Dharwad News: ಧಾರವಾಡ: ಮಹಿಳೆಯ ಜೊತೆ ಫೋನ್ನಲ್ಲಿ ಮಾತನಾಡಿದ್ದಾನೆಂದು ಸಂಶಯಪಟ್ಟಿ ಟಂಟಂ ಚಾಲಕನ ಮೇಲೆ ಒಂದೇ ಕುಟುಂಬದವರು ಹಲ್ಲೆ ನಡೆಸಿದ್ದಾರೆ.
ಧಾರವಾಡ ತಾಲೂಕಿನ ವೆಂಕಟಾಪೂರ ಗ್ರಾಮದ ಮಾವಿನ ತೋಟದಲ್ಲಿ ಈ ಘಟನೆ ನಡೆದಿದ್ದು, ಇಮಾಮ್ ಸಾಬ್ ದೇವರಮನೆ (34) ಎನ್ನುವ ಟಂಟಂ ಚಾಲಕನ ಮೇಲೆ ಸುಮಾರು 10 ಜನರು ಸೇರಿ, ಹಲ್ಲೆ ನಡೆಸಿದ್ದಾರೆ.
ಕೊಟೂರು ಗ್ರಾಮದ ಅಗಸಿಮನಿ ಎಂಬ ಕುಟುಂಬದ ಹತ್ತು ಜನರು ಸೇರಿ, ಇಮಾಮ್ಸಾಬ್ ಮೇಲೆ ಹಲ್ಲೆ ಮಾಡಿದ್ದಾರೆ. ಮಾರಣಾಂತಿಕ ಹಲ್ಲೆಗೆ ಒಳಗಾದ ಇಮಾಮಸಾಬ್ ನ ಎರಡು ಕೈ ಮುರಿದಿದ್ದು, ದುಷ್ಕರ್ಮಿಗಳು ಚಾಲಕನ ಮೂಳೆ ಮುರಿಯುವಂತೆ ಹಲ್ಲೆ ನಡೆಸಿದ್ದಾರೆ.
ಅಗಸಿಮನಿ ಕುಟುಂಬದ ಮಹಿಳ ಜೊತೆ ಟಂಟಂ ಚಾಲಕ ಇಮಾಮ್ ಮಾತಾಡಿದ್ದಾನೆ ಎಂದು ಸಂಶಯ ಪಟ್ಟು, ಅಸ್ಲಂ, ಇಸಾಕ್, ಶಕೀಲ್, ಅಪ್ಪಲಾಲ್, ನಿಸಾರ್, ಹಜರುದ್ದೀನ್, ಮುಜಮೀಲ್ ಸೇರಿ ಒಟ್ಟು 10 ಜನ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದ 10 ಜನರ ಮೇಲೆ ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಗಾಯಾಳು ಇಮಾಮ್ ಸಾಬ್ ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.




