ಇಡೀ ದೇಶದ ಚಿತ್ತ ಬಿಹಾರ ಚುನಾವಣೆಯತ್ತ ನೆಟ್ಟಿದೆ. ಕೇವಲ ಇನ್ನೆರಡು ದಿನಗಳಲ್ಲಿ ದಿನಾಂಕ ನಿಗಧಿಯಾಗುವ ಸಾಧ್ಯತೆ ಇದೆ. ಈಗಾಗಲೇ ಚುನಾವಣಾ ಆಯೋಗ ಬಿಹಾರ ಎಲೆಕ್ಷನ್‌ಗೆ ಸಕಲ ಸಿದ್ಧತೆಗಳನ್ನೂ ಮಾಡಿಕೊಂಡಿದೆ. ಅಂದುಕೊಂಡಂತೆ ಆದ್ರೆ ನಾಳೆ ಅಥವಾ ನಾಡಿದ್ದು ಚುನಾವಣಾ ದಿನಾಂಕ ಘೋಷಿಸಬಹುದು.
ನವೆಂಬರ್ 22ರೊಳಗೆ ಚುನಾವಣೆ ಕೊನೆಗೊಳ್ಳಲಿದೆ ಅಂತಾ, ಮುಖ್ಯ ಚುನಾವಣಾಧಿಕಾರಿ ಜ್ಞಾನೇಶ್ ಕುಮಾರ್, ಪಾಟ್ನಾದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಛಠ್ ಹಬ್ಬದಂತೆ, ಪ್ರಜಾಪ್ರಭುತ್ವದ ಹಬ್ಬ ಆಚರಿಸಲು ಕರೆ ಕೊಟ್ಟಿದ್ದಾರೆ. ಚುನಾವಣೆಗೂ ಮುನ್ನ ಆಯೋಗ ಕೆಲವು ಬದಲಾವಣೆ ಮಾಡಿಕೊಂಡಿರುವ ಬಗ್ಗೆ, ಸ್ಪಷ್ಟನೆ ಕೊಟ್ಟಿದ್ದಾರೆ.
ನಂಬರ್ 1 : ಮತದಾರರನ್ನು ಭೇಟಿ ಮಾಡುವಾಗ ಬಿಎಲ್‌ಒಗಳನ್ನು ಗುರುತಿಸಲು, ಐಡಿ ಕಾರ್ಡ್‌ಗಳನ್ನು ಪರಿಚಯಿಸಲಾಗಿದೆ. ನಂಬರ್ 2 : ಮತದಾನಕ್ಕೂ ಮುನ್ನ ಮೊಬೈಲ್‌ಗಳನ್ನು ಮತಗಟ್ಟೆಯೊಳಗೇ ಇಡಲು ಅವಕಾಶ ನೀಡಲಾಗಿದೆ. ನಂಬರ್ 3 : ಯಾವುದೇ ಬೂತ್‌ನಲ್ಲಿ 1,200 ಕ್ಕಿಂತ ಹೆಚ್ಚು ಮತದಾರರ ಹೆಸರು ಇರುವುದಿಲ್ಲ.
ನಂಬರ್ 4 : ಪ್ರತಿ ಬೂತ್ ಅನ್ನು 100 ಪರ್ಸೆಂಟ್ ವೆಬ್‌ಕಾಸ್ಟ್ ಮಾಡಲಾಗುತ್ತದೆ. ನಂಬರ್ 5 : ಹೊಸ ವ್ಯವಸ್ಥೆ ಬಳಸಿಕೊಂಡು ಮತ ಎಣಿಕೆ ಮಾಡಲಾಗುತ್ತದೆ. ನಂಬರ್ 6 : ಇವಿಎಂ ಎಣಿಕೆಯಲ್ಲಿ ಹೊಂದಾಣಿಕೆಯಾಗದಿದ್ದರೆ, ಎಲ್ಲಾ ವಿವಿಪ್ಯಾಟ್‌ಗಳನ್ನು ಎಣಿಕೆ ಮಾಡಲಾಗುತ್ತದೆ. ನಂಬರ್ 7: ಇವಿಎಂ ಎಣಿಕೆಯ ಅಂತಿಮ ಎರಡು ಸುತ್ತಿನ ಮೊದಲು ಅಂಚೆ ಮತಪತ್ರಗಳ ಎಣಿಕೆ ಕಡ್ಡಾಯವಾಗಿರುತ್ತದೆ.
ನಂಬರ್ 8 : ಮತದಾರರ ಪಟ್ಟಿಯಿಂದ ಹೆಸರು ಕಾಣೆಯಾಗಿದ್ರೆ, ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಮೇಲ್ಮನವಿ ಸಲ್ಲಿಸಬಹುದಾಗಿದೆ. ಮತ್ತು ತಪ್ಪು ಕಂಡುಬಂದರೆ ಸಿಇಒಗೆ ಮೇಲ್ಮನವಿ ಸಲ್ಲಿಸಬಹುದಾಗಿದೆ.
ಇನ್ನು, ಹಲವು ವರ್ಷಗಳ ನಂತರ ಬೂತ್ ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿಯ ಭತ್ಯೆಯನ್ನು ಹೆಚ್ಚಿಸಲಾಗಿದೆ. ಹೀಗಂತ ಮುಖ್ಯ ಚುನಾವಣಾ ಆಯುಕ್ತರು ಹೇಳಿದ್ದಾರೆ.