ನಿಜವಾಯ್ತು ಯುಗಾದಿ ಫಲಾಫಲ ಭವಿಷ್ಯ

www.karnatakatv.net : ಧಾರವಾಡ: ತಾಲೂಕಿನ ಉಪ್ಪಿನಬೆಟಗೇರಿ ಗ್ರಾಪಂ ವ್ಯಾಪ್ತಿಯ ಹನುಮನಕೊಪ್ಪ ಗ್ರಾಮದಲ್ಲಿ ಪ್ರತಿವರ್ಷ ಯುಗಾದಿ ಪಾಡ್ಯದಂದು ರೈತರು ವಿಶಿಷ್ಟ ರೀತಿಯಲ್ಲಿ ಫಲಾಫಲ ನೋಡುತ್ತಾರೆ. ಈ ಆಚರಣೆ ಮೂಲಕ ರಾಜಕಾರಣದ ಭವಿಷ್ಯ, ಮಳೆ ಹಾಗೂ ಬೆಳೆಯ ಜತೆಗೆ ಧಾನ್ಯಗಳ ಬೆಲೆ ಅಂದಾಜಿಸುತ್ತಾರೆ.

ಕಳೆದ ಯುಗಾದಿ ಅಮಾವಾಸ್ಯೆ ದಿನ ಸಂಜೆ ಗ್ರಾಮದ ಬಳಿಯ ತುಷ್ಪರಿಹಳ್ಳದ ದಂಡೆಯಲ್ಲಿ ಮಣ್ಣಿನಿಂದ ಯುಗಾದಿ ಫಲವನ್ನು ಮಾಡುತ್ತಾರೆ. ಫಲದ ನಾಲ್ಕೂ ದಿಕ್ಕಿನಲ್ಲಿ ಮಣ್ಣಿನಿಂದ ಮನುಷ್ಯನ ಆಕೃತಿ ಮಾಡುತ್ತಾರೆ. ನಾಲ್ಕೂ ಮೂಲೆಗೆ ಅನ್ನದ ಉಂಡೆ ಇಡುತ್ತಾರೆ. ಜತೆಗೆ ಮಣ್ಣಿನ ಎತ್ತು, ಗಣಪತಿ, ಶಿವ, ಪಾರ್ವತಿಯರ ಮೂರ್ತಿ ಮಾಡಿಟ್ಟಿರುತ್ತಾರೆ. ಮಾರನೇ ದಿನ ಬೆಳಗ್ಗೆ ಹೋಗಿ ಆ ಆಕೃತಿ ಏನಾಗಿದೆ ಎಂದು ನೋಡುತ್ತಾರೆ. ಅದರ ಆಧಾರದ ಮೇಲೆ ವರ್ಷದ ಭವಿಷ್ಯ ಕಂಡುಕೊಳ್ಳುತ್ತಾರೆ.

ಅದರಂತೆ ಈ ಬಾರಿ ಗ್ರಾಮಸ್ಥರು ಫಲಾಫಲ ನೋಡಲು ಹೋದಾಗ ನಾಲ್ಕೂ ಮೂಲೆಗಳಿಗೆ ಇಟ್ಟಿದ್ದ ಅನ್ನದ ಉಂಡೆಗಳು ಹಾಗೆಯೇ ಇದ್ದವು. ಇದು ಅನ್ನದ

ಕೊರತೆ ಆಗೋದಿಲ್ಲ ಎಂಬುದರ ಸಂಕೇತ ಎಂದು ಭಾವಿಸಿದ್ದರು. ವಿಶೇಷ ಎಂದರೆ ಈ ಬಾರಿ ನಾಲ್ಕೂ ದಿಕ್ಕಿಗೆ ಮಾಡಿಟ್ಟಿದ್ದ ಮನುಷ್ಯನ ಆಕಾರದ ಮೂರ್ತಿಗಳಿಗೆ ಧಕ್ಕೆಯಾಗಿತ್ತು. ಆಗ್ನೇಯ ದಿಕ್ಕಿನಲ್ಲಿ ಮಾಡಿಟ್ಟಿದ್ದ

ಕರ್ನಾಟಕದ ಮೂರ್ತಿಯ ಕಾಲು ಮುರಿದಿತ್ತು. ಇದು ರಾಜ್ಯ ರಾಜಕೀಯದಲ್ಲಿ ಪ್ರಮುಖ ವ್ಯಕ್ತಿಗೆ ಪೆಟ್ಟು ಇಲ್ಲವೆ ಮುಖ್ಯ ಹುದ್ದೆಗೆ ಕಂಟಕ ಎಂಬ ಸಂದೇಶ ನೀಡಿತ್ತು. ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಹುದ್ದೆಗೆ ಸೋಮವಾರ ರಾಜೀನಾಮೆ ನೀಡಿದ್ದಾರೆ. ಹೀಗಾಗಿ, ಈ ಬಾರಿಯ ಭವಿಷ್ಯ ನಿಜವಾಗಿದೆ ಎಂಬುದು ಸ್ಥಳೀಯರ ನಂಬಿಕೆಯಾಗಿದೆ.

1984ರಲ್ಲಿ ಯುಗಾದಿ ಭವಿಷ್ಯವು ದೇಶದ ನಾಯಕರೊಬ್ಬರಿಗೆ ತೊಂದರೆಯಾಗುವ ಮುನ್ಸೂಚನೆ ನೀಡಿತ್ತಂತೆ. ಆಗ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ನಿಧನರಾದರು ಎನ್ನುತ್ತಾರೆ ಸ್ಥಳೀಯರಾದ ನಾಗಪ್ಪ ಹಾರೋಬೆಳವಡಿ.

About The Author