Tuesday, June 3, 2025

Latest Posts

ಮೂರು ವರ್ಷಗಳ ನಂತರ ರೂಂನಿಂದ ಹೊರಬಂದ ಲೇಡಿ…!

- Advertisement -

National news

ನವದೆಹಲಿ(ಫೆ.25): ಕೋವಿಡ್19 ಶುರುವಾದ ಬಳಿಕ ಜನಜೀವನ ಹೇಗಿತ್ತು ಅಂತ ಎಲ್ಲರಿಗೂ ಗೊ್ತ್ತಿರುತ್ತೆ. ಪ್ರತಿಯೊಂದು ಕ್ಷೇತ್ರದಲ್ಲಿಯೂ ನಮ್ ದೇಶ ಕುಗ್ಗಿ ಹೋಗಿ, ಇದೀಗ ಒಂದು ಹಂತಕ್ಕೆ ತಲುಪಿ, ಸುಧಾರಣೆ ಕಂಡಿದೆ, ನಿಮ್ಗೊತ್ತಾ, ಇಲ್ಲೊಬ್ರು ಲೇಡಿ, ಕೋವಿಡ್ ಶುರುವಾಗಿದ್ದೇ ತಡ, ತನ್ನ ಮನೆಯಿಂದ 3 ವರ್ಷ ಹೊರಗೆ ಬಂದೇ ಇಲ್ಲ.. ಯಾಕೆ ಅಂತ ಹೇಳ್ತೀವಿ ಈ ಸ್ಟೋರಿ ನೋಡಿ..

ನಮಗೆಲ್ಲಾ ಗೊತ್ತಿರುವ ಹಾಗೆ ಚೀನಾದಲ್ಲಿ ಶುರುವಾದ ಕೋವಿಡ್ 19 ಸೋಂಕು ಇಡೀ ಪ್ರಪಂಚದಾದ್ಯಂತ ಸ್ಪ್ರೆಡ್ ಆಗಿ ಸಾಕಷ್ಟು ಜನರ ಸಾವು ನೋವುಗಳಿಗೆ ಕಾರಣವಾಯ್ತು..ಕೊರೋನಾ ಎಂಬ ಮಹಾಮಾರಿಯಿಂದ ಸತ್ತವರ ಸಂಖ್ಯೆ ಅದೆಷ್ಟೋ..ವರ್ಷಗಟ್ಟಲೆ ಜನ ಸಾವು , ಬದುಕಿನ ನಡುವೆ ಹೋರಾಟ ನಡೆಸಿ, ಕೊನೆಗೆ ತಮ್ಮ ಫ್ಯಾಮಿಲಿಯೂ ಇಲ್ಲದೇ ಕಣ್ಣೀರಲ್ಲಿ ಕೈ ತೊಳೆಯುವ ಸಂದರ್ಭ ಉಂಟಾಗಿತ್ತು. ಆದ್ರೆ, ಇಲ್ಲೊಬ್ರು ಕೊರೋನಾ ಶುರುವಾಗಿ 3 ವರ್ಷವಾಗಿದ್ರು ಮನೆಯ ಹೊರಗೆ ಬಾರದೆ ಗೃಹ ಬಂಧಿಯಾಗಿರೋ ವಿಶೇಷ ಘಟನೆ ಇತ್ತೀಚೆಗೆ ಬೆಳಕಿಗೆ ಬಂದಿದೆ. ಹೌದು ಇದು ವಿಚಿತ್ರ ಅನಿಸಿದರೂ ದೆಹಲಿಯಲ್ಲಿ ನಡೆದ ನೈಜ ಘಟನೆ ಇದು…

