ರಶ್ಮಿಕಾ ಮಂದಣ್ಣ ಹೆಚ್ಚು ನಟಿಸಿದ್ದು ನಾಯಕ ಪ್ರಧಾನ ಸಿನಿಮಾಗಳಲ್ಲೇ. ಅಲ್ಲಿ ಅವರಿಗೆ ಹಾಡು, ರೋಮ್ಯಾನ್ಸ್ , ಕೆಲವು ದೃಶ್ಯಗಳಷ್ಟೇ ಸಿಕ್ಕಿದ್ದವು. ಆದರೆ ಇದೇ ಮೊದಲ ಬಾರಿಗೆ ಮಹಿಳಾ ಪ್ರಧಾನ ಸಿನಿಮಾವಾದ “ದಿ ಗರ್ಲ್‌ಫ್ರೆಂಡ್’” ಸಿನಿಮಾ ನಲ್ಲಿ ಅಭಿನಯಿಸಿದ್ದರು. ರಶ್ಮಿಕಾ ಈ ಸಿನಿಮಾದ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದರು, ಪ್ರಚಾರವನ್ನೂ ತಾವೇ ಮುಂದೆನಿಂತು ಮಾಡಿದ್ದರು.
ನವೆಂಬರ್ 7ರಂದು ಬಿಡುಗಡೆಯಾದ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸುಮಾರು 30 ಕೋಟಿ ಗಳಿಸಿದೆ. ದೊಡ್ಡ ಹಿಟ್ ಆಗದಿದ್ದರೂ, ಸಂಪೂರ್ಣ ಸೋಲೂ ಅಲ್ಲ. ಮಹಿಳಾ ಪ್ರಧಾನ ಸಿನಿಮಾಗಳು ಸಾಮಾನ್ಯವಾಗಿ ಹೆಚ್ಚು ಚಾಲ್ತಿಗೆ ಬರುವುದಿಲ್ಲ. ಆದರೆ ‘ದಿ ಗರ್ಲ್‌ಫ್ರೆಂಡ್’ 30 ಕೋಟಿ ಗಳಿಸುವ ಮೂಲಕ ತನ್ನ ಮಟ್ಟಿಗೆ ಜನರನ್ನು ಸೆಳೆದಿದೆ.
ಸುಮಾರು 30 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದ ಈ ಚಿತ್ರದಿಂದ ನಿರ್ಮಾಪಕರಿಗೆ 50% ರಿಕವರಿ ಚಿತ್ರಮಂದಿರಗಳ ಕಲೆಕ್ಷನ್‌ನಲ್ಲಿಯೇ ಲಭಿಸಿದೆ ಎನ್ನಲಾಗಿದೆ. ಇನ್ನು ಸಿನಿಮಾದ ಒಟಿಟಿ ಮತ್ತು ಸ್ಯಾಟಲೈಟ್ ಹಕ್ಕುಗಳು ಒಳ್ಳೆಯ ಬೆಲೆಗೆ ಮಾರಾಟವಾಗಿದ್ದು, ಒಟಿಟಿ ಹಕ್ಕುಗಳಿಗೇ 15 ಕೋಟಿ ಸಿಕ್ಕಿದೆ ಎಂದು ವರದಿ ಇದೆ. ಆದ್ದರಿಂದ ಸಿನಿಮಾ ಸಂಪೂರ್ಣ ನಷ್ಟವಾಗದೆ, ತಕ್ಕ ಮಟ್ಟಿಗೆ ಯಶಸ್ಸು ಕಂಡಿದೆ.
‘ದಿ ಗರ್ಲ್‌ಫ್ರೆಂಡ್’ ಸಿನಿಮಾ ಡಿಸೆಂಬರ್ 11ರಿಂದ ಒಟಿಟಿಯಲ್ಲಿ ಲಭ್ಯವಾಗಲಿದೆ. ಈಗ ರಶ್ಮಿಕಾ ಗೀತಗೋವಿಂದಂ 2, ಕಾಕ್‌ಟೇಲ್ 2, ಟೈಗರ್ ಶ್ರಾಫ್‌ನೊಂದಿಗೆ ಹೊಸ ಪ್ರಾಜೆಕ್ಟ್, ‘ಮೈಸಾ’ ಎಂಬ ಮತ್ತೊಂದು ಮಹಿಳಾ ಪ್ರಧಾನ ಸಿನಿಮಾ, ‘ಹಾಂಟೆಡ್ – ವೂಂಡೆಡ್ – ಬ್ರೋಕನ್’, ಅಜಿತ್ ಜೊತೆಗಿನ ಸಿನಿಮಾ, ಹಾಗು ಬಹುನಿರೀಕ್ಷಿತ ‘ಪುಷ್ಪ 3’ ಸೇರಿದಂತೆ ಹಲವಾರು ಪ್ರಾಜೆಕ್ಟ್‌ಗಳಲ್ಲಿ ತೊಡಗಿಸಿಕೊಂಡಿದ್ದಾರೆ….
ವರದಿ :ಗಾಯತ್ರಿ ಗುಬ್ಬಿ

