Monday, October 13, 2025

Latest Posts

ಡಿನ್ನರ್ ಮೀಟಿಂಗ್ ಸಮಾಧಾನಕ್ಕಲ್ಲ ಬಿಹಾರಗೆ ಟಾರ್ಗೆಟ್ ನಿಗದಿಪಡಿಸಲು- ಗೋವಿಂದ ಕಾರಜೋಳ

- Advertisement -

ಮಲ್ಲಿಕಾರ್ಜುನ ಖರ್ಗೆಯವರೇ, ಮೊದಲು ನಿಮ್ಮ ಮನೆ ಮಕ್ಕಳಿಗೆ ಸರಿಯಾಗಿ ಪಾಠ ಹೇಳಿ ಎಂದು ಬಿಜೆಪಿ ಸಂಸದ ಗೋವಿಂದ ಕಾರಜೋಳ ಕಿಡಿಕಾರಿದ್ದಾರೆ. ಆರ್‌ಎಸ್‌ಎಸ್ ಚಟುವಟಿಕೆ ನಿಷೇಧದ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಬರೆದಿರುವ ಪತ್ರದ ಕುರಿತು ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನೀವು ಎದುರಿಸಬೇಕಿರುವುದು ಆರ್‌ಎಸ್‌ಎಸ್ ಅಲ್ಲ, ಬಿಜೆಪಿ. ನೀವು ಪ್ರಶ್ನಿಸಬೇಕಿರುವುದು ಮೋಹನ್ ಭಾಗವತ್ ಅವರನ್ನು ಅಲ್ಲ, ಪ್ರಧಾನಿ ನರೇಂದ್ರ ಮೋದಿ ಅವರನ್ನು. ಸೋನಿಯಾ ಗಾಂಧಿಯನ್ನು ಮೆಚ್ಚಿಸಲು ಆರ್‌ಎಸ್‌ಎಸ್ ವಿರುದ್ಧ ಟೀಕೆ ಮಾಡುವ ನಾಟಕವನ್ನು ಜನರು ಸಹಿಸಲಾರರು ಎಂದು ಎಚ್ಚರಿಸಿದರು.

ಯಾರನ್ನಾದರೂ ಮೆಚ್ಚಿಸಲು ಈ ರೀತಿಯ ಹೇಳಿಕೆ ನೀಡುವುದು ಸರಿಯಲ್ಲ. ಆರ್‌ಎಸ್‌ಎಸ್‌ನಲ್ಲಿ ಜಾತಿ ಪದ್ಧತಿಯೇ ಇಲ್ಲ. ಇದೇ ರೀತಿಯಾಗಿ ಮಾತನಾಡುತ್ತ ಹೋದರೆ ರಸ್ತೆಯಲ್ಲಿ ಓಡಾಡೋದು ಕಷ್ಟವಾಗುತ್ತದೆ. ಆರ್‌ಎಸ್‌ಎಸ್ ರಾಜಕೀಯ ಪಕ್ಷವಲ್ಲ, ಮೋಹನ್ ಭಾಗವತ್ ರಾಜಕಾರಣಿಯೂ ಅಲ್ಲ. ರಾಹುಲ್ ಗಾಂಧಿಯವರು ಎದುರಿಸಬೇಕಿರುವುದು ಬಿಜೆಪಿ ಮತ್ತು ಮೋದಿ. 140 ಕೋಟಿ ಜನರ ಸಹನೆಗೆ ಮಿತಿ ಇದೆ. ಸೋನಿಯಾ-ರಾಹುಲ್ ಅವರನ್ನು ಮೆಚ್ಚಿಸಲು ದೇಶದ ಸಾಂಸ್ಕೃತಿಕ ಸಂಸ್ಥೆಗಳ ವಿರುದ್ಧ ಮಾತನಾಡುವುದು ಜನರಿಗೆ ಅಸಹ್ಯ ಎಂದು ಅವರು ತೀವ್ರವಾಗಿ ಎಚ್ಚರಿಕೆ ನೀಡಿದರು.

ಡಾ. ಪರಮೇಶ್ವರ್ ಅವರ ನಾನೂ ಸಿಎಂ ಯಾಕಾಗಬಾರದು ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾರಜೋಳ, ಸಿದ್ದರಾಮಯ್ಯ ಸಿಎಂ ಆದ ದಿನದಿಂದಲೇ ಕುರ್ಚಿ ಕುರಿತ ಚರ್ಚೆ ಕಾಂಗ್ರೆಸ್‌ನಲ್ಲಿ ನಡೆಯುತ್ತಿದೆ. ಎರಡೂವರೆ ವರ್ಷಗಳಲ್ಲಿ ಆಡಳಿತ ಕುಸಿದು, ರೈತರ ಆತ್ಮಹತ್ಯೆಗಳಲ್ಲಿ ಕರ್ನಾಟಕ ದೇಶದಲ್ಲೇ ಎರಡನೇ ಸ್ಥಾನಕ್ಕೆ ಬಂದಿದೆ. ಸಿಎಂ ಜಾತಿ ಗಣತಿ, ಆಹಾರ ಕಿಟ್‌ಗಳಂತಹ ನಾಟಕಗಳಿಂದ ಜನರ ಗಮನ ಬೇರೆಡೆ ಸೆಳೆಯುತ್ತಿದ್ದಾರೆ. ಬಡವರ ಹಣವನ್ನು ವೋಟ್ ಬ್ಯಾಂಕ್ ರಾಜಕಾರಣಕ್ಕೆ ಬಳಸುತ್ತಿದ್ದಾರೆ. ಡಿನ್ನರ್ ಮೀಟಿಂಗ್ ಸಮಾಧಾನಕ್ಕಾಗಿ ಅಲ್ಲ, ಬಿಹಾರ ಚುನಾವಣೆಗೆ ಟಾರ್ಗೆಟ್ ನಿಗದಿಪಡಿಸಲು ಕರೆಯಲಾಗಿದೆ ಎಂದು ವ್ಯಂಗ್ಯವಾಡಿದರು.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss