Tuesday, October 14, 2025

Latest Posts

ಮೃಗಾಲಯ ಇತಿಹಾಸದಲ್ಲೇ ದಾಖಲೆ ಬರೆದ ಕಲೆಕ್ಷನ್ ಮೊತ್ತ!

- Advertisement -

ಮೈಸೂರು ದಸರಾ ನಾಡಹಬ್ಬದ ಸಂಭ್ರಮದ ನಡುವೆ ಈ ಬಾರಿ ಚಾಮರಾಜೇಂದ್ರ ಮೃಗಾಲಯ ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿ ಮೆರೆಯಿತು.

ಹಬ್ಬದ ಅವಧಿಯಲ್ಲಿ ದೇಶದ ವಿವಿಧ ಭಾಗಗಳಿಂದ ಆಗಮಿಸಿದ ಜನಸಾಗರದಿಂದಾಗಿ ಮೃಗಾಲಯದಲ್ಲಿ ದಾಖಲೆಯ ಮಟ್ಟದ ಆದಾಯ ಸಂಗ್ರಹವಾಗಿದ್ದು, ಒಟ್ಟು 191.37 ಲಕ್ಷ ಗಳಿಸಲಾಗಿದೆ. ಇದು ಕಳೆದ ನಾಲ್ಕು ವರ್ಷಗಳಿಗಿಂತಲೂ ಹೆಚ್ಚು ಮೊತ್ತವಾಗಿದ್ದು ಹೊಸ ದಾಖಲೆ ನಿರ್ಮಿಸಿದೆ.

ದಸರಾ ಅವಧಿಯಲ್ಲಿ 1.56 ಲಕ್ಷಕ್ಕೂ ಹೆಚ್ಚು ಜನ ಮೃಗಾಲಯಕ್ಕೆ ಭೇಟಿ ನೀಡಿದರು. ಆಯುಧ ಪೂಜೆಯ ದಿನ 27,033 ವೀಕ್ಷಕರಿಂದ 33.21 ಲಕ್ಷ ಮತ್ತು ವಿಜಯದಶಮಿಯಂದು 27,272 ಜನರಿಂದ 34.07 ಲಕ್ಷ ಸಂಗ್ರಹವಾಯಿತು. ಕೇವಲ ಈ ಎರಡು ದಿನಗಳಲ್ಲೇ 67 ಲಕ್ಷಕ್ಕೂ ಅಧಿಕ ಮೊತ್ತದ ಆದಾಯ ದೊರಕಿದ್ದು, ಮೃಗಾಲಯದ ಇತಿಹಾಸದಲ್ಲಿ ಗಮನಾರ್ಹ ಸಾಧನೆಯಾಗಿದೆ.

ಹಿಂದಿನ ವರ್ಷಗಳಿಗಿಂತ ಈ ಬಾರಿ ಆದಾಯ ಹೆಚ್ಚಾಗಿದೆ. 2021ರಲ್ಲಿ 77.63 ಲಕ್ಷ, 2022ರಲ್ಲಿ 153.51 ಲಕ್ಷ, 2023ರಲ್ಲಿ 167.10 ಲಕ್ಷ ಮತ್ತು 2024ರಲ್ಲಿ 171.29 ಲಕ್ಷ ಸಂಗ್ರಹವಾಗಿತ್ತು. 2025ರಲ್ಲಿ 191.37 ಲಕ್ಷ ಸಂಗ್ರಹದ ಮೂಲಕ ಮೃಗಾಲಯವು ತನ್ನದೇ ಹೊಸ ಇತಿಹಾಸ ನಿರ್ಮಿಸಿದೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss