ರಾಮಮಂದಿರ ಕಟ್ಟುವುದರಿಂದ ಹಿಂದೂ ನಾಯಕನಾಗುವುದಿಲ್ಲ’ ಅಂತ ಆರ್ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ವಿವಾದತ್ಮಕ ಹೇಳಿಕೆ ನೀಡಿದ್ದಾರೆ. ಭಾಗವತ್ ಅವರು ಯಾರದೇ ಹೆಸರೆತ್ತದೇ ಈ ಮಾತು ಆಡಿದ್ದಾರೆ.
ಗುರುವಾರ ಪುಣೆಯಲ್ಲಿ ಉಪನ್ಯಾಸ ಮಾಲಿಕೆಯೊಂದರಲ್ಲಿ ‘ವಿಶ್ವಗುರು ಭಾರತ’ ಕುರಿತು ಭಾಷಣ ಮಾಡಿದ ಭಾಗವತ್, ‘ರಾಮಮಂದಿರ ಹಿಂದೂಗಳ ನಂಬಿಕೆಯ ವಿಷಯವಾಗಿದೆ. ರಾಮ ಮಂದಿರ ನಿರ್ಮಾಣವಾಗಬೇಕು ಎಂದು ಹಿಂದೂಗಳು ನಂಬಿದರು. ಆದರೆ ಈಗ ನಿರ್ಮಾಣ ಮಾಡುವುದರಿಂದ ಯಾವುದೇ ವ್ಯಕ್ತಿಯು ಹಿಂದೂ ನಾಯಕನಾಗುವುದಿಲ್ಲ’ ಎಂದರು.
ಇದಲ್ಲದೆ, ‘ರಾಮಮಂದಿರ ನಿರ್ಮಾಣದ ಬಳಿಕ, ಇಂತಹ ಇನ್ನಷ್ಟು ಸಮಸ್ಯೆಗಳನ್ನು ಹೊರತಂದು ತಾವು ಹಿಂದೂ ನಾಯಕರಾಗಬಹುದು ಅಂತ ಹಲವರು ಭಾವಿಸಿದ್ರು. ಇದಕ್ಕಾಗಿ ಪ್ರತಿ ದಿನ ಒಂದೊಂದು ಸಮಸ್ಯೆಯನ್ನು ಹುಡುಕಿ ತೆಗೆಯುತ್ತಿದ್ದಾರೆ. ಇದು ಸ್ವೀಕಾರಾರ್ಹವಲ್ಲ’ ಅಂತ ಅಂದ್ರು .
ನಾವು ವಿಶ್ವಗುರು ಆಗಬೇಕೆಂದು ಮಾತನಾಡುತ್ತೇವೆ. ಆದರೆ ‘ಮಹಾಶಕ್ತಿ’ ಆಗಬೇಕು ಅಂತ ಮಾತನಾಡುವುದಿಲ್ಲ. ಯಾಕಂದ್ರೆ ಸೂಪರ್ ಪವರ್ ನಂತರ ಜನರು ಹೇಗೆ ವರ್ತಿಸುತ್ತಾರೆ ಅನ್ನೋದನ್ನ ನಾವು ನೋಡಿದ್ದೇವೆ. ಪರಮಾಧಿಕಾರಕ್ಕಾಗಿ ಸ್ವಾರ್ಥ ಸಾಧನೆ ಮಾಡುವುದು ನಮ್ಮ ಮಾರ್ಗವಲ್ಲ’ ಅಂತ ಅವರು ಹೇಳಿದ್ರು.
ಇನ್ನು ದೇಶದಲ್ಲಿ ಸಂಭಲ್ ಸೇರಿ ಹಲವು ಮಸೀದಿ ವಿವಾದಗಳು ಸಂಘರ್ಷಗಳಿಗೆ ಕಾರಣವಾಗಿರುವ ಬೆನ್ನಲ್ಲೇ ಅವರು ಹೀಗೆ ಹೇಳಿರು ವುದು ಮಹತ್ವ ಪಡೆದಿದೆ. ವಿಶ್ವಗುರು ಭಾರತ ಅನ್ನೋ ವಿಷಯದ ಬಗ್ಗೆ ಮಾತನಾಡಿದ ಅವರು, ‘ನಾವು ಅನೇಕ ವರ್ಷಗಳಿಂದ ಸಹಬಾಳ್ವೆ ನಡೆಸುತ್ತಿದೇವೆ. ಈ ವಿಷಯದಲ್ಲಿ ಜಗತ್ತಿಗೆ ನಾವು ಆದರ್ಶವಾಗಬೇಕು. ರಾಮ ಮಂದಿರ ನಿರ್ಮಾಣದ ಬಳಿಕ, ಇಂತಹ ಇನ್ನಷ್ಟು ಸಮಸ್ಯೆಗಳನ್ನು ಹೊರತಂದು ತಾವು ಹಿಂದೂ ನಾಯಕರಾಗಬಹುದು ಅಂತ ಹಲವರು ಭಾವಿಸಿದ್ದಾರೆ. ಇದಕ್ಕಾಗಿ ನಿತ್ಯ ಒಂದು ಸಮಸ್ಯೆಯನ್ನು ಹುಡುಕಿ ತೆಗೆಯುತ್ತಿದ್ದಾರೆ. ಇದು ಸಲ್ಲದು’ ಎಂದರು.
ಒತ್ತುವರಿ ತೆರವು ವೇಳೆ 46 ವರ್ಷ ಬಳಿಕ ಇಲ್ಲಿ ಪತ್ತೆಯಾಗಿದ್ದ ಕಾರ್ತಿಕೇಯ ದೇವಸ್ಥಾನದ ಸಮೀಕ್ಷೆಯನ್ನು ಭಾರತೀಯ ಪುರಾತತ್ವ ಇಲಾಖೆ ಶುಕ್ರವಾರ ನಡೆಸಿದೆ. ದೇವಸ್ಥಾನ ಎಷ್ಟು ಪುರಾತನವಾದುದು ಎಂಬುದನ್ನು ತಿಳಿಯಲು, 4 ಜನರ ತಂಡ ಕಾರ್ಬನ್ ಡೇಟಿಂಗ್ ನಡೆಸಿ ದು, ಈ ವೇಳೆ ದೇವಸ್ಥಾನದ ಬಳಿಯಲ್ಲಿ ಭದ್ರಕ್ ಆಶ್ರಮ, ಸ್ವರ್ಗದೀಪ್, ಚಕ್ರಪಾಣಿ ಸೇರಿದಂತೆ 5 ಧಾರ್ಮಿಕ ಸ್ಥಳಗಳು ಹಾಗೂ 19 ಬಾವಿ ಪತ್ತೆ ಆಗಿವೆ. 1978ರಲ್ಲಿ ಭುಗಿಲೆದ್ದ ಹಿಂದೂ-ಮುಸ್ಲಿಂ ದಂಗೆಯಿಂದ ಮುಚ್ಚ ಲಾಗಿದ್ದ ಈ ದೇವಾಲಯವನ್ನು 46 ವರ್ಷಗಳ ನಂತರ, ಡಿ.13ರಂದು ತೆರೆಯಲಾಗಿದ್ದು, ಪೂಜೆಯನ್ನೂ ಆರಂಭಿಸಲಾಗಿದೆ. ಈ ನಡುವೆ, ಅಲಿಘಢದಲ್ಲಿ ಪಾಳು ಬಿದ್ದ 2ನೇ ದೇಗುಲ ಶುಕ್ರವಾರ ಪತ್ತೆ ಆಗಿದೆ.