Saturday, May 10, 2025

Latest Posts

250 ರೂ. ಟೋಪಿ 5 ಕೋಟಿಗೆ ಹರಾಜು!

- Advertisement -

ಸಾಮಾನ್ಯವಾಗಿ ಪ್ರೇಕ್ಷಕರು ಸಿನಿಮಾದ ಯಶಸ್ಸಿಗೆ ಹೀರೋ ಹೀರೋಯಿನ್​ ಅಷ್ಟೆ ಕಾರಣ ಅಂತ ಅಂದುಕೊಳ್ತಾರೆ. ಹಾಗಾಗಿಯೇ ನಾಯಕ ನಾಯಕಿಯರು ಯಾವ ರೀತಿಯ ಡ್ರೆಸ್​ ಹಾಕ್ತಾರೆ, ಯಾವ ಹೇರ್​ ಸ್ಟೈಲ್​ ಮಾಡಿಸಿಕೊಂಡಿದ್ದಾರೆ.. ಅವರ ಅಟಿಟ್ಯೂಡ್.. ಹೀಗೆ ಸ್ಟಾರ್ ನಟ-ನಟಿಯರನ್ನು ಅಭಿಮಾನಿಗಳು ಅನುಸರಿಸೋದು ಕಾಮನ್​ ಆಗಿ ಬಿಟ್ಟಿದೆ. ಇದೇ ರೀತಿ ಇಲ್ಲೊಬ್ಬ ನಾಯಕ ನಟ ಧರಿಸಿರೋ ಟೋಪಿಯನ್ನ 5 ಕೋಟಿಗೆ ಖರೀದಿಸಿದ್ದಾನೆ.. ಹೌದು ವೀಕ್ಷಕರೇ.. ಇದು ಆಶ್ಚರ್ಯ ಅನ್ನಿಸಿದ್ರೂ ಸತ್ಯ.. ಇಲ್ಲೊಬ್ಬ ಹಾಲಿವುಡ್​ ಸಿನಿಮಾದಲ್ಲಿ ನಾಯಕ ನಟ ಧರಿಸಿದ್ದ ಟೋಪಿಯನ್ನ ಹರಾಜಿನಲ್ಲಿಟ್ಟಿದ್ರು. ಈ ಟೋಪಿಯನ್ನ ಇಷ್ಟೊಂದು ದುಬಾರಿ ಬೆಲೆಗೆ ಖರೀದಿಸಿದ್ದಾನೆ.

