ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಆತಂಕ ಮೂಡಿಸಿದ್ದ, ಚಡ್ಡಿ ಗ್ಯಾಂಗ್, ಬ್ಯ್ಲಾಕ್ ಅಂಡ್ ವೈಟ್ ಗ್ಯಾಂಗನ್ನು ಎಡೆಮುರಿ ಕಟ್ಟಿದ್ದಾಯ್ತು. ಈಗ ಕಾಡಿಯಾ ಗ್ಯಾಂಗ್ ಸರದಿ. ತುಮಕೂರು ನಾಗರೀಕರ ನಿದ್ದೆಗೆಡ್ಡಿಸಿದ್ದ, ಖತರ್ನಾಕ್ ಕಾಡಿಯಾ ಗ್ಯಾಂಗ್ ಕೊನೆಗೂ ಕಂಬಿ ಹಿಂದೆ ಲಾಕ್ ಆಗಿದೆ.
ಬ್ಯಾಂಕ್‌ಗಳೇ ಇವರ ಹಾಟ್ ಸ್ಪಾಟ್ ಆಗಿದ್ವು. ವೃದ್ಧರನ್ನೇ ಟಾರ್ಗೆಟ್ ಮಾಡ್ಕೊಂಡು ಹಣ ಎಗರಿಸುತ್ತಿದ್ರು. ಬರೀ ಮಹಿಳೆಯರೇ ಇರೋ ಕಳ್ಳತನದ ಗ್ಯಾಂಗ್ ಇದಾಗಿತ್ತು. ಕೇವಲ ಕಾರು ಚಾಲನೆಗಷ್ಟೇ ಒಬ್ಬ ಪುರುಷನಿದ್ದ. ಟಾರ್ಗೆಟ್ ಮಾಡೋದು, ಯಾಮಾರಿಸೋದು,
ಹಣ ಎಗರಿಸೋದು ಸೇರಿ ಕಳ್ಳತನದ ರೂಪುರೇಷೆ ಮಹಿಳೆಯರ ಕೆಲಸವಾಗಿತ್ತು.
ಎಷ್ಟೇ ಜಾಗರೂಕರಾಗಿದ್ರೂ ಕ್ಷಣಮಾತ್ರದಲ್ಲಿ ಯಾಮಾರಿಸಿ, ಹಣ ಕದ್ದು ಎಸ್ಕೇಪ್ ಆಗ್ತಿದ್ರು. ಸೆಪ್ಟೆಂಬರ್ 3ರಂದು ನಿವೃತ್ತ ಶಿಕ್ಷಕ ಗಂಗಪ್ಪ, ಎಸ್‌ಬಿಐಗೆ ಹಣ ಕಟ್ಟಲು ಬಂದಿದ್ರು. ಚಲನ್ ಫಿಲ್ ಮಾಡ್ತಿದ್ದಾಗ ಗಂಗಪ್ಪ ಕೈಯ್ಯಲ್ಲಿದ್ದ ಬ್ಯಾಗನ್ನೇ ಕತ್ತರಿಸಿ, 1 ಲಕ್ಷದ 75 ಸಾವಿರ ರೂಪಾಯಿ ಹಣ ಕಳವು ಮಾಡಿದ್ರು. ಘಟನೆ ಸಂಬಂಧ ಮಧುಗಿರಿಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ಆರಂಭಿಸಿದ್ದ ಪೊಲೀಸರು, ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ದೀಪಮಾಲ, ಫರೊತಾ ಸಿಸೋಡಿಯಾ, ರೇಖಾಬಾಯಿ, ಪ್ರದೀಪ್ ಸಿಸೊಡಿಯಾ, ಮಮತ, ಮಲಬಾಯಿ ಜೈಲು ಸೇರಿದ್ದಾರೆ.ಆರೋಪಿಗಳು ಮಧ್ಯಪ್ರದೇಶದ ಕಾಡಿಯಾ ಊರಿನವರು. ರಾಜ್ಯ ಬಿಟ್ಟು ಊರೂರು ಅಲೆಯುತ್ತಾ, ಕಳ್ಳತನವನ್ನೇ ಕಾಯಕ ಮಾಡಿಕೊಂಡಿದ್ರು. ಕರ್ನಾಟಕ, ಆಂಧ್ರಪ್ರದೇಶದಲ್ಲಿ 9 ಕಡೆ ಕಳ್ಳತನ ಮಾಡಿದ್ದಾರೆ. ಸದ್ಯ, ಕಾಡಿಯಾ ಗ್ಯಾಂಗ್ ಜೈಲು ಸೇರಿದ್ದು, ತುಮಕೂರು ಜನರು ನಿಟ್ಟುಸಿರು ಬಿಟ್ಟಿದ್ದಾರೆ.