Thursday, May 30, 2024

Latest Posts

‘ಕಾಂಗ್ರೆಸ್‌ನ ಸವಾಲಿಗೆ ಪ್ರತ್ಯುತ್ತರ ಕೊಡುವ ಸಾಮರ್ಥ್ಯ ಜೆಡಿಎಸ್ ಹಾಗೂ ಬಿಜೆಪಿ ಒಕ್ಕೂಟಕ್ಕೆ ಇದೆ’

- Advertisement -

Political News: ಹಾಸನ: ಹಾಸನದಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಪಂಚರಾಜ್ಯ ವಿಧಾನಸಭಾ ಚುನಾವಣೆ ಬಗ್ಗೆ ಹೇಳಿಕೆ ನೀಡಿದ್ದಾರೆ.

ವಿಧಾನಸಭೆಗೆ ನಡೆದ 5 ರಾಜ್ಯಗಳ ಚುನಾವಣೆ ಫಲಿತಾಂಶ ಹೊರ ಬಿದ್ದಿದೆ. ಈ ಹಿಂದೆ ತಾನು ಬಂದಾಗ ಹೀಗೆ ಆಗಬಹುದು ಎಂಬ ಭಾವನೆಯನ್ನು ಸಮೀಕ್ಷೆಗಳ ಆಧಾರದ ಮೇಲೆ ವ್ಯಕ್ತಪಡಿಸಿದ್ದೆ. NDA ಪರಿಯವಾಗಿ I.N.D.I.A ಓಕ್ಕೂಟದ ಪಕ್ಷಗಳು ಸೇರಿ ,ನಮ್ಮದು ಜನತಾದಳ ಸೆಕ್ಯೂಲರ್,. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಅದಾಗ ಈ ರಾಷ್ಟ್ರದ ಎಲ್ಲಾ ಮುಖಂಡರು ಭಾರತಿಯ ಪಕ್ಷ ಬಿಟ್ಟು ಎಲ್ಲಾ ಲೀಡರ್ಸ್ ಸೆಕ್ಯೂಲರ್ ಪಕ್ಷದಲ್ಲಿ ಭಾಗಿ ಆಗಿದ್ರು.

ನಮ್ಮನ್ನು ಹೊರಗೆ ಇಡಲು ಹಾಗೂ ಕುಮಾರಸ್ವಾಮಿ ಸರ್ಕಾರ ತೆಗೆಯಲು ಕಾರಣ ರಾದವರು ಯಾರು? ನಿತೀಶ್ ಕುಮಾರ್ ನಾಯಕತ್ವದಲ್ಲಿ ಪ್ರಯತ್ನ ಮಾಡಿದಾಗ ನಮ್ಮನ್ನ ಹೊರಗೆ ಇಟ್ಟಿದ್ರು. ಆ ವೇಳೆ ಮೋದಿ ಮತ್ತು ಶಾ ನಮ್ಮನ್ನು ಆಹ್ವಾನ ಮಾಡಿದ್ರು. ನಮ್ಮನ್ನ ದೂಡಿದ್ದು ಕಾಂಗ್ರೆಸ್ .ಜೆಡಿಎಸ್ ಲೆಕ್ಕಕ್ಕೆ ಇಲ್ಲ, ಕೆಲವೇ ದಿನಗಳಲ್ಲಿ ಜೆಡಿಎಸ್ ಮುಳುಗಲಿದೆ ಎಂದು ಕಾಂಗ್ರೆಸ್ ಮುಖಂಡರು ಬಹಳ ಲಘುವಾಗಿ ಮಾತನಾಡಿದರು ಎಂದು ದೇವೇಗೌಡರು ಹೇಳಿದ್ದಾರೆ.

ಕಾಂಗ್ರೆಸ್ ನ ನಡವಳಿಕೆಯನ್ನು ಸೂಕ್ಷ್ಮವಾಗಿ ಗಮನಿಸಿದ ನಂತ,ರ ನಮ್ಮನ್ನ ಮತ್ತು ನಮ್ಮ ಪಕ್ಷವನ್ನು ಮೋದಿ ಮತ್ತು ಷಾ ವೆಲ್ಕಮ್ ಮಾಡಿದ್ದಾರೆ. ಕಾಂಗ್ರೆಸ್ ವಿರುದ್ಧ ಹೋರಾಟ ಮಾಡಲು ಮುಂದಿನ ದಿನಗಳಲ್ಲಿ ಬಿಜೆಪಿ ಜೊತೆ ಸೇರಿ ಜೆಡಿಎಸ್ ಮುಂದಾಗಲಿದೆ. ಇದರಲ್ಲಿ ಯಾವುದೇ ಮುಚ್ಚು ಮರೆ ಇಲ್ಲ ಎಂದರು.

