ರೈಲ್ವೆ ಪ್ರಯಾಣಿಕರಿಗೆ ಮುಖ್ಯಮಾಹಿತಿ: ಈ ರೈಲುಗಳ ಸೇವೆ ನಿಯಂತ್ರಣ

ಬೆಂಗಳೂರು: ಬೆಂಗಳೂರು ವಿಭಾಗದ ವೈಟ್‌ಫೀಲ್ಡ್ ಮತ್ತು ದೇವನಗೊಂತಿ ರೈಲ್ವೆ ನಿಲ್ದಾಣಗಳ ನಡುವೆ ವೆಲ್ಡಿಂಗ್ ಕಾರ್ಯದ ನಿಮಿತ್ತ, ಕೆಳಕಂಡ ರೈಲುಗಳನ್ನು ಮಾರ್ಗ ಮಧ್ಯದಲ್ಲಿ ನಿಯಂತ್ರಣ ಮಾಡಲಾಗಿದೆ.

1. ಕೆ.ಎಸ್.ಆರ್ ಬೆಂಗಳೂರು ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 06396 ಕೆ.ಎಸ್.ಆರ್ ಬೆಂಗಳೂರು – ಮಾರಿಕುಪ್ಪಂ ಮೆಮು ಪ್ಯಾಸೆಂಜರ್ ಸ್ಪೆಷಲ್ ರೈಲನ್ನು ದಿನಾಂಕ 05.06.2022, 07.06.2022, 09.06.2022, 10.06.2022, 12.06.2022, 14.06.2022, 16.06.2022, 17.06.2022, 19.06.2022, 21.06.2022, 23.06.2022, 24.06.2022, 26.06.2022, 28.06.2022, 30.06.2022, 01.07.2022, 03.07.2022 ಹಾಗೂ 05.07.2022 ಗಳಂದು ಮಾರ್ಗ ಮಧ್ಯದಲ್ಲಿ 45 ನಿಮಿಷಗಳವರೆಗೆ ನಿಯಂತ್ರಿಸಲಾಗುವುದು.

2. ಕೆ.ಎಸ್.ಆರ್ ಬೆಂಗಳೂರು ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 01775 ಕೆ.ಎಸ್.ಆರ್ ಬೆಂಗಳೂರು – ಮಾರಿಕುಪ್ಪಂ ಮೆಮು ಪ್ಯಾಸೆಂಜರ್ ಸ್ಪೆಷಲ್ ರೈಲನ್ನು ದಿನಾಂಕ 07.06.2022, 09.06.2022, 10.06.2022, 14.06.2022, 16.06.2022, 17.06.2022, 21.06.2022, 23.06.2022, 24.06.2022, 28.06.2022, 30.06.2022, 01.07.2022 ಹಾಗೂ 05.07.2022 ಗಳಂದು ಮಾರ್ಗ ಮಧ್ಯದಲ್ಲಿ 35 ನಿಮಿಷಗಳವರೆಗೆ ನಿಯಂತ್ರಿಸಲಾಗುವುದು.

ಬಿ. ಬೆಂಗಳೂರು ವಿಭಾಗದ ಮಂಡ್ಯ ಮತ್ತು ಎಲಿಯೂರು ನಿಲ್ದಾಣಗಳ ನಡುವಿನ ರಸ್ತೆ ಮೇಲ್ಸೇತುವೆ ಸಂಖ್ಯೆ 672 ‘ಬಿ’ ರಲ್ಲಿ ಇಂಜಿನಿಯರಿಂಗ (ಬೋ ಸ್ಟ್ರಿಂಗ್ ಗರ್ಡರ್ ನ ಪ್ರಾಥಮಿಕ ಸ್ಥಾಪನೆಯ) ಕಾಮಗಾರಿಯ ಸಲುವಾಗಿ ಲೈನ್ ಬ್ಲಾಕ್ ಹಾಗೂ ಪವರ್ ಬ್ಲಾಕ್ ಇರುವ ನಿಮಿತ್ತ,ಕೆಳಕಂಡ ರೈಲುಗಳನ್ನು ಮಾರ್ಗ ಮಧ್ಯದಲ್ಲಿ ನಿಯಂತ್ರಣ ಮಾಡಲಾಗುವುದು:-

1. ಕೆ.ಎಸ್.ಆರ್ ಬೆಂಗಳೂರು ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 06559 ಕೆ.ಎಸ್.ಆರ್ ಬೆಂಗಳೂರು – ಮೈಸೂರು ಮೆಮು ಪ್ಯಾಸೆಂಜರ್ ಸ್ಪೆಷಲ್ ರೈಲನ್ನು ದಿನಾಂಕ 10.06.2022 & 29.06.2022 ರಂದು ಮಾರ್ಗ ಮಧ್ಯದಲ್ಲಿ 40 ನಿಮಿಷಗಳವರೆಗೆ ನಿಯಂತ್ರಿಸಲಾಗುವುದು.

2. ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 16586 ಮಂಗಳೂರು ಸೆಂಟ್ರಲ್ – ಕೆ.ಎಸ್.ಆರ್ ಬೆಂಗಳೂರು ಎಕ್ಸ್ ಪ್ರೆಸ್ ರೈಲನ್ನು ದಿನಾಂಕ 09.06.2022 & 28.06.2022 ರಂದು ಮಾರ್ಗ ಮಧ್ಯದಲ್ಲಿ 15 ನಿಮಿಷಗಳವರೆಗೆ ನಿಯಂತ್ರಿಸಲಾಗುವುದು.

About The Author