ಬೆಂಗಳೂರು ; ಆರೋಗ್ಯ ಇಲಾಖೆಯ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಸೇವಾ ಭದ್ರತೆ ಹಾಗೂ ವೇತನ ಪರಿಷ್ಕರಣೆ ಕುರಿತ ಶ್ರೀನಿವಾಸಚಾರಿ ವರದಿ ಮತ್ತು ವಿವಿಧ ಬೇಡಿಕೆಗಳನ್ನು ವಾರದೊಳಗೆ ಈಡೇರಿಸದಿದ್ದರೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಧರಣಿ ಸತ್ಯಾಗ್ರಹ ಕೈಗೊಳ್ಳುವುದಾಗಿ ಗುತ್ತಿಗೆ ಮತ್ತು ಹೊರ ಗುತ್ತಿಗೆ ನೌಕರರ ಸಂಘ, ಭಾರತೀಯ ಮಜ್ದೂರ್ ಸಂಘ ಎಚ್ಚರಿಸಿದೆ
ಬೆಂಗಳೂರಿನ ಲ್ಲಿಂದು ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ.ಭಾರತೀಯ ಮಜ್ದೂರ್ ಸಂಘದ ರಾಜ್ಯಾಧ್ಯಕ್ಷರಾದ ಶಂಕರ್ ಸುಲೇಗಾಂವ್ , ಶ್ರೀನಿವಾಸಚಾರಿ ಸಮಿತಿ ವರದಿ ಸಲ್ಲಿಕೆಯಾಗಿದ್ದರೂ ಇದುವರೆಗೂ ಅದರ ಅಂಶಗಳನ್ನು ರಾಜ್ಯ ಸರ್ಕಾರ ಅನುಷ್ಟಾನಗೊಳಿಸಿಲ್ಲ. ನೌಕರರ ಪರಿಸ್ಥಿತಿ ಡೋಲಾಯಮಾನವಾಗಿದ್ದು. ಕೂಡಲೇ ಒಂದು ವಾರದಲ್ಲಿ ಇದರ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಆರೋಗ್ಯ ಸಚಿವರು ಪೆಬ್ರವರಿ 24ರಂದು ಸಭೆ ನಡೆಸಿದ್ದು, ಎರಡು ದಿನದಲ್ಲಿ ಪ್ರೋಸಿಡಿಗ್ಸ್ 15ದಿನಗಳಲ್ಲಿ ಆದೇಶಗಳನ್ನು ಹೊರಡಿಸುವುದಾಗಿ ಭರವಸೆ ನೀಡಿರುವ ಅಧಿಕಾರಿಗಳು ಒಂದು ತಿಂಗಳು ಕಳೆದರೂ ಯಾವುದೇ ಆದೇಶ ಹೊರಡಿಸಿಲ್ಲ.ಇಷ್ಟೋಂದು ವಿಳಂಬ ದೋರಣೆ ಸರಿಯಲ್ಲ, ಕೋವಿಡ್ ಸಮಯದಲ್ಲಿ ಸೇವೆ ಸಲ್ಲಿಸಿದ ಕೋವಿಡ ನೌಕರರನ್ನು ಸಹ ಏಕಾಏಕಿ ಕೈಬಿಡುವುದು ಸರಿಯಲ್ಲ ಎಂದು ತಿಳಿಸಿದರು. ಮಾನವೀಯ ನೆಲೆಯಲ್ಲಿ ಅವರನ್ನು ಮುಂದುವರೆಸಬೇಕು ಎಂದು ಒತ್ತಾಯಿಸಿದರು.
ಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ವಿಶ್ವರಾಧ್ಯ ಯಾಮೋಜಿ ಮಾತನಾಡಿ, ರಾಜ್ಯ ಸರಕಾರ ಶ್ರೀನಿವಾಸಚಾರಿ ವರದಿಯನ್ನು ಅನುಷ್ಠಾನ ಮಾಡುವುದಾಗಿ ಈಗಾಗಲೇ ಸದನದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಡಾ.ಕೆ.ಸುಧಾಕರ್ ಇವರು ಭರವಸೆ ನೀಡಿದ್ದಾರೆ. ಅದರಂತೆ ಬರುವ ಒಂದು ವಾರದೊಳಗೆ ಗುತ್ತಿಗೆ, ಹೊರಗುತ್ತಿಗೆ ನೌಕರರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಸರಕಾರಕ್ಕೆ ಒತ್ತಾಯಿಸಿದ್ದಾರೆ.
ಈಗಾಗಲೇ ಕರ್ನಾಟಕ ರಾಜ್ಯ ಆರೋಗ್ಯ, NHM ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ಗೌರವಾಧ್ಯಕ್ಷ, ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್ ಹಲವು ಬಾರೀ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಸದನದಲ್ಲಿ ಕೂಡ ಪ್ರಸ್ತಾಪಿಸಿ ಗಮನ ಸಳೆದಿದ್ದಾರೆ.ಇವರಿಗೆ ಸಂಬಂಧ ಪಟ್ಟ ಸಚಿವರು ವರದಿ ಜಾರಿ ಕುರಿತು ಉತ್ತರ ನೀಡಿದ್ದಾರೆ ಎಂದು ತಿಳಿಸಿದರು.
ಪ್ರತಿ ವರ್ಷ ಈ ಗುತ್ತಿಗೆ ನೌಕರರಿಗೆ ಏಪ್ರಿಲ್ ಒಂದರಂದು ಒಂದು ದಿನ ವಿರಾಮ ನೀಡುವ ಅನಿಷ್ಟ ಪದ್ಧತಿ ಜಾರಿಯಲ್ಲಿದ್ದು ಇದನ್ನು ಸಹ ರದ್ದು ಪಡಿಸಬೇಕು, ಒಂದು ವೇಳೆ ಈ ಸಲವೂ ಸಹ ಒಂದು ದಿನ ವಿರಾಮ ನೀಡಿದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗಲಿದೆ.
ಏಪ್ರಿಲ್ 1 ವಿರಾಮ ನೀಡಿ ಮರುದಿನ
ಏಪ್ರಿಲ್ 2 ಯುಗಾದಿ ಸರಕಾರಿ ರಜೆ
ಏಪ್ರಿಲ್ 3 ಭಾನುವಾರ ಇರಲಿದ್ದು
ಸಾಲು ರಜಾ ದಿನಗಳಲ್ಲಿ ಸರಕಾರಿ ಆಸ್ಪತ್ರೆಗಳಲ್ಲಿ ಸೇವೆಯಲ್ಲಿ ವ್ಯಥೆ ಆಗಲಿದೆ ಎಂದರು.
ಈ ಏಪ್ರಿಲ್ 1ದಿನದ ವಿರಾಮದ ದಿನವನ್ನು ರದ್ದು ಪಡಿಸದೇ ಇದ್ದಲ್ಲಿ ಇನ್ನು ಮುಂದೆ ಏಪ್ರಿಲ್ ಸರಿಯಲ್ಲ, ಶೋಷಣೆಯ ದಿನ ವನ್ನಾಗಿ ಆಚರಿಸಲಾಗುತ್ತದೆ ಎಂದು ತಿಳಿಸಿದರು.