ನಮ್ಮ ಪಕ್ಷ ಜೆಡಿಎಸ್ ಉಳಿಯಬೇಕು. ಈ ನಿಟ್ಟಿನಲ್ಲಿ ಜನತಾ ಪರಿವಾರ ಆರಂಭವಾದ  ಅಂದಿನಿಂದಲೂ, ಪಕ್ಷವನ್ನು ಉಳಿಸಿಕೊಂಡು ಬಂದಿದ್ದೇವೆ. ಬಡವರ ದೀನ ದಲಿತರ ಹಾಗೂ ಹಿಂದುಳಿದ ವರ್ಗಗಳ ಕಷ್ಟಕ್ಕೆ ಸ್ಪಂದಿಸಿ ಅವರಿಗೆ ಜೆಡಿಎಸ್ ನೆರವಾಗಿದೆ. ಇಂತಹ ಪಕ್ಷವನ್ನು ಮುಗಿಸಿಯೇ ಬಿಡುತ್ತೇವೆ ಎಂದು ಕಾಂಗ್ರೆಸ್ ಹೇಳಿದಾಗ, ಮೋದಿ ಮತ್ತು ಷಾ ಅವರು ರಾಜ್ಯ ಮತ್ತು ರಾಷ್ಟ್ರ ಮಟ್ಟದ ನಾಯಕರ ಜೊತೆ ಸಮಾಲೋಚನೆ ಮಾಡಿ ನಮ್ಮನ್ನು ಜೊತೆಗೆ ಸೇರಿಸಿಕೊಂಡರು ಎಂದಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲಿ  28 ಸ್ಥಾನವನ್ನು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ ಅದಕ್ಕೆ ಪರ್ಯಾಯವಾಗಿ ನಾವು ಕೂಡ ಎಲ್ಲಾ ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಮುಂದಿನ ವಾರ ಮೋದಿ ಹಾಗೂ ಶಾ ಅಭ್ಯರ್ಥಿಗಳ ಆಯ್ಕೆ ಕುರಿತು ಸಭೆ ಕರೆಯಲಿದ್ದಾರೆ. ಅವರ ಜೊತೆ ಕುಳಿತು ತೀರ್ಮಾನ ಮಾಡ್ತೇವೆ ಎಂದು ದೇವೇಗೌಡರು ಹೇಳಿದ್ದಾರೆ.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ  ಎಲ್ಲಾ 28 ಸ್ಥಾನಗಳಲ್ಲೂ ಗೆಲ್ಲುತ್ತೇವೆ ಎಂಬ ಕಾಂಗ್ರೆಸ್ ನ ಸವಾಲಿಗೆ ಪ್ರತ್ಯುತ್ತರ ಕೊಡುವ ಸಾಮರ್ಥ್ಯ ಜೆಡಿಎಸ್ ಹಾಗೂ ಬಿಜೆಪಿ ಒಕ್ಕೂಟಕ್ಕೆ ಇದೆ ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಹೇಳಿದ್ದಾರೆ.

ಕಾಂಗ್ರೆಸ್ ಗೆ ಕರ್ನಾಟಕದಲ್ಲಿ 135 ಸ್ಥಾನ ಗೆದ್ದಿದೇವೆ ಎಂಬ ಅಹಂ ಇದೆ. ಅದರ ವಿರುದ್ದ ಹೋರಾಟ ಮಾಡುವ ಶಕ್ತಿ ಮೋದಿ ಅವರ ನಾಯಕತ್ವದಲ್ಲಿ ಜೆಡಿಎಸ್ ಸಹಕಾರಕ್ಕೆ ಇದೆ ಎಂದರು. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ರಾಜ್ಯದ ಸಂಪತ್ತನ್ನು ಯಾರಿಗಾದ್ರೂ ಕೊಟ್ರಾ ? ಆದರೆ ಈಗ ರಾಜ್ಯದ ಸಂಪತ್ತು ಲೂಟಿ ಆಗುತ್ತಿದೆ. ತೆಲಂಗಾಣದಲ್ಲಿ ಕಾಂಗ್ರೆಸ್ ಗೆಲ್ಲಲು ಎಷ್ಟು ಹಣ ಕರ್ನಾಟಕ ರಾಜ್ಯದಿಂದ ಹೋಗಿದೆ..? ಎಲೆಕ್ಷನ್ ಕಮಿಷನ್ ಎಷ್ಟು ಹಣ ಸೀಜ್ ಮಾಡಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಕರ್ನಾಟಕ ರಾಜ್ಯದಲ್ಲಿನ ಹಣವನ್ನು ತೆಲಂಗಾಣ ಚುನಾವಣೆಗೆ ಬಳಸಿದ್ದೆ ಅಲ್ಲಿ ಕಾಂಗ್ರೆಸ್ ಗೆಲ್ಲಲು ಕಾರಣವಾಯಿತು ಎಂದರು.

‘ಸಾಯೋಕೆ ನನ್ನ ₹1.5 ಕೋಟಿ ಕಾರೇ ಆಗಬೇಕಿತ್ತಾ..? ಸುಟ್ಟು ಹಾಕ್ರೋ ಗಾಡಿನಾ’

ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಜನರಿಗೆ ಸಿದ್ದರಾಮಯ್ಯ ಸಿಹಿ ಸುದ್ದಿ ನೀಡುತ್ತಾರಾ ಎಂಬ ನಿರೀಕ್ಷೆಯಿದೆ : ವಿಜಯೇಂದ್ರ

ಬಿಜೆಪಿ ಬಿಟ್ಟು ಹೋಗಲ್ಲ: ಫಲಿತಾಂಶದ ಬೆನ್ನಲ್ಲೇ ಎಸ್‌.ಟಿ.ಸೋಮಶೇಖರ್ ಯೂಟರ್ನ್?

- Advertisement -

Latest Posts

Don't Miss