ಹಾಲಿವುಡ್​ನ ‘ಇಂಡಿಯಾನಾ ಜೋನ್ಸ್​ ಆಂಡ್​ ದಿ ಟೆಂಪಲ್​ ಆಫ್​ ಡೂಮ್​’ ಸಿನಿಮಾದಲ್ಲಿ ಹೀರೋ ಧರಿಸಿದ್ದ ಟೋಪಿಯನ್ನ ಕೆಲವು ದಿನಗಳ ಹಿಂದೆ ಲಾಸ್​ ಏಂಜಲ್ಸ್​ನಲ್ಲಿ ಹರಾಜಿಗೆ ಇಡಲಾಗಿತ್ತು. ನೀವೇನಾದ್ರೂ ಈ ಟೋಪಿಯನ್ನ ನೋಡಿದ್ರೆ ನಿಜಕ್ಕೂ, ಈತ ಏನಾದ್ರೂ ಹುಚ್ಚನಾ ಅಂತ ಅಂದುಕೊಳ್ತಿರಾ! ಈ ಟೋಪಿ ನೋಡೋಕೆ ಎಷ್ಟು ಸಿಂಪಲ್​ ಆಗಿದೆ ಅಂದ್ರೆ, ಅಯ್ಯೋ ನಮ್ ಊರಲ್ಲಿ ಬೀದಿ ಬೀದಿಯಲ್ಲೂ ಇಂತ ಟೋಪಿ ಸಿಗುತ್ತೆ ಅಂತೀರಾ.. ಯಾವುದೇ ರೀತಿಯ ಡಿಸೈನ್​ ಇಲ್ಲ, ತುಂಬಾ ಹಳೆದಾಗಿದ್ದು, ಶೂಟಿಂಗ್​ ಟೈಮ್​ನಲ್ಲಿ ಆದಂತಹ ಕಲೆಗಳೆಲ್ಲಾ ಟೋಪಿ ಮೇಲೆ ಕಾಣಿಸುತ್ತೆ. ಹ್ಯಾರಿಸನ್‌ ಪೋರ್ಡ್‌ ನಾಯಕನಾಗಿ ನಟಿಸಿರುವ ಇಂಡಿಯಾನಾ ಜೋನ್ಸ್ ಆಂಡ್ ದಿ ಟೆಂಪಲ್ ಆಫ್‌ ಡೂಮ್‌ ಸಿನಿಮಾವನ್ನು ಭಾರತದಲ್ಲಿ ಸಂಪೂರ್ಣವಾಗಿ ಚಿತ್ರೀಕರಣ ಮಾಡಲಾಗಿತ್ತು. ಈ ಚಿತ್ರದಲ್ಲಿ ವಿಲನ್​ ಆಗಿ ಬಾಲಿವುಡ್‌ ನಟ ಅಮರೀಶ್ ಪುರಿ ನಟಿಸಿದ್ರು. 1984ರಲ್ಲಿ ಈ ಸಿನಿಮಾ 33 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಈಗ ಅದು 3 ಸಾವಿರ ಕೋಟಿ ರೂಪಾಯಿಗಳ ಸಮ ಎನ್ನಲಾಗಿದೆ. ಅಷ್ಟೇ ಯಾಕೆ ಅತ್ಯುತ್ತಮ ವಿಷ್ಯುಲ್ ಎಫೆಟ್ಸ್‌ ಲಿಸ್ಟ್‌ನಲ್ಲಿದ್ದು ಆಸ್ಕರ್ ಪ್ರಶಸ್ತಿಯನ್ನು ಪಡೆದಿದೆ.

ಈ ಟೋಪಿ​ ಚಿನ್ನದೇನಲ್ಲ. ತುಂಬಾ ಸಿಂಪಲ್ ಆಗಿದ್ದು, ಯಾವ ರೀತಿಯ ಡಿಸೈನ್ ಕೂಡ ಇಲ್ಲ. ಲಾಸ್​ ಏಂಜಲ್ಸ್​ನಲ್ಲಿ ನಡೆದ ಹರಾಜಿನಲ್ಲಿ ಚಿತ್ರಪ್ರೇಮಿಯೊಬ್ಬ 5ಕೋಟಿ ರೂಪಾಯಿಗೆ ಈ ಟೋಪಿಯನ್ನ ಖರೀದಿ ಮಾಡಿದ್ದಾನೆ. ಈತ ಈ ಭಾರಿ ಮೊತ್ತಕ್ಕೆ ಟೋಪಿ ಖರೀದಿ ಮಾಡಿದ್ದನ್ನು ನೋಡಿ ನೆಟ್ಟಿಗರು ಕೂಡ ಒಂದು ಕ್ಷಣ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಈತ ಗೋವಾಗೆ ಹೋಗಿಲ್ಲ ಅಂತ ಕಾಣುತ್ತೆ. ಅಲ್ಲಿಗೆ ಏನಾದ್ರೂ ಈತ ಹೋಗಿದಿದ್ರೆ, ಕೇವಲ 250 ರೂಪಾಯಿಗೆ ಸಿಗುತ್ತಿತ್ತು. ಯಾರೋ ಈತ ಬಕ್ರ ಇರಬೇಕು. 5 ಕೋಟಿಗೆ ಟೋಪಿಯ ಅಂಗಡಿಯನ್ನೇ ಇಡಬಹುದಿತ್ತು ಅಂತೆಲ್ಲಾ ಕಾಲೆಳೆದಿದ್ದಾರೆ.

-ಸ್ವಾತಿ.ಎಸ್.

- Advertisement -

Latest Posts

Don't Miss