Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಗೃಹ ಸಚಿವ ಜಿ.ಪರಮೇಶ್ವರ್, ರಾಜ್ಯದಲ್ಲಿ ಕಾನೂನು ವ್ಯವಸ್ಥೆ ವ್ಯವಸ್ಥಿತವಾಗಿದೆ. ಯಾವುದೇ ಸಂದರ್ಭದಲ್ಲಿ ಕೈಮೀರಿ ಹೋಗಿಲ್ಲ. ಸ್ವಾಭಾವಿಕವಾಗಿ ಕೆಲ ಘಟನೆಗಳು ನಡೆಯುತ್ತವೆ, ನಡಿದಿವೆ. ನಿರ್ಮಲಾ ಸೀತಾರಾಮನ್ ಕರ್ನಾಟಕಕ್ಕೆ ಬಂದು ಕಾನೂನು ಸುವ್ಯವಸ್ಥೆ ಕಟ್ಟಿದೆ ಎಂದಿದ್ರು. ಕೈಗಾರಿಕೆಗಳು ಬರ್ತಿಲ್ಲ ಎಂದು ದೊಡ್ಡ ಅಪವಾದ ಮಾಡಿದ್ದಾರೆ. ಇದು ಸತ್ಯಕ್ಕೆ ದೂರವಾದ ಮಾತು. ಯಾವ ಕೈಗಾರಿಕೋದ್ಯಮಿ ಇಲ್ಲಿಂದ ಹೊರಗೋಗ್ತೀನಿ ಎಂದಿಲ್ಲ. ಹೊರಗಿನವರು ಬಂದವರು ಯಾರೂ ಅಪವಾದ ಮಾಡಿಲ್ಲ. ಸೀತಾರಾಮನ್ ಹೇಳಿರೋ ಮಾತು ಸತ್ಯಕ್ಕೆ ದೂರವಾದ ಮಾತು. ಹೀಗಾಗಿ ನಾನು ಸ್ಪಷ್ಟೀಕರಣ ಕೊಡ್ತೀದಿನಿ ಎಂದಿದ್ದಾರೆ.
ಕೊಲೆ ಆಗಿವೆ,ಕಳ್ಳತನ ಆಗಿವೆ. ಡ್ರಗ್ಸ್ ದಂಧೆ ಇದೆ ಎಲ್ಲವೂ ನಿಜ, ಎಷ್ಟರ ಮಟ್ಟಿಗೆ ಇದೆ ಅನ್ನೋದು ಮುಖ್ಯ. ಇದೆಲ್ಲ ನಾವು ಅಧಿಕಾರಕ್ಕೆ ಬಂದ ಮೇಲೆ ಆಗಿದೆಯಾ.? ಬಿಜೆಪಿ ಅಧಿಕಾರದಲ್ಲಿ ಕಡಿಮೆ ಕೊಲೆ,ಕಡಿಮೆ ಕಳ್ಳತನ ಆಗಿದೆಯಾ..? ನಾವು ಪೊಲೀಸರ ಜೊತೆ ಮೀಟಿಂಗ್ ಮಾಡೋವಾಗ ಡ್ರಗ್ಸ್ ದಂಧೆ ನಿಲ್ಲಿಸೋ ಘೋಷಣೆ ಮಾಡಿದ್ದೇವೆ. ದೊಡ್ಡ ಆಂದೋಲನ ಆರಂಭ ಮಾಡಿದ್ದೇವೆ. ಸಾವಿರಾರು ಕೋಟಿ ರೂಪಾಯಿ ಡ್ರಗ್ಸ್ ಸುಟ್ಟು ಹಾಕಿದ್ದೇವೆ. ಕೆಲವು ಡ್ರಗ್ಸ್ ದಂಧೆಕೋರರಿಗೆ ಗುಂಡು ಹಾಕೋ ಪ್ರಯತ್ನ ಆಗಿದೆ. ಈ ಭಾಗದಲ್ಲೂ ಡ್ರಗ್ಸ್ ಮಾನಿಟರಿಂಗ್ ಕೆಲಸ ಮಾಡ್ತೀದ್ದೇವೆ.
