www,karnatakatv.net: ನದಿಯ ನೀರಿನ ಪ್ರವಾಹಕ್ಕೆ ಸಿಲುಕಿದ ಆನೆ ರಕ್ಷಣೆ ಕಾರ್ಯಾಚರಣೆಗೆ ತೆರಳಿದ ಬೋಟ್ ಮಗುಚಿದ ಘಟನೆ ಒಡಿಶ್ಶಾದಲ್ಲಿ ನಡೆದಿದೆ.
ಇಲ್ಲಿನ ಕಟರ್ ಸೇತುವೆ ಬಳಿಯ ಮಹಾನದಿಗೆ ನೀರು ಕುಡಿಯಲು ಬಂದಿದ್ದ ಕಾಡಾನೆಯೊಂದು ನೀರಿನ ಪ್ರವಾಹಕ್ಕೆ ಸಿಲುಕಿ ದಡಕ್ಕೆ ಬರಲು ಪರದಾಡುತ್ತಿತ್ತು. ಆನೆ ರಕ್ಷಣೆಗೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಬೋಟ್ ಮೂಲಕ ಆನೆಯನ್ನ ದಡಕ್ಕೆ ಕರೆತರುವ ಪ್ರಯತ್ನ ಮಾಡಿದ್ರು. ಈ ವೇಳೆ ನೀರಿನ ರಭಸ ಹೆಚ್ಚಾಗಿದ್ದರಿಂದ ಕಾರ್ಯಾಚರಣೆಗಿಳಿದಿದ್ದ ಬೋಟ್ ಮಗುಚಿತು. ಅದೃಷ್ಟವಶಾತ್ ಬೋಟ್ ನಲ್ಲಿದ್ದ ಎಲ್ಲಾ ಅರಣ್ಯ ಸಿಬ್ಬಂದಿ ಈಜಿ ದಡ ಸೇರಿದ್ದಾರೆ. ಈ ವರೆಗೂ ಆನೆಯನ್ನು ದಡಕ್ಕೆ ಕರೆತರುವ ಕಾರ್ಯದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಿರತರಾಗಿದ್ದಾರೆ.
ಕಳೆದ ವರ್ಷವೂ ಕೂಡ ಇದೇ ರೀತಿ 18-20 ಆನೆಗಳ ಹಿಂಡು ಇಲ್ಲಿನ ಘಾಟಾದ ಮಹಾನದಿ ಪ್ರವಾಹಕ್ಕೆ ಸಿಲುಕಿದ್ವು. ಬಳಿಕ ನೀರಿನ ಮಟ್ಟ ತಗ್ಗಿದ ನಂತರ ದಡ ಸೇರಿದ್ದವು.


