Sunday, October 5, 2025

Latest Posts

ದೊಡ್ಮನೆಲಿ ಶುರುವಾಯ್ತು ಒಂಟಿ vs ಜಂಟಿ!

- Advertisement -

ಕನ್ನಡದ ಬಹು ನಿರೀಕ್ಷಿತ ರಿಯಾಲಿಟಿ ಶೋ ʻಬಿಗ್‌ ಬಾಸ್‌ ಕನ್ನಡ ಸೀಸನ್‌ 12ʼ ಅದ್ಧೂರಿಯಾಗಿ ಚಾಲನೆ ಪಡೆದಿದೆ. ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಈ ಶೋ, ಹೊಸ ಲುಕ್, ಹೊಸ ಫಾರ್ಮ್ಯಾಟ್ ಮತ್ತು ಇನ್ನೋವೇಟಿವ್ ಸೆಟ್ ವಿನ್ಯಾಸದಿಂದ ಈ ಬಾರಿ ಕನ್ನಡಿಗರ ಗಮನ ಸೆಳೆದಿದೆ. ಪ್ರತಿ ಸೀಸನ್‌ಗೂ ವಿಶಿಷ್ಟ ಪ್ರವೇಶ ನೀಡುವ ಸುದೀಪ್, ಈ ಬಾರಿಯೂ ಹೊಸ ಶೈಲಿ ಹಾಗೂ ಹೊಸ ಲುಕ್‌ನಲ್ಲಿ ವೇದಿಕೆಗೆ ಬಂದು ಪ್ರೇಕ್ಷಕರನ್ನು ಮೋಡಿ ಮಾಡಿದ್ದಾರೆ.

ಈ ಬಾರಿ ಬಿಗ್‌ ಬಾಸ್‌ ಮನೆ ಮೈಸೂರು ಅರಮನೆಯ ಥೀಮ್ ಆಧಾರಿತವಾಗಿದೆ. ಅದರ ವೈಭವ, ಶೈಲಿ ಹಾಗೂ ಆಕರ್ಷಣೆಯಿಂದ ಪ್ರೇಕ್ಷಕರನ್ನು ಬೆರಗುಗೊಳಿಸಿದೆ. ಮನೆ ಜೋತೆಗೆ ಕನ್ನಡ ಸಂಸ್ಕೃತಿಯ ಪ್ರತಿಬಿಂಬವನ್ನೂ ಒಳಗೊಂಡಿರುವ ಈ ಥೀಮ್ ವಿಶೇಷವಾಗಿದೆ. ಮೈಸೂರು ದಸರಾ ಪ್ರಾರಂಭವಾಗುತ್ತಿರುವ ಈ ಸಮಯದಲ್ಲಿ ಶೋ ಆರಂಭವಾದುದು ಕೂಡ ವಿಶಿಷ್ಟ ಸಂಬಂಧವನ್ನೇ ರೂಪಿಸಿದೆ.

ಸ್ಪರ್ಧಿಗಳು ಎಂಟ್ರಿ ನೀಡುವುದಕ್ಕೂ ಮುನ್ನ, ಕೆಲ ಕಾಮನ್ ಮ್ಯಾನ್‌ಗಳಿಗೆ ಬಿಗ್‌ ಬಾಸ್‌ ಮನೆಗೆ ಪ್ರವೇಶಿಸಲು ಅವಕಾಶ ನೀಡಲಾಗಿತ್ತು. ಈ ಅವಕಾಶವನ್ನು ಬಳಸಿಕೊಂಡವರು ಮನೆಯ ಒಳಗಿನ ಅಂದ ನೋಡಿದ ಬಳಿಕ ಖುಷಿ ವ್ಯಕ್ತಪಡಿಸಿದರು. ಈ ಹೊಸ ಪ್ರಯೋಗವು ಶೋಗೆ ಹೊಸ ಶೈನ್ ನೀಡಿದೆ.

ಬಿಗ್ ಬಾಸ್ ಸೀಸನ್ 12 ನಲ್ಲಿ ಹೊಸ ರೀತಿಯಲ್ಲಿ ಶುರುವಾಗಿದೆ. ಬಿಗ್ ಬಾಸ್ ಸೀಸನ್ 11 ರಲ್ಲಿ ಸ್ವರ್ಗ ನರಕ ಅನ್ನೋ ಥೀಮ್ ನಲ್ಲಿ ಶುರುವಾಗಿತ್ತು. ಆಡಿಯನ್ಸ್ ವೋಟ್ ಮೂಲಕ ಸ್ವರ್ಗ, ನರಕಕ್ಕೆ ಪ್ರವೇಶ ಪಡೀತಾಯಿದ್ರು. ಅದೇ ರೀತಿ ಬಿಗ್ ಬಾಸ್ ಕನ್ನಡ ಸೀಸನ್ 12 ನಲ್ಲಿ ಒಂಟಿ – ಜಂಟಿ ಅನ್ನೋ ಥೀಮ್ ನಲ್ಲಿ ಶುರುವಾಗಿದೆ.

ಆಡಿಯನ್ಸ್ ವೋಟ್ 75% ಬಂದ್ರೆ ಒಂಟಿಯಾಗಿ ದೊಡ್ಮನೆ ಪ್ರವೇಶ ಪಡೆದುಕೊಳ್ತಾರೆ. ಅದಕ್ಕಿಂತ ಕಡಿಮೆ ಬಂದ್ರೆ ಜಂಟಿಯಾಗಿ ಅಂದ್ರೆ ವೈಟಿಂಗ್ ಲಿಸ್ಟ್ ನಲ್ಲಿ ಉಳಿದುಕೊಳ್ಳುತ್ತಾರೆ. ಈ ರೀತಿಯಾಗಿ ಕಂಟೆಸ್ಟೆಂಟ್ ಗಳು ಒಬ್ಬೊಬ್ಬರಾಗಿ ದೊಡ್ಮನೆಗೆ ಪ್ರವೇಶ ನೀಡುತ್ತಿದ್ದಾರೆ. ಈ ಬಾರಿ ಸ್ಪರ್ಧಿಗಳ ಲೈನ್-ಅಪ್‌ ಕೂಡ ಸಾಕಷ್ಟು ಕುತೂಹಲ ಮೂಡಿಸುತ್ತಿದೆ. ಪ್ರೇಕ್ಷಕರ ನಿರೀಕ್ಷೆಗೆ ತಕ್ಕ ರೀತಿಯ ಎಂಟರ್ಟೈನ್‌ಮೆಂಟ್ ಖಚಿತ ಅಂತಾನೆ ಹೇಳಬಹುದು.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss