ಹುಬ್ಬಳ್ಳಿ: ತಾಯಿಯ ಹೆಸರಿನಲ್ಲಿ ಆಸ್ತಿಯನ್ನು ಬರೆದುಕೊಂಡು ಮಗನ ಕೊಲೆ ಮಾಡಲು ಮುಂದಾಗಿದ್ದ ಆರೋಪಗಳನ್ನು 24 ಗಂಟೆಗಳಲ್ಲಿಯೇ ಹೆಡೆಮುರಿ ಕಟ್ಟುವಲ್ಲಿ ಕೇಶ್ವಾಪುರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದರು. ಆದರೆ ದುರಾದೃಷ್ಟವಶಾತ್ ಹಲ್ಲೆಗೆ ಒಳಗಾಗಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
ಹೌದು.. ಗೋಪನಕೊಪ್ಪ ಸ್ವಾಗತ ಕಾಲನಿ ನಿವಾಸಿಯಾಗಿದ್ದ ವಿರೇಶ ಶಶಿಧರ ಹೆಗಡಾಳ ಎಂಬುವವರ ಮೇಲೆ ತಲ್ವಾರನಿಂದ ಹೊಡೆದು ಕೊಲೆ ಮಾಡಲು ಮುಂದಾಗಿದ್ದ ಐವರನ್ನು ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ವಶಕ್ಕೆ ಪಡೆಯಲಾಗಿತ್ತು. ಆದರೆ ಹಲ್ಲೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿ ಉಸಿರು ಚಲ್ಲಿದ್ದಾನೆ.
ಇನ್ನೂ ಬಂಧಿತರನ್ನು ನಾಗಶೆಟ್ಟಿಕೊಪ್ಪ ಕೆರಿವಂಡಿಯ ಅಲ್ತಾಫ ಮಹ್ಮದಲಿ ಬೇಪಾರಿ, ಮುನ್ನಾ ಮಹ್ಮದಲಿ ಬೇಪಾರಿ, ಬಸವೇಶ್ವರ ಪಾರ್ಕಿನ ಶ್ರೀನಿವಾಸ ದಲಭಂಜನ, ಜಾವೇದ ತಾಳಿಕೋಟೆ, ಇಮ್ರಾನ್ ತಾಳಿಕೋಟೆ ಹಾಗೂ ಮಂಜುನಾಥ ಬಾನಪ್ಪನವರ ಎಂದು ಗುರುತಿಸಲಾಗಿದೆ.