ಗುಡಿಸಲು ಮುಕ್ತವಾಗಲಿದೆ ಗಡಿಜಿಲ್ಲೆ

www.karnatakatv.net : ಚಾಮರಾಜನಗರ: ಅಂತರಾಜ್ಯ ಗಡಿ ಚಾಮರಾಜನಗರ ಜಿಲ್ಲೆಯನ್ನು ಗುಡಿಸಲು ಮುಕ್ತ ಜಿಲ್ಲೆಯನ್ನಾಗಿಸಲು ನಿರ್ಧಾರಸಲಾಗಿದೆ ಅಂತ ವಸತಿ ಸಚಿವ ಸೋಮಣ್ಣ ತಿಳಿಸಿದ್ದಾರೆ.

ಈ ಕುರಿತು ಚಾಮರಾಜನಗರದಲ್ಲಿ ಮಾತನಾಡಿದ ಸಚಿವ ಸೋಮಣ್ಣ, ಇಲ್ಲಿನ ಪ್ರವಾಸಿ ಮಂದಿರದಲ್ಲಿ ವಸತಿ ಯೋಜನೆಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ, ದೇಶಕ್ಕೆ ಸ್ವಾತಂತ್ರ‍್ಯ ಬಂದು 75 ವರ್ಷ ಕಳೆದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ  ಸೂಚನೆ ಮೇರೆಗೆ ರಾಜ್ಯದ 750 ಪಂಚಾಯಿತಿಗಳನ್ನು ಆಯ್ಕೆ ಮಾಡುವ ಉದ್ದೇಶದಿಂದ ಅಲ್ಲಿನ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಕೇಳಿದ್ದು ಈ ಬಗ್ಗೆ ಜಿಲ್ಲೆಯಲ್ಲಿರುವ ಬಡವರು , ಅವರಿಗೆ ಅಗತ್ಯವಿರುವ ಮನೆಗಳು , ಅಗತ್ಯ ಇರುವ ನಿವೇಶನಗಳ ಮಾಹಿತಿಯನ್ನು ನೀಡುವಂತೆ ಜಿಲ್ಲಾಧಿಕಾರಿ , ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

ಇನ್ನು ಜಿಲ್ಲೆಯ ಗ್ರಾಮೀಣ ಪ್ರದೇಶಗಳು ಹಾಗೂ ನಗರ ಪ್ರದೇಶಗಳ ವ್ಯಾಪ್ತಿಯಲ್ಲಿರುವ ಬಡವರ ಪಟ್ಟಿಯನ್ನು 15 ದಿನಗಳ ಒಳಗೆ ನೀಡಬೇಕು . ಅಲ್ಲದೇ ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಅನೇಕ ಬಡ ಕುಟುಂಬಗಳು ಮನೆ ಕಟ್ಟಿಕೊಳ್ಳೋದಕ್ಕೆ ಆಗದೆ ಪರದಾಡ್ತಿವೆ. ಪಂಚಾಯಿತಿಗಳಿಗೆ ಅರ್ಜಿ ಹಾಕಿದರೂ ಇನ್ನೂ ಮನೆಗಳು ಸಿಕ್ಕಿರುವುದಿಲ್ಲ . ಅಂತಹ ನಿಜವಾದ ಬಡವರು  ನೆರವಿಗಾಗಿ ಸರ್ಕಾರ ಸಿದ್ಧವಿದೆ. ಈ ನಿಟ್ಟಿನಲ್ಲಿ ಗ್ರಾಮಪಂಚಾಯಿತಿ , ಪಟ್ಟಣ ಪಂಚಾಯಿತಿ , ನಗರಸಭೆ ವ್ಯಾಪ್ತಿಯಲ್ಲಿರುವ ಸೌಲಭ್ಯವಂಚಿತರ ಪಟ್ಟಿ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಅಂತ ಇದೇ ವೇಳೆ ಸೋಮಣ್ಣ ಮಾಹಿತಿ ನೀಡಿದ್ರು. ಗುಡಿಸಲು ಮುಕ್ತ ರಾಜ್ಯ ವನ್ನಾಗಿಸಲು ಸರ್ಕಾರ ಸಿದ್ದ

ಕರ್ನಾಟಕ ಟಿವಿ- ಚಾಮರಾಜನಗರ

About The Author