Dharwad News: ರಾಜ್ಯ ಸರ್ಕಾರದ ಶಕ್ತಿ ಯೋಜನೆ ಆರಂಭದಿಂದ ಸರ್ಕಾರಿ ಸಾರಿಗೆ ಬಸ್ಸನ ಮಹಿಳಾ ಪ್ರಯಾಣಿಕರಿಗೆ ಸರೊಯಾಗಿ ವರ್ತಿಸುವುತ್ತಿಲ್ಲ ಎಂಬ ಗಂಭೀರ ಆರೋಪಗಳ ಮಧ್ಯ, ಸಾರಿಗೆ ಬಸ್ಸನ ಕಂಡಕ್ಟರವರು ಭಿನ್ನವಾಗಿ ನಿಂತಿದ್ದು, ಮೊಮ್ಮಗನ ಜತೆಗೆ ಬೇರೆ ಊರಿಗೆ ತೆರಳುತ್ತಿದ್ದ ಹಿರಿಯ ಜೀವಿ ಅಜ್ಜಿಯ ಜತೆಗೆ ಆತ್ಮೀಯತೆಯಿಂದ ನಡೆದುಕೊಂಡು ಅವರಮ್ನು ಬಸ್ಸಿನಿಂದ ಸುರಕ್ಷಿತವಾಗಿ ಕೈ ಹಿಡಿದು ಕೆಳಗೆ ಇಳಿಸುವ ಮೂಲಕ ಉಳಿದ ಸಾರಿಗೆ ಸಿಬ್ಬಂದಿಗೆ ಮಾದರಿಯಾಗಿದ್ದಾರೆ.
ಹೌದು ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಡಿಪೋ ಸಾರಿಗೆ ಬಸ್ಸನ ಕೆಎ 42 f 1041ನಂಬರಿನ ಕಂಡಕ್ಟರಾದ ಮಾಬೂಸಾಬ್ ಅವರು, ಎಂಬತ್ತೆರಡು ವಯಸ್ಸಿನ ಬಸವ್ವಣ್ಯಮ್ಮಾ ಅವರನ್ನು ಬಸ್ಸಿನಲ್ಲಿ ಅವರನ್ನು ಗೌರವಯುತ್ತವಾಗಿ ನಡೆಸಿಕೊಳ್ಳುವುದರ ಜತೆಗೆ ಅವರೊಂದಿಗೆ ಆತ್ಮೀಯವಾಗಿ ನಡೆದುಕೊಂಡಿದ್ದಾರೆ. ಇನ್ನೂ ಬಸವ್ವಣ್ಯಮ್ಮ ಅವರು ನವಲಗುಂದ ತಾಲೂಕಿನ ಮಜ್ಜಿಗುಡ್ಡದಿಂದ ಅಣ್ಣಿಗೇರಿಗೆ ಪ್ರಯಾಣ ಬೆಳಸಿದ್ದರು. ಮೊಮ್ಮಗನೊಂದಿಗೆ ಬಸ್ಸ ಹತ್ತಿದ ಅವರಿಗೆ ಕಂಡಕ್ಟರ್ ಹಾಗೂ ಬಸ್ಸ ಚಾಲಕರು ಅವರು ಬಸ್ಸ ಇಳಿಸಿದ್ದಾರೆ.
ಕಂಡಕ್ಟರವರು ತಮ್ಮ ಮನೆಯವರಂತೆಯೇ ಅಜ್ಜಯ ಕೈ ಹಿಎಇದು ಇಳಿಸುವ ಮೂಲಕ ಮೊಮ್ಮಗನಿಗೆ ಸಹಾಯ ಮಾಡಿದ್ದು, ಬಸ್ಸನ ಪ್ರಯಾಣಿಕರು ಕಂಡಕ್ಟರ್‌ವರ ಕಾರ್ಯವನ್ನು ಶ್ಲಾಘಿಸಿದರು. ಅಲ್ಲದೆ ಇತರೆ ಸಾರಿಗೆ ಸಿಬ್ಬಂದಿಗೆ ಮಾಬೂಸಾಬ್ ಅವರ ಈ ಕರ್ಯ ಮಾದರಿಯಾಗಿದ್ದು, ಇದೇ ನಡೆಯನ್ನು ತಾವು ಎಂದಿಗೂ ಬೀಡದಂತೆ ಕಳಕಳಿಯಿಂದ ಮನವಿಮಾಡಿದ್ದಾರೆ. ಇನ್ನೂ ಮಾಬೂಸಾಬ್ ಅವರ ಈ ಕಾರ್ಯ ಉಳಿದ ಸಾರಿಗೆ ಸಿಬ್ಬಂದಿಗೆ ಮಾದರಿಯಾಗಿದೆ.




