಾಮಾನ್ಯರಲ್ಲಿ ಆತಂಕಕ್ಕೆ ಕಾರಣವಾಗಿವೆ.

ಪ್ರತಿಯೊಬ್ಬ ಭಾರತೀಯನ ಸಾಲವು 4.8 ಲಕ್ಷ ರೂಪಾಯಿಗಳಷ್ಟಿದೆ. ಕಳೆದ 2023ರ ಮಾರ್ಚ್ ತಿಂಗಳಲ್ಲಿ, ಈ ಸಾಲವು 3.9 ಲಕ್ಷ ರೂಪಾಯಿಗಳಷ್ಟಿತ್ತು. ಅದು ಎಷ್ಟು ಅಧಿಕವಾಗಿದೆ ಎಂದು ನಾವಿಲ್ಲಿ ಗಮನಿಸಬಹುದಾಗಿದೆ. ಕಳೆದ ಎರಡು ವರ್ಷಗಳಲ್ಲಿ ಇದು ಶೇಕಡಾ 23 ರಷ್ಟು ಹೆಚ್ಚಾಗಿದೆ. ಅಂದರೆ, ಆಗಿನಿಂದ ಈ ವರ್ಷಕ್ಕೆ, ಪ್ರತಿಯೊಬ್ಬ ಭಾರತೀಯನ ಸಾಲವು 90 ಸಾವಿರ ರೂಪಾಯಿಗಳಷ್ಟಿದೆ.

ಪ್ರಮುಖವಾಗಿ ಇಂದಿನ ದಿನಗಳಲ್ಲಿ ಜನರು ಅವಶ್ಯಕತೆಯನ್ನೂ ಮೀರಿ ಅಧಿಕ ಸಾಲವನ್ನು ಪಡೆಯುತ್ತಿದ್ದಾರೆ. ಗೃಹ, ವೈಯಕ್ತಿಕ ಸಾಲಗಳು, ಕ್ರೆಡಿಟ್ ಕಾರ್ಡ್​ಗಳು ಹಾಗೂ ಇನ್ನಿತರ ಚಿಲ್ಲರೆ ಸಾಲಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಹಾಗಂತ ಸಾಲದ ಗಂಟು ಹೆಚ್ಚಾಗಲು ಇದೊಂದೇ ಕಾರಣ ಅಂತ ಹೇಳಲಾಗದು, ಅಥವಾ ಸಾಲ ತೆಗೆದುಕೊಂಡವರು ಅದನ್ನು ಪಾವತಿಸುತ್ತಾರೋ? ಇಲ್ಲವೋ ಪ್ರಶ್ನೆಗಳ ನಡುವೆಯೇ ಸಾಲದ ಮರು ಪಾವತಿಯ ಕುರಿತು ಸಮತೋಲನ ಕಾಪಾಡಿಕೊಳ್ಳುವುದು ಮುಖ್ಯವಾಗಿದೆ. ಹೀಗಾಗಿ ತಾವು ಪಡೆದ ಸಾಲವನ್ನು ವಾಪಸ್ ಭರಿಸಲು ಸಮರ್ಥರಾಗಿದ್ದಾರೆ ಎನ್ನುವ ವಿಚಾರ ಗಮನಾರ್ಹ.

ಕಳೆದ 10 ವರ್ಷಗಳಲ್ಲಿ ಭಾರತದ ಆರ್ಥಿಕತೆಯು ಶೇಕಡಾ 105 ರಷ್ಟು ಬೆಳೆದಿದೆ. ಭಾರತದ ಆರ್ಥಿಕತೆಯು ತುಂಬಾ ವೇಗವಾಗಿ ಬೆಳೆಯುತ್ತಿದೆ. ಇದು ಇತರ ದೇಶಗಳಿಗಿಂತ ಹೆಚ್ಚಾಗಿದೆ. ಮಾರ್ಚ್ 2025 ರವರೆಗೆ ಭಾರತವು 736.3 ಬಿಲಿಯನ್ ಡಾಲರ್‌ಗಳಷ್ಟು ಹೊರಗಿನ ಸಾಲವನ್ನು ಹೊಂದಿದೆ. ಭಾರತವು ತನ್ನ ವಿಭಿನ್ನ ನೀತಿಗಳು ಮತ್ತು ಇತರ ಕಾರ್ಯಗಳಿಗಾಗಿ ಈ ಸಾಲವನ್ನು ಪಡೆದುಕೊಂಡಿದೆ. ಸರಳೀಕರಿಸಿ ಹೇಳುವುದಾದರೆ, ದೇಶವು ಇತರ ದೇಶಗಳಿಂದ ಸಾಲವನ್ನು ಪಡೆಯುತ್ತದೆ. ಅದು ಈ ಹಣವನ್ನು ತನ್ನ ದೇಶದ ಅಭಿವೃದ್ಧಿಯಲ್ಲಿ ಹೂಡಿಕೆ ಮಾಡುತ್ತದೆ. ಭಾರತದ ಮೇಲಿನ ಈ ಸಾಲವು ಜಿಡಿಪಿಯ ಶೇಕಡಾ 19.1 ಆಗಿದೆ.

ಇನ್ನೂ ಇದೇ ವಿಚಾರಕ್ಕೆ ಕಾಂಗ್ರೆಸ್ ಕೇಂದ್ರ ಸರ್ಕಾರದ ವಿರುದ್ದ ಕಿಡಿಕಾರಿದ್ದು, ಕೇಂದ್ರ ಸರ್ಕಾರ ಅಂಕಿ-ಅಂಶಗಳ ಜೊತೆಗೆ, ತಜ್ಞರ ನೆರವಿಂದ ವಾಸ್ತವಾಂಶ ಮರೆಮಾಚಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದೆ. ಮೋದಿ ರಾಜ್‌ನಲ್ಲಿ ಸಾಲದ ಹೊರೆ ಅಧಿಕ ಮಟ್ಟಕ್ಕೆ ತಲುಪಿದೆ. ಈ ಕೇಂದ್ರ ಸರ್ಕಾರ 11 ವರ್ಷಗಳಲ್ಲಿ ದೇಶದ ಆರ್ಥಿಕತೆಯನ್ನ ಸಂಪೂರ್ಣ ಹಾಳುಗೆಡವಿದೆ. ಇದು ಅಚ್ಛೇ ದಿನದ ಸಾಲ ಎಂದು ಪಕ್ಷದ ಹಿರಿಯ ಮುಖಂಡ ಜೈರಾಂ ರಮೇಶ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

- Advertisement -

Latest Posts

Don't Miss