ಒಳಗಿನ ತಿಳಿ ಕಲಕಿದ್ದಾರೆ : ಹತ್ತಿರವಿದ್ರೂ ದೂರಾ ದೂರ – MLC S.L ಭೋಜೇಗೌಡ

ಕರ್ನಾಟಕ ರಾಜ್ಯ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಬಗ್ಗೆ, MLC ಎಸ್.ಎಲ್. ಭೋಜೇಗೌಡ ವ್ಯಂಗ್ಯವಾಡಿದ್ದಾರೆ. ಸಿದ್ದರಾಮಯ್ಯ–ಡಿ.ಕೆ. ಶಿವಕುಮಾರ್ ನಡುವೆ ಒಪ್ಪಂದ ಆಗಿದೆ ಎಂಬುದು ಎಲ್ಲರಗೂ ಗೊತ್ತಾಗಿದೆ. ನಮಗಷ್ಟೇ ಅಲ್ಲ ಸಾರ್ವಜನಿಕರಿಗೂ ಗೊತ್ತಾಗಿದೆ.

ಏನೂ ಒಂದು ಮಾತು ಕಥೆಯಾಗಿದೆ. ಆ ಮಾತುಕತೆ ಆಗಿಲ್ಲ ಅಂದಿದ್ರೆ ಇಷ್ಟೊಂದು, ಪಟ್ಟಾಗಿ ಬಣದ ರಾಜಕೀಯ ನಡೆಯುತ್ತಿರಲಿಲ್ಲ. ಡಾ. ಜಿ.ಎಸ್. ಶಿವರುದ್ರಪ್ಪ ಅವರು ಹೇಳೀದಂತೆ, ಒಳಗಿನ ತಿಳಿಯನು ಕದಡದೆ ಇದ್ದರೆ, ಅಮೃತದ ಸವಿ ಇದೆ ನಾಲಗೆಗೆ ಎನ್ನುವ ಹಾಗೇ, ಈಗ ಒಳಗಿನ ತಿಳಿ ಕಲಕಿದ್ದಾರೆ. ತಿಳಿಯೇನು ಇರಲಿಲ್ಲ ಈಗ 6 ತಿಂಗಳಿನಿಂದ ಪೂರ್ತಿ ಕಲಕಿಬಿಟ್ಟಿದ್ದಾರೆ. ಹತ್ತಿರವಿದ್ದು ದೂರ ನಿಲ್ಲುವೇವು ಎನ್ನುವಂತೆ ಪರಿಸ್ಥಿತಿ ಉಂಟಾಗಿದೆ ಎಂದು ಟೀಕಿಸಿದ್ದಾರೆ.

ನಮಗೆ ಇದಕ್ಕೂ ಯಾವುದೇ ಸಂಬಂಧವಿಲ್ಲ. ಯಾವ ಒಪ್ಪಂದಕ್ಕೆ ಬರಲಾಗಿದೆ ಎಂದು ನಮಗೆ ತಿಳಿದಿಲ್ಲ. ಅವರ ಹೈಕಮಾಂಡ್ ಈ ಬಗ್ಗೆ ಏಕೆ ಮೌನವಾಗಿದೆ? ಅಂತ ಭೋಜೇಗೌಡ್ರು ಪ್ರಶ್ನಿಸಿದ್ದಾರೆ. ನಾಯಕತ್ವ ಬದಲಾವಣೆ ಅವರ ಪಕ್ಷದ ಸಮಸ್ಯೆ. ಇದು ಕರ್ನಾಟಕದ ಜನರೊಂದಿಗೆ ಸಂಪರ್ಕ ಹೊಂದಿಲ್ಲ. ಜನರು ರಾಜ್ಯವನ್ನು ಆಳಲು ಕಾಂಗ್ರೆಸ್‌ಗೆ ಐದು ವರ್ಷಗಳ ಜನಾದೇಶವನ್ನು ನೀಡಿದ್ದಾರೆ. ಕಾಂಗ್ರೆಸ್‌ನ ಆಂತರಿಕ ಸಮಸ್ಯೆಯ ಬಗ್ಗೆ ಯಾರಿಗೂ ಆಸಕ್ತಿ ಇಲ್ಲ ಎಂದು MLC ಎಸ್.ಎಲ್. ಭೋಜೇಗೌಡ ಹೇಳಿದ್ದಾರೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

About The Author