2020 ರಿಂದ ಇಡೀ ಜಗತ್ತೇ ಕೋವಿಡ್ ವೈರಸ್ ಕಾಟಕ್ಕೆ ನಲುಗಿ ಹೋಗಿತ್ತು. ಸುಮಾರು ಎರಡು ವರ್ಷಗಳ ಕಾಲ ಜನರು ಲಾಕ್ಡೌನ್ ಅನ್ನು ಕೂಡ ಅನುಭವಿಸಿದ್ದರು, ಈಗ ಜನರು ಮೊದಲಿನಂತೆ ಮನೆಯಿಂದ ಹೊರ ಬರಲು ಧೈರ್ಯ ಮಾಡಿದ್ದಾರೆ. ಆದರೆ ಇಲ್ಲೊಬ್ಬ ಮಹಿಳೆ ಕೋವಿಡ್ಗೆ ಹೆದರಿ 2020 ರಿಂದ ಮನೆಯ ಹೊರಗೆ ಬಂದಿಲ್ಲ. ಗುರುಗ್ರಾಮ್ನ ಮಾರುತಿ ಕುಂಜ್ ನಗರ ನಿವಾಸಿ ಮುನ್ಮುನ್ ಮಾಝಿ, ಸುಮಾರು 2020 ರಿಂದ ತಾನು ಹೊರಬಾರದೆ ತನ್ನ ಮಗನನ್ನು ಮನೆ ಒಳಗೆ ಕೂಡಿ ಹಾಕಿದ್ದಾಳೆ. ಕೊನೆಗೆ (ಫೆಬ್ರವರಿ 21) ಆರೋಗ್ಯ, ಪೊಲೀಸ್ ಮತ್ತು ಮಕ್ಕಳ ಸೇವಾ ಇಲಾಖೆಯ ಅಧಿಕಾರಿಗಳ ತಂಡ ಈ ತಾಯಿ ಮಗುವನ್ನು ಗೃಹ ಬಂಧನದಿಂದ ಹೊರತರುವಲ್ಲಿ ಯಶಸ್ವಿಯಾಗಿದ್ದಾರೆ.

ಕೋವಿಡ್ ಸೋಂಕಿನಿಂದ ತಪ್ಪಿಸಿಕೊಳ್ಳಲು ದೆಹಲಿಯ ಗುರುಗ್ರಾಮದಲ್ಲಿರುವ ತಮ್ಮ ಮನೆಯಲ್ಲಿಯೇ ಸ್ವಯಂಬಂಧಿ ತರಾಗಿದ್ದರು ಈ ತಾಯಿ ಮಗ. ತಾಯಿ ಭಯದಿಂದ ಹೊರ ಬಾರದೆ ಇದ್ದರೆ ಮಗನನ್ನು ಬಲವಂತವಾಗಿಯೇ ಮನೆಯಲ್ಲಿ ಕೂಡು ಹಾಕಿದ್ದಳು. ಕಾರಣ ಇಷ್ಟೇ ಆಕೆಗೆ ಕೊರೊನಾ ಕುರಿತಾಗಿದ್ದ ಭಯ. ಸತತ ಮೂರು ವರ್ಷಗಳ ಕಾಲ ತನ್ನನ್ನು ಮತ್ತು ತನ್ನ ಮಗನನ್ನು ಗೃಹಬಂಧನದಲ್ಲಿರಿಸಿದ್ದಳು. ಸ್ವತಃ ಗಂಡನನ್ನು ಮನೆ ಒಳಗೆ ಬರಲು ಬಿಟ್ಟಿರಲಿಲ್ಲ. ಗಂಡ ಸುಜನ್ ಮಾಝಿ ಪ್ರೈವೇಟ್ ಕಂಪನಿ ಒಂದರಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. 2020 ರಲ್ಲಿ ಲಾಕ್ಡೌನ್ ನಿಯಮಗಳು ಸಡಿಲಿಸಿದ ನಂತರ ಸುಜನ್ ಕೆಲಸಕ್ಕೆಂದು ತೆರಳಿ ಸಂಜೆ ಮನೆಗೆ ಮರಳುವಷ್ಟರಲ್ಲಿ ಹೆಂಡತಿ ಮನೆ ಬಾಗಿಲನ್ನು ತೆಗಿಯದೇ ರಾದ್ದಂತ ಮಾಡಿದ್ದಳಂತೆ.

ಸುಜನ್ ಮಾಝಿ ಅವರು ತಮ್ಮ ಪತ್ನಿಗೆ ಹಲವಾರು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಈ ಕಾರಣದಿಂದಲೇ ಹೆಂಡತಿ ವಿಚಿತ್ರ ವರ್ತನೆಗೆ ಬೇಸತ್ತ ಗಂಡ ಬಾಡಿಗೆಗೆ ಮನೆಯನ್ನು ತೆಗೆದುಕೊಂಡು ಅಲ್ಲಿಯೇ ವಾಸವಾಗಿದ್ದರಂತೆ. ಈ ಮಹಿಳೆ ಕಳೆದ ಮೂರು ವರ್ಷಗಳಿಂದ ಗಂಡ ಮುನ್ಮುನ್ ಮತ್ತು ಅವರ ಪುತ್ರನೊಂದಿಗೆ ವೀಡಿಯೊ ಕರೆ ಮೂಲಕ ಮಾತ್ರ ಸಂಪರ್ಕ ಮುಂದುವರೆಸಿದ್ದರು. ಅವರು ಬಾಡಿಗೆ, ವಿದ್ಯುತ್ ಬಿಲ್‌ಗಳು ಮತ್ತು ಮಗನ ಶಾಲಾ ಶುಲ್ಕವನ್ನು ಸಮಯದುದ್ದಕ್ಕೂ ಪಾವತಿಸಿದ್ದರು. ಪ್ರತಿ ನಿತ್ಯ ದಿನಸಿಗಳನ್ನು ಖರೀದಿಸಿ ಮನೆಯ ಬಾಗಿಲಿನ ಹೊರಗೆ ಇಟ್ಟು ಬರುತ್ತಿದ್ದರು.

ಮನೆಯೊಳಗೆ ಬೀಗ ಹಾಕಿಕೊಂಡಿದ್ದ ಮುನ್ಮುನ್ ಹೊರಗಿನ ಪ್ರಪಂಚದ ಸಂಪರ್ಕವನ್ನು ಕಡಿತಗೊಳಿಸಲು ಎಲ್ಲ ವ್ಯವಸ್ಥೆಯನ್ನೂ ಮಾಡಿಕೊಂಡಿದ್ದರು. ಅಡುಗೆಗೆ ಗ್ಯಾಸ್ ಉಪಯೋಗಿಸಿದರೆ ಅದನ್ನು ತುಂಬಬೇಕಾಗುತ್ತದೆ ಎಂದು ಇಂಡಕ್ಷನ್‌ನಲ್ಲಿ ಅಡುಗೆ ಮಾಡುತ್ತಿದ್ದರು. ಆನ್‌ಲೈನ್ ತರಗತಿಗಳಿಗೆ ಹಾಜರಾ ಗಬೇಕಾಗಿರುವುದರಿಂದ ಅವರು ತಮ್ಮ ಮಗನಿಗೆ ಸ್ಮಾರ್ಟ್‌ಫೋನ್ ಬಳಸಲು ಅವಕಾಶ ನೀಡಿದ್ದರು.

ಈ ಮೂರೂ ವರ್ಷವೂ ಮುನ್ಮುನ್ ಬಂಧನದಿಂದ ಹೊರಬರುವಂತೆ ಸುಜನ್ ಮನವೊಲಿಸಲು ಪ್ರಯತ್ನಿಸಿದರು. ಆದರೆ, ಮುನ್ಮುನ್ ಪ್ರತಿ ಬಾರಿಯೂ ಗಂಡನ ಮನವಿಯನ್ನು ತಿರಸ್ಕರಿಸಿದ್ದರು. ಮಕ್ಕಳಿಗೆ COVID ಲಸಿಕೆ ಇದ್ದರೆ ತಮ್ಮ 10 ವರ್ಷದ ಮಗನೊಂದಿಗೆ ಮನೆ ಇಂದ ಹೊರಗೆ ಬರಲು ಒಪ್ಪುತ್ತೇನೆ ಎಂದಿದ್ದರು. ಆದರೆ ಇಲ್ಲಿಯವರೆಗೂ, 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಯಾವುದೇ ಲಸಿಕೆ ಬಂದಿಲ್ಲ. ಒಟ್ಟಾರೆ 3 ವರ್ಷಗಳ ಬಳಿಕ ಸೂರ್ಯನನ್ನೇ ನೋಡದೆ ಸೂರಿನೊಳಗಡೆಯೇ ಬಂಧಿಯಾಗಿರೋ ಮಹಿಳೆಗೆ ಗಂಡ ಹಾಗು ಅಲ್ಲಿನ ಆರೋಗ್ಯ ಇಲಾಖೆ ಶಿಕ್ಷಣ ಇಲಾಖೆ ಮುಂತಾದವರು ಮನವೊಲಿಸಿ ಹೊರ ಕಾಲಿಡುವಂತೆ ಮಾಡಿದ್ದಾರೆ. ಇತ್ತೀಚೆಗಷ್ಟೇ ಮನೆಯಿಂದ ಹೊರ ಬಂದು ಮಹಿಳೆ ಮತ್ತೆ ಮೊದಲಿನ ಜೀವನಕ್ಕೆ ಹೊಂದಿಕೊಳ್ಳುತ್ತಿದ್ದಾರೆ.

 

ಇಂದಿನಿಂದ ದರ್ಶನ್ ಪುಟ್ಟಣ್ಣಯ್ಯ ಪಾದಯಾತ್ರೆ…!

- Advertisement -

Latest Posts

Don't Miss