ಭಾರತದಲ್ಲಿ ಕೊರೊನಾ ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಿದೆ. ಇಂದಿನ ಭಾರತದ ಪ್ರಕರಣದ ಸಂಖ್ಯೆ 141,986 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿದೆ. ಇದರಲ್ಲಿ 3071 ರಲ್ಲಿ ಒಮೈಕ್ರಾನ್ ರೂಪಾಂತರದ ಪ್ರಕರಣಗಳು ಸಹ ದಾಖಲಾಗಿವೆ. ಒಟ್ಟಾರೆ ಇಂದು 284 ಸಾವುಗಳು ವರದಿಯಾಗಿವೆ. ಇದರಲ್ಲಿ ಇಲ್ಲಿಯವರೆಗೆ 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 3.071 ಒಮೈಕ್ರಾನ್ ರೂಪಾಂತರ ಪ್ರಕರಣಗಳು ಸೇರಿವೆ. ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ತಿಳಿಸಿದೆ.
ವರದಿಯ ಪ್ರಕಾರ ಮಹರಾಷ್ಟçದಲ್ಲಿ ಕೊರೊನಾ ಜೊತೆಗೆ ಒಮಿಕ್ರಾನ್ ವೇರಿಯಂಟ್ ಪ್ರಕರಣಗಳು ದಾಖಲಾಗಿವೆ. ಒಟ್ಟು ಪ್ರಕರಣ 876 .
ಇನ್ನು ರಾಜಧಾನಿ ದೆಹಲಿಯಲ್ಲಿ 513, ಕರ್ನಾಟಕದಲ್ಲಿ 333, ಪ್ರಕರಣಗಳು ದಾಖಲಾಗಿವೆ, ರಾಜಸ್ತಾನ 291 , ಕೇರಳ 284 ಮತ್ತು ಗುಜರಾತ್ 204 ಈ ರಾಜ್ಯಗಳು ಹೆಚ್ಚಾಗಿ ಒಮಿಕ್ರಾನ್ ಪ್ರಕರಣಗಳನ್ನು ಹೊಂದಿವೆ. ಇನ್ನುಳಿದಂತೆ ಹಲವಾರು ರಾಜ್ಯಗಳಲ್ಲಿ ಅಲ್ಪಸ್ವಲ್ಪ ಪ್ರಕರಣಗಳು ದಾಖಲಾಗಿವೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಶನಿವಾರ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ, ಇಲ್ಲಿಯವರೆಗೆ 27 ರಾಜ್ಯಗಳು
ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 3.071 ಒಮಿಕ್ರಾನ್ ರೂಪಾಂತರ ಪ್ರಕರಣಗಳಲ್ಲಿ , 1203 ಪ್ರಕರಣಗಳು ಚೇತರಿಸಿಕೊಂಡಿವೆ.

