Wednesday, September 24, 2025

Latest Posts

ಬದುಕಿನ ಪಯಣ ಮುಗಿಸಿದ ದಂತಕಥೆ S.L. ಭೈರಪ್ಪ

- Advertisement -

ಪದ್ಮಭೂಷಣ ಪುರಸ್ಕೃತರಾದ ಕನ್ನಡದ ಹಿರಿಯ ಸಾಹಿತಿ ಎಸ್‌.ಎಲ್‌. ಭೈರಪ್ಪ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, 94 ವರ್ಷಕ್ಕೆ ಇಹಲೋಕ ತ್ಯಜಿಸಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ರೂ, ಚಿಕಿತ್ಸೆ ಫಲಕಾರಿಯಾಗಲೇ ಇಲ್ಲ. 1931ರ ಆಗಸ್ಟ್‌ 20ರಂದು ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಸಂತೇಶಿವರದಲ್ಲಿ, ಎಸ್‌.ಎಲ್‌. ಭೈರಪ್ಪ ಅವರು ಜನಿಸಿದ್ರು. ಭಾರತೀಯ ಕಾದಂಬರಿಕಾರ, ತತ್ವಜ್ಞಾನಿ, ಚಿತ್ರಕಥೆಗಾರರೂ ಆಗಿದ್ರು.

ಎಸ್‌.ಎಲ್‌. ಭೈರಪ್ಪ ಹೊಯ್ಸಳ ಕರ್ನಾಟಕ ಬ್ರಾಹ್ಮಣ ಕುಟುಂಬದಿಂದ ಬಂದವರು. 5ನೇ ವಯಸ್ಸಿನಲ್ಲೇ ಪ್ಲೇಗ್‌ನಿಂದಾಗಿ ತಾಯಿಯನ್ನು ಕಳೆದುಕೊಂಡಿದ್ರು. ಬಾಲ್ಯದಲ್ಲೇ ಸಣ್ಣಪುಟ್ಟ ಕೆಲಗಳನ್ನು ಮಾಡಿ ಹಣ ಗಳಿಸಿ, ಶಿಕ್ಷಣದ ವೆಚ್ಚವನ್ನು ತಾವೇ ಭರಿಸಿದ್ರು. ಮತ್ತು ಗೊರೂರು ರಾಮಸ್ವಾಮಿ ಅಯ್ಯಂಗಾರ್‌ ಅವರ ಬರಹಗಳಿಂದ ಬಹಳ ಪ್ರಭಾವಿತರಾಗಿದ್ದರು. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು, ಚನ್ನರಾಯಪಟ್ಟಣದಲ್ಲೇ ಮುಗಿಸಿ, ಮೈಸೂರಿನಲ್ಲಿ ಉಳಿದ ಶಿಕ್ಷಣ ಪೂರ್ಣಗೊಳಿಸಿದ್ರು. ಬಳಿಕ ಮುಂಬೈನಲ್ಲಿ ರೈಲ್ವೇ ಪೋರ್ಟರ್‌ ಆಗಿ ಕೆಲಸಕ್ಕೆ ಸೇರಿಕೊಂಡ್ರು. ಮತ್ತೆ ಶಿಕ್ಷಣ ಪುನಾರಂಭಿಸಲು ಮೈಸೂರಿಗೆ ಹಿಂದಿರುಗಿದ್ರು.

ಇನ್ನು, ಗಾಂಧೀಜಿಯವರ ಮೌಲ್ಯಗಳಿಗೆ ಬೆಲೆ ಕೊಟ್ಟು, 13ನೇ ವರ್ಷದಲ್ಲೇ ಸ್ವಾತಂತ್ರ್ಯ ಚಳುವಳಿಗೆ ಧುಮುಕಿದ್ರು. ಇನ್ನು, ಎಸ್‌.ಎಲ್‌. ಭೈರಪ್ಪನವ್ರು ಗೋಲ್ಡ್‌ ಮೆಡಲ್ ಸ್ಟೂಡೆಂಟ್‌.‌ ಮೈಸೂರು ವಿಶ್ವವಿದ್ಯಾಲಯದಿಂದ ತತ್ವಶಾಸ್ತ್ರದಲ್ಲಿ ಎಂಎ ಪದವಿ ಪಡೆದಿದ್ದಾರೆ. 1958ರಲ್ಲಿ ಭೀಮಕಾಯದಿಂದ ಕಾದಂಬರಿಗಳನ್ನು ಬರೆಯಲು ಶುರು ಮಾಡಿದ್ರು. 5 ದಶಕಗಳಿಗೂ ಹೆಚ್ಚು ಕಾಲ 24 ಕಾದಂಬರಿಗಳನ್ನು ಬರೆದಿದ್ದಾರೆ. ಇವುಗಳಲ್ಲಿ ವಂಶವೃಕ್ಷ , ತಬ್ಬಲಿಯು ನೀನಾದೆ ಮಗನೆ , ಮಾತದಾನ ಮತ್ತು ನಾಯಿ ನೆರಳುಗಳು, ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆದ ಚಲನಚಿತ್ರಗಳಾಗಿ ನಿರ್ಮಾಣಗೊಂಡಿವೆ.

1966ರಲ್ಲಿ ವಂಶವೃಕ್ಷಕ್ಕೆ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1975ರಲ್ಲಿ ದಾತುಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಿಕ್ಕಿದೆ. ಇವರಿಗೆ ಭಾರತ ಸರ್ಕಾರ 2023ನೇ ಸಾಲಿನಲ್ಲಿ, ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. ಇವರ ಹಲವಾರು ಕಾದಂಬರಿಗಳು, ಬೇರೆ ಭಾಷೆಗಳಿಗೆ ಅನುವಾದಗೊಂಡಿವೆ.

- Advertisement -

Latest Posts

Don't Miss