Saturday, July 27, 2024

Latest Posts

ಪತ್ನಿ ಈ ಕೆಲಸ ಮಾಡುವುದಿಲ್ಲವೆಂದು ಡಿವೋರ್ಸ್‌ ಕೇಳಿದ ಪತಿ: ಈ ರೀತಿ ತೀರ್ಪು ನೀಡಿದ ಕೋರ್ಟ್

- Advertisement -

National News: ಪತ್ನಿಯಾದವಳು ನನ್ನ ಸ್ನೇಹಿತರು ಸಂಬಂಧಿಕರು ಮನೆಗೆ ಬಂದಾಗ, ಅವರನ್ನು ಚೆನ್ನಾಗಿ ನೋಡಿಕೊಳ್ಳುವುದಿಲ್ಲ. ಅವರು ಮನೆಗೆ ಬಂದಾಗ, ಊಟ, ತಿಂಡಿ ಕೊಡುವುದು ದೂರದ ಮಾತು. ಚಹಾ ಸಹ ಮಾಡಿಕೊಡುವುದಿಲ್ಲ. ಹಾಗಾಗಿ ಅವಳಿಗೆ ನಾನು ವಿಚ್ಛೇದನ ನೀಡಲು ಬಯಸುತ್ತೇನೆ ಎಂದು ಪತಿ ಹೇಳಿದ್ದಾನೆ.

ಈ ಘಟನೆ ಚಂಢೀಘಢದಲ್ಲಿ ನಡೆದಿದ್ದು, ಪತಿ ಪತ್ನಿ ವಿರುದ್ಧ ಈ ಕಾರಣಕ್ಕೆ ಕೋರ್ಟ್ ಮೆಟ್ಟಿಲೇರಿದ್ದ. ಆದರೆ ಕೋರ್ಟ್ ಇಂಥ ಕಾರಣಕ್ಕೆಲ್ಲ ವಿಚ್ಛೇದನ ನೀಡಲಾಗುವುದಿಲ್ಲ ಎಂದು ಖಡಾಖಂಡಿತವಾಗಿ ತೀರ್ಪು ನೀಡಿದೆ. ಈ ಮೊದಲು ಪತಿ ಪತ್ನಿಗೆ ಹಲವು ಬಾರಿ, ತನ್ನ ಸಂಬಂಧಿಕರು ಸ್ನೇಹಿತರು ಮನೆಗೆ ಬಂದಾಗ, ಚೆನ್ನಾಗಿ ನೋಡಿಕೋ ಎಂದು ಹೇಳಿದ್ದ.

ಅಲ್ಲದೇ, ಪತ್ನಿ ನಡೆದುಕೊಳ್ಳುವ ರೀತಿಯಿಂದ ನನ್ನ ಸಂಂಬಂಧಿಕರು, ಸ್ನೇಹಿತರು ನನ್ನ ಬಳಿ ಮಾತೇ ಬಿಟ್ಟಿದ್ದಾರೆಂದು ಹೇಳಿದ್ದ. ಬಳಿಕ ಕೋರ್ಟ್‌ ಮೆಟ್ಟಿಲೇರಿದ್ದ. ಆದರೆ ತೀರ್ಪು ಪತ್ನಿ ಪರ ಬಂದಿದೆ. ಈ ಬಗ್ಗೆ ಪತ್ನಿ ಮಾತನಾಡಿದ್ದು, ಅವರು ಹೇಳುವ ಹಾಗೇನೂ ನಾನು ನಡೆದುಕೊಳ್ಳಲಿಲ್ಲ. ಇತ್ತೀಚೆಗೆ ಸಣ್ಣ ಪುಟ್ಟ ವಿಷಯಗಳಿಗೆ ಅವರು ನನ್ನ ಮೇಲೆ ರೇಗಾಡಲು ಶುರು ಮಾಡಿದ್ದಾರೆ. ಅವರ ಮಾತಿನಿಂದ ನಾನು ಡಿಪ್ರೆಶನ್‌ಗೆ ಹೋಗಿದ್ದೇನೆ. ಆದರೂ ನನಗೆ ನನ್ನ ಗಂಡ ಬೇಕು ಎಂದಿದ್ದಾಳೆ.

ಇತ್ತೀಚಿನ ದಿನಗಳಲ್ಲಿ ವಿವಾಹವಾಗುವುದು- ಡಿವೋರ್ಸ್ ತೆಗೆದುಕೊಳ್ಳುವುದು ಮಕ್ಕಳಾಟವಾಗಿ ಹೋಗಿದೆ. ವಿವಾಹವಾದ ಕೆಲವೇ ದಿನಗಳಲ್ಲಿ ಶುರುವಾಗುವ ಸಂಸಾರ ಕಲಹ, ತೀವ್ರಸ್ವರೂಪ ಪಡೆದು, ಕೋರ್ಟ್ ಮೆಟ್ಟಿಲೇರುವವರೆಗೂ ಹೋಗಿದೆ.

ಇಂದು ಬೆಂಗಳೂರಿಗೆ ರಾಹುಲ್- ಪ್ರಿಯಾಂಕಾ ನಾಳೆ ವಯನಾಡಿಗೆ ರಾಹುಲ್ ಭೇಟಿ

Sandalwood News: ದರ್ಶನ್ ಅರೆಸ್ಟ್- ನಟಿ ರಮ್ಯಾ ಎಂಟ್ರಿ!

ಮೈಸೂರು ದಸರಾ ಆನೆ ಇನ್ನಿಲ್ಲ: ವಿದ್ಯುತ್ ತಂತಿ ತಗುಲಿ ಅಶ್ವತ್ಥಾಮ ಸಾವು

- Advertisement -

Latest Posts

Don't Miss