ಡ್ರಗ್ಸ್ ಹಾವಳಿ ಮೊದಲಿಗಿಂತ ಕಡಿಮೆ ಆಗಿದೆ. ಬಹಳ ಕಠಿಣ ಕ್ರಮ ಕೈಗೊಂಡಿದ್ದೇವೆ. ಹುಬ್ಬಳ್ಳಿಯಲ್ಲಿ ನೂರಾರು ಜನರ ಮೇಲೆ ಕ್ರಮ ಆಗಿದೆ. ಅದಕ್ಕೂ ಟೀಕೆ ಬಂತು,ಫೆಡ್ಲರ್ ರನ್ನ ಯಾಕೆ ಕರೆದಿಲ್ಲ ಅಂತಾ. ನಿನ್ನೆ ಕೂಡಾ ಹುಬ್ಬಳ್ಳಿಯಲ್ಲಿ ಓರ್ವ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ. ಅವರ ಬಳಿ ಕೆಜಿ ಗಟ್ಟಲೆ ಗಾಂಜಾ ಸಿಕ್ಕಿದೆ. ಸೈಬರ್ ಕ್ರೈಮ್ ಗಳು ಜಾಸ್ತಿ ಆಗಿವೆ . ಸೈಬರ್ ಕ್ರೈಂ ತಡೆಗಟ್ಟಲು ಕ್ರಮ ತಗೆದುಕೊಂಡಿದ್ದೇವೆ. ಸೈಬರ್ ಕ್ರೈಂ ಪೊಲೀಸ್ ಠಾಣೆಗಳು ಜಾಸ್ತಿ ಮಾಡಿದ್ದೇವೆ. ಸಾವಿರಾರು ಜನರಿಗೆ ನಾವು ಹಣ ಕೊಡಿಸಿದ್ದೇವೆ. ಇಷ್ಟೆಲ್ಲ ಕ್ರಮ ಕೈಗೊಂಡು ಕಾನೂನು ಸುವ್ಯವಸ್ಥೆ ಸರಿಯಾಗಿದೆ. ಎಲ್ಲರೂ ಶಾಂತಿಯುತವಾಗಿ ಹಬ್ಬ ಮಾಡಿದ್ದೇವೆ. ಗಣೇಶ ಹಬ್ಬದಲ್ಲಿ ಎಲ್ಲೂ ಗಲಾಟೆ ಆಗಿಲ್ಲ. ರಂಜಾನ್ ಹಬ್ಬ ಕೂಡಾ ಮಾಡಿದ್ದೇವೆ ಎಂದು ಪರಮೇಶ್ವರ್ ಹೇಳಿದ್ದಾರೆ.
ನೂರಾರು ಫೆಡ್ಲರ್ ರನ್ನು ವಶಕ್ಕೆ ಪಡೆದಿದ್ದೇವೆ. ಫಾರಿನ್,ನೈಜೇರಿಯಾ ಮೂಲದವರನ್ನು ಅರೆಸ್ಟ್ ಮಾಡಿದ್ದೇವೆ. ಡ್ರಗ್ಸ್ ಎಲ್ಲಿಂದ ಆದರೂ ಬರಲಿ,ನಾವು ಅವರ ಮೂಲಕ್ಕೆ ಹೋಗ್ತೀವಿ. ನಿರ್ಮಲಾ ಸೀತಾರಾಮನ್ SC ST ಹಣ ಡೈವರ್ಟ್ ಮಾಡಿದ್ದಾರೆ ಅನ್ನೋ ದೊಡ್ಡ ಆರೋಪ ಮಾಡಿದ್ದಾರೆ. ಅವರಿಗೆ ಯಾರು ಅಂಕಿ ಸಂಖ್ಯೆ ಕೊಟ್ಟಿದ್ದು ? ನಿಮ್ಮ ತಟ್ಟೆಯಲ್ಲಿ ಏನು ಬಿದ್ದಿದೆ ನೋಡಿಕೊಳ್ಳಬೇಕು. ಬೇರೆಯವರ ತಟ್ಟೆಯಲ್ಲಿ ನೊಣ ಬಿದ್ದಿದೆ ಅಂತಾ ಹೇಳೋದಲ್ಲ. ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ. ನಾವು ಹಣ ಡೈವರ್ಟ್ ಮಾಡಿಲ್ಲ,ಕಾರ್ಯಕ್ರಮಕ್ಕೆ ಹಣ ಉಪಯೋಗ ಮಾಡಿದ್ದೇವೆ. ಬಿಜೆಪಿಯವರು ಕೇವಲ ಪ್ರಚಾರಕ್ಕೆ ಮಾತಾಡ್ತಾರೆ ಎಂದು ರಾಹುಲ್ ಗಾಂಧಿ ವಿರುದ್ದ ಮಾತಾಡಿದ ಅನುರಾಗ್ ಠಾಕೂರ್ ಗೆ ಪರಮೇಶ್ವರ್ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ನಾಯಿ ಮಾಂಸ ಮಾರಾಟ ಮಾಡ್ತಿರೋ ವಿಚಾರದ ಬಗ್ಗೆ ಪ್ರತಿಕ್ರಿಯಿಸದ ಪರಮೇಶ್ವರ್, ನಾವು ಪರೀಕ್ಷೆ ಮಾಡಿಸಿದ್ದೇವೆ ಅದು ನಾಯಿ ಮಾಂಸ ಅಲ್ಲ. ಅಲ್ಲಿ ಹೋಗಿ ಕೆಲವರು ಗಲಾಟೆ ಮಾಡಿದ್ದಾರೆ. ಪುನೀತ್ ಕೆರೆಹಳ್ಳಿ ಶಾಂತಿ ಭಂಗ ಮಾಡಿದ್ದಾರೆ. ಅವರ ಮೇಲೆ ಕ್ರಮ ಆಗಿದೆ. ಹಿಂದೆ ಕೂಡಾ ಅವರ ಮೇಲೆ ಕೆಲ ಕೇಸ್ ಗಳಿವೆ. ಅಲ್ಲಿ ಕಳಪೆ ಮಾಂಸ ಮಾರಾಟ ವಿಚಾರ ಇಲ್ಲ. ನಾಯಿ ಮಾಂಸ ಅಂದ್ರು,ನಾವು ಪರೀಕ್ಷೆ ಮಾಡಿಸಿದ್ದೇವೆ. ವಾಲ್ಮೀಕಿ ಹಗರಣ, ಮುಡಾ ಹಗರಣದ ಬಗ್ಗೆ ನಿಮಗೆ ಮಾಹಿತಿ ಇದೆ ಅಂದುಕೊಳ್ತೀನಿ. ವಾಲ್ಮೀಕಿ ಹಗರಣ ನಮಗೆ ಮಾಹಿತಿ ಬಂದ ನಂತರ. ಕೂಡಲೇ SIT ರಚನೆ ಮಾಡಿದ್ದೇವೆ. ಚಂದ್ರಶೇಖರ್ ಆತ್ಮಹತ್ಯೆಯಾದ ಬಳಿಕ,ಡೆಥ್ ನೋಟ್ ಸಿಕ್ಕ ನಂತರ SIT ರಚನೆ ಮಾಡಿದ್ದೇವೆ. ನಂತರ ಸಿಬಿಐ,ಇಡಿ ತನಿಖೆ ಮಾಡ್ತಿದಾರೆ. ಇನ್ನೂ ವರದಿ ಬರಬೇಕಿದೆ, ಆದ್ರೆ ಸುಮ್ನೆ ಆಪಾದನೆ ಮಾಡ್ತಿದಾರೆ. ಆಪಾದನೆ ಬಂದ ಬಳಿಕ ನಾಗೇಂದ್ರ ಅವರ ರಾಜೀನಾಮೆ ಪಡೆಯಲಾಗಿದೆ. ರಾಜೀನಾಮೆ ಕೊಡು ಅಂತಾ ನಾವು ನಾಗೇಂದ್ರ ಅವರಿಗೆ ಹೇಳಿದ್ವಿ. ಈ ಮದ್ಯೆ ಈಡಿ ಅವರು ನಾಗೇಂದ್ರ ಅವರನ್ನು ಅರೆಸ್ಟ್ ಮಾಡಿದ್ದಾರೆ. ಮುಡಾ ಹಗರಣದಲ್ಲಿ ಸಿಎಂ ಕೂಡಾ ಸ್ಪಷ್ಟೀಕರಣ ಕೊಟ್ಟಿದ್ದಾರೆ.ಯಾರು ಸೈಟ್ ಕೊಟ್ಟವರು, ಕಮೀಟಿಯಲ್ಲಿ ಜಿಟಿ ದೇವೆಗೌಡ ಇದ್ರು,ರಾಮದಾಸ್ ಇದ್ರು,ತನ್ವೀರ್ ಶೇಠ್ ಇದ್ರು. ಇವರ್ಯಾರು ಎಲ್ಲರೂ ಕಾಂಗ್ರೆಸ್ ನವರು ಅಲ್ಲ. ಅದಕ್ಕೂ ಸಿದ್ದರಾಮಯ್ಯ ಕಮಿಟಿ ರಚನೆ ಮಾಡಿದ್ದಾರೆ. ವರದಿ ಬರಲಿ, ಅಕಸ್ಮಾತ್ ತಪ್ಪಿತಸ್ಥರಿದ್ದರೇ ಹೈಕಮಾಂಡ್ ಕ್ರಮ ಕೈಗೊಳ್ಳುತ್ತೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಬದಲಾವಣೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ್, ಸದ್ಯ ಆ ತರಹ ವಾತಾವರಣ ಇಲ್ಲ. ಸಿದ್ದರಾಮಯ್ಯ ಸಿಎಂ ಇದಾರೆ ಎಂದಿದ್ದಾರೆ. ಇನ್ನು ರಾಜ್ಯದಲ್ಲಿ ದಲಿತ ಸಿಎಂ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾವೇನು ಸನ್ಯಾಸಿಗಳಾ ಎಂದ ಪರಮೇಶ್ವರ್..? ನಿನ್ನೆ ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಮುಂದಿನ ಮುಖ್ಯಮಂತ್ರಿ ಜಿ.ಪರಮೇಶ್ವರ್ ಎಂದು ಘೋಷಣೆ ಕೂಗಿದ್ರು. ಇದಕ್ಕೆ ಪುಷ್ಠಿ ನೀಡುವಂತೆ ನಾವೇನು ಸನ್ಯಾಸಿಗಳಲ್ಲ ಎಂದು ಗೃಹಸಚಿವರು ಹೇಳಿದ್ದಾರೆ.