Saturday, July 12, 2025

Latest Posts

ಬೈಕ್‌ ಟ್ಯಾಕ್ಸಿ ಹೋಯ್ತು ಬೌನ್ಸ್‌ EV ಬಂತು!

- Advertisement -

ಕರ್ನಾಟಕ ಸಾರಿಗೆ ಇಲಾಖೆ Rapido ಬೈಕ್ ಟ್ಯಾಕ್ಸಿಗೆ ನಿಷೇಧ ಹೇರಿತ್ತು. ಇದಾದ ನಂತರ ಕರ್ನಾಟಕ ಹೈಕೋರ್ಟ್‌ನಲ್ಲಿಯೂ ಬೈಕ್ ಟ್ಯಾಕ್ಸಿ ನಿಷೇಧ ಎತ್ತಿಹಿಡಿಯಲಾಗಿತ್ತು. ಇದರ ಬೆನ್ನಲ್ಲೇ, ಮೂರು‌ ವರ್ಷಗಳ ಹಿಂದೆ ಸ್ಥಗಿತಗೊಂಡಿದ್ದ ಬೌನ್ಸ್ ಸ್ಕೂಟಿಗಳು ಹೊಸ ರೂಪ, ಹೊಸ ನಿಯಮದೊಂದಿಗೆ ಬೆಂಗಳೂರಿನಲ್ಲಿ ಮತ್ತೆ ರಸ್ತೆಗಿಳಿದಿವೆ.

ಬೆಂಗಳೂರಿನಲ್ಲಿ ಒಂದೆಡೆ ಅಗ್ರೀಗೇಟರ್ ಕಂಪನಿಗಳಾದ ಓಲಾ-ಊಬರ್​ಗಳಿಂದ ಹಗಲು ದರೋಡೆ ನಡೆಯುತ್ತಿದೆ. ಮತ್ತೊಂದೆಡೆ ರ್ಯಾಪಿಡೋ ಬೈಕ್ ಟ್ಯಾಕ್ಸಿ ಬಂದ್ ಆಗಿದೆ. ಹೀಗಾಗಿ ಪ್ರತಿನಿತ್ಯ ಸ್ಕೂಟರ್​​ನಲ್ಲಿ ಕೆಲಸ ನಿರ್ವಹಿಸುವ ಜನರಿಗೆ ತೊಂದರೆಯಾಗುತ್ತಿದೆ. ಈ ಮಧ್ಯೆ, ಮೂರು ವರ್ಷದ ಹಿಂದೆ ಸ್ಥಗಿತಗೊಂಡಿದ್ದ ಬೌನ್ಸ್ ಸ್ಕೂಟಿ ಬಾಡಿಗೆ ಸರ್ವೀಸ್ ಮತ್ತೆ ಆರಂಭಿಸಲಾಗಿದೆ. ಕರ್ನಾಟಕ ಸಾರಿಗೆ ಇಲಾಖೆಯ ರೆಂಟ್ ಎ ಮೋಟರ್ ಸೈಕಲ್‌ಸ್ಕೀಮ್ 1987ರ ಅಡಿಯಲ್ಲಿ ಅನುಮತಿ ಪಡೆದು ಈ ಸ್ಕೂಟಿ ಸೇವೆ ನೀಡಲಾಗುತ್ತಿದೆ.

ಸದ್ಯ ಬೆಂಗಳೂರಿನಲ್ಲಿ ಮತ್ತೆ ರಸ್ತೆಗಿಳಿದಿರುವ ಈ ಬಾಡಿಗೆ ಸ್ಕೂಟಿಗಳು ಬೌನ್ಸ್ ಎಲೆಕ್ಟ್ರಿಕ್ ಸ್ಕೂಟಿಗಳಾಗಿದ್ದು, ಮೊದಲ ಹಂತದಲ್ಲಿ ಅಂದರೆ ಫುಡ್ ಡೆಲಿವರಿ, ಕೊರಿಯರ್ ಬಾಯ್ಸ್, ಸೇಲ್ಸ್ ಮ್ಯಾನ್ ಗಳಿಗೆ ರೆಂಟ್ ಕೊಡಲಾಗುತ್ತಿದೆ ಮತ್ತು ಈಗಾಗಲೇ ನಗರದಲ್ಲಿ ಒಂದು ಸಾವಿರ ಸ್ಕೂಟಿಗಳು ರಸ್ತೆಗಿಳಿಯಲು ಸಿದ್ಧವಾಗಿವೆ.

ಇನ್ನು ಒಂದು ದಿನಕ್ಕೆ 240-280 ರಂತೆ ಚಾರ್ಜ್ ಮಾಡಲಾಗುತ್ತಿದೆ. ಕನಿಷ್ಠ ಮೂರು ದಿನಗಳಿಗೆ ಬುಕ್ಕಿಂಗ್ ಮಾಡಬೇಕಾಗುತ್ತದೆ. ನಗರದ ಜೆಪಿ‌ನಗರ, ಹೂಡಿ, ಯಲಹಂಕ, ಆರ್.ಆರ್ ನಗರ, ಹೆಚ್.ಎಸ್.ಆರ್ ಲೇಔಟ್ ಗಳಲ್ಲಿ ಬೌನ್ಸ್ ಎಲೆಕ್ಟ್ರಿಕ್ ಸ್ಕೂಟಿಗಳ ಹಬ್ ಮಾಡಲಾಗಿದೆ.

 

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss