Tuesday, October 15, 2024

Latest Posts

Navalgund : ಪ್ರಾಣ ಇರುವಾಗಲೇ ಮರಣ ಪ್ರಮಾಣ ಪತ್ರ ಪಡೆದ ಮಹಾಶಯ

- Advertisement -

ನವಲಗುಂದ: ಸಾಮಾನ್ಯವಾಗಿ ಮರಣ ಹೊಂದಿದ ನಂತರ ಮರಣ ಪ್ರಮಾಣ ಪತ್ರ ಪಡೆಯುವರು, ಆದರೆ ಇಲ್ಲೊಬ್ಬ ಮಹಾಶಯ ಬದುಕಿದ್ದಾಗಲೇ ತಾನು ಮಾಡಿದ ಸಾಲಗಳ ಮರುಪಾವತಿಗಾಗಿ ಮರಣ ಪ್ರಮಾಣ ಪತ್ರ ಪಡೆದು ಫೈನಾನ್ಸ್ ಗಳಿಗೆ ಸಲ್ಲಿಸಿದ್ದಾನೆ.ಹೌದು…ಪಟ್ಟಣದ ರಾಮಲಿಂಗ ಓಣಿಯ ನಿವಾಸಿ ಇಮಾಮಹುಸೇನ ಮುಲ್ಲಾನವರ ಈ ಕೃತ್ಯ ಎಸಗಿದ ವ್ಯಕ್ತಿ. ಇವನ ಸಂಬಂಧಿ ಅಣ್ಣಿಗೇರಿ ತಾಲೂಕಿನ ಭದ್ರಾಪುರ ಗ್ರಾಮದ ಮೌಲಾಸಾಬ ನಲವಡಿ ಆ.21ರಂದು ಇಮಾಮಹುಸೇನ ಮೃತನಾಗಿದ್ದಾನೆಂದು ನವಲಗುಂದ ಪುರಸಭೆಗೆ ಆ.27ರಂದು ಮರಣ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದಾನೆ.

ಅಧಿಕಾರಿಗಳು ಅದನ್ನು ಪರಿಶೀಲಿಸಿ ಆ.29ರಂದು ಪ್ರಮಾಣಪತ್ರ ನೀಡಿದ್ದಾರೆ. ಅದನ್ನೇ ಬ್ಯಾಂಕ್ ಹಾಗೂ ಫೈನಾನ್ಸ್‌ಗಳಿಗೆ ನೀಡಲಾಗಿದೆ ಎಂದು ತಿಳಿದುಬಂದಿದೆ.ಯಾವುದೇ ವ್ಯಕ್ತಿ ತೀರಿಕೊಂಡರೆ ಪುರಸಭೆಗೆ ಸ್ಥಾನಿಕ ಚೌಕಾಶಿ (ಪಂಚರ ಸಹಿ) ಮಾಡಿ ಆ ಓಣಿಯ/ವಾರ್ಡಿನ ಸದಸ್ಯರ ಹಾಗೂ ಆಶಾ ಕಾರ್ಯಕರ್ತೆಯರು, ಅಷ್ಟೇ ಅಲ್ಲದೇ ಹಿರಿಯರ ಸಹಿ ಪಡೆದು ಅವರೊಂದಿಗೆ ಪರಿಶೀಲಿಸಿ ಮೃತರ ಮನೆಗೆ ಭೇಟಿ ನೀಡಿ ಮರಣ ಪ್ರಮಾಣ ಪತ್ರದ ಅರ್ಜಿ ನೋಂದಣಿ ಮಾಡಲಾಗುತ್ತದೆ.

ಆದರೆ ಇಲ್ಲಿನ ಅಧಿಕಾರಿಗಳ ಹಾಗೂ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳು ಇದು ಯಾವುದನ್ನು ಮಾಡಿಲ್ಲ. ಈ ಕುರಿತು ಕೇಳಿದರೆ ಕೆಲಸದ ಒತ್ತಡದಲ್ಲಿ ಈ ಘಟನೆ ನಡೆದಿರಬಹುದು ಎಂದು ಸಬೂಬು ನೀಡಿದ್ದಾರೆ.ಇನ್ನೂ ಈ ವ್ಯಕ್ತಿ ಬದುಕಿದ್ದಾನೆ ಎಂದು ತಿಳಿದ ತಕ್ಷಣ ಪುರಸಭೆ ಸಿಬ್ಬಂದಿ ಆತನ ಮರಣ ಪ್ರಮಾಣ ಪತ್ರ ರದ್ಧು ಮಾಡಲು ಶಿಫಾರಸ್ಸು ಮಾಡಿದ್ದು, ಸಾಮಾನ್ಯ ವ್ಯಕ್ತಿಗಳಿಗೆ ಮರಣ ಪ್ರಮಾಣ ಪತ್ರ ನೀಡಲು ಒಂದು ವಾರ ಸಮಯ ಕೇಳುವ ಇವರು ಇಮಾಮಹುಸೇನ್ ಗೆ 3ದಿನದಲ್ಲಿ ನೀಡಿದ್ದು ನೋಡಿದರೆ ಇದರಲ್ಲಿ ಏನೋ ಹಗರಣ ನಡೆದಿದೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

- Advertisement -

Latest Posts

Don't Miss