Sunday, October 5, 2025

Latest Posts

ಬೆಂಗಳೂರಿನಲ್ಲಿ ಜಾತಿಗಣತಿಗೆ ಆರಂಭಿಕ ವಿಘ್ನ!

- Advertisement -

ಬೆಂಗಳೂರಿನಲ್ಲಿ ಜಾತಿ ಗಣತಿ ಶುರುವಾಗಿದ್ದು, ಮೊದಲ ದಿನವೇ ಗೊಂದಲದ ಗೂಡಾಗಿತ್ತು. ಸೆಲೆಕ್ಟ್ ಮಾಡಿದ್ದ ವಾರ್ಡ್ ಬಿಟ್ಟು, ಬೇರೆ ವಾರ್ಡ್‌ಗಳಿಗೆ ಗಣತಿದಾರರನ್ನು ನಿಯೋಜಿಸಲಾಗಿದೆ. 20ರಿಂದ 30 ಕಿಲೋ ಮೀಟರ್ ದೂರ ಇರೋ ಏರಿಯಾಗಳಲ್ಲಿ, ಸಮೀಕ್ಷೆಗೆ ನಿಯೋಜನೆ ಮಾಡಲಾಗಿದೆಯಂತೆ. 200ಕ್ಕೂ ಹೆಚ್ಚು ಸಿಬ್ಬಂದಿಯ ವಾರ್ಡ್ ಅದಲು ಬದಲಾಗಿದೆ.

ಆಪ್‌ನಲ್ಲಿ ಸೆಲೆಕ್ಟ್ ಮಾಡಿದ್ದ ವಾರ್ಡ್‌ಗಳನ್ನ ಬಿಟ್ಟು ಬೇರೆ ವಾರ್ಡ್ ನೀಡಲಾಗಿದೆಯಂತೆ.
ಸ್ಥಳಕ್ಕೆ ಹೋಗೋದ್ರೊಳಗೆ ಸಮಯ ಆಗುತ್ತೆ. ಸಮೀಕ್ಷೆ ಮಾಡೋದೇಗೆ ಅಂತಿರೋ ಸಿಬ್ಬಂದಿ ಪೇಚಿಗೆ ಸಿಲುಕಿದ್ದಾರೆ. ಹೀಗಾಗಿ ಸಮೀಕ್ಷೆಗೆ ತೆರಳದೇ ಕಚೇರಿ ಎದುರೇ ನಿಂತು ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿಮ್ಮ ವಾರ್ಡ್‌ಗಳ ನೋಡಲ್ ಆಫೀಸರ್‌ಗೆ ಮನವಿ ಕೊಡಿ ಸ್ಪಂದಿಸುತ್ತಾರೆ. ಅಲ್ಲಿಯವರೆಗೆ
ಸಮೀಕ್ಷೆಗೆ ಹೋಗಿ ಎಂದು ಜಿಬಿಎ ಅಧಿಕಾರಿ ಹೇಳ್ತಿದ್ದಾರಂತೆ. ಗೊಂದಲ ಬಗೆಹರಿಯದೇ ಸಮೀಕ್ಷೆಗೆ ಹೋಗಲ್ಲ ಅಂತಾ ಗಣತಿದಾರರು ಪಟ್ಟು ಹಿಡಿದಿದ್ದು, ಆಫೀಸರ್‌ ಜೊತೆಯೇ ವಾಗ್ವಾದಕ್ಕಿಳಿದಿದ್ರು.

ವಿಕಲಚೇತನರು, ಮಕ್ಕಳಿರುವ ತಾಯಂದಿರು, ಗರ್ಭಿಣಿಯರಿಗೆ ದೂರದ ವಾರ್ಡ್‌ಗಳ ಹಂಚಿಕೆಯಿಂದ ಭಾರೀ ಸಮಸ್ಯೆಯಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯವರಿಗೆ ನಗರದೊಳಗೆ ಗಣತಿ ಮಾಡಲು 20ರಿಂದ 40 ಕಿಲೋ ಮೀಟರ್‌ ದೂರ ಬರಬೇಕಿದೆ. ಅನಾರೋಗ್ಯದಿಂದ ನರಳ್ತಿರೋ ಸರ್ಕಾರಿ ನೌಕರರನ್ನೂ ಗಣತಿಗೆ ನೇಮಿಸಲಾಗಿದೆಯಂತೆ. ವಿಕಲಚೇತನರು ವಿನಾಯ್ತಿ ಕೋರಿದ್ರೂ, ಅಧಿಕಾರಿಗಳು ಸ್ಪಂದಿಸಿಲ್ಲವಂತೆ.

- Advertisement -

Latest Posts

Don't Miss