Friday, July 18, 2025

Latest Posts

ಸಿದ್ದು ಸರ್ಕಾರ ಮಣಿಸಲು ಸಜ್ಜಾಯ್ತು ವೇದಿಕೆ : ಆಗಸ್ಟ್ 11-22ರ ವರೆಗೆ ವಿಧಾನಮಂಡಲ ಅಧಿವೇಶನಕ್ಕೆ ಮುಹೂರ್ತ ಫಿಕ್ಸ್!

- Advertisement -

ಬೆಂಗಳೂರು : ಕರ್ನಾಟಕ ವಿಧಾನಮಂಡಲ ಮುಂಗಾರು ಅಧಿವೇಶನಕ್ಕೆ ಮುಹೂರ್ತ ನಿಗದಿಯಾಗಿದೆ. ಆಗಸ್ಟ್ 11ರಿಂದ ವಿಧಾನಮಂಡಲದ ಮುಂಗಾರು ಅಧಿವೇಶನ ಆರಂಭವಾಗಲಿದ್ದು, 2 ವಾರಗಳ ಕಾಲ ನಡೆಯಲಿದೆ.

ಈಗಷ್ಟೇ ಎರಡು ವರ್ಷಗಳ ಅಧಿಕಾರಾವಧಿಯನ್ನು ಪೂರೈಸಿದ ಕಾಂಗ್ರೆಸ್ ಸರ್ಕಾರ, ಇದೀಗ ಆಂತರಿಕ ಹಗ್ಗಜಗ್ಗಾಟ ಎದುರಿಸುತ್ತಿದೆ. ಇದರ ಜೊತೆಗೆ ವಿಪಕ್ಷ ಬಿಜೆಪಿ ಹಾಗೂ ಜೆಡಿಎಸ್​ ಜಂಟಿಯಾಗಿ ಸರ್ಕಾರದ ಮೇಲೆ ಮುಗಿಬೀಳುವುದಂತೂ ಗ್ಯಾರಂಟಿ. ಆರ್​ ಸಿಬಿ ವಿಜಯೋತ್ಸವ ಕಾಲ್ತುಳಿತ, ಮಂಗಳೂರು ಕೋಮುಗಲಭೆ, ಸೇರಿದಂತೆ ಹಲವು ಅಸ್ತ್ರಗಳನ್ನೇ ಮುಂದಿಟ್ಟುಕೊಂಡು ಸರ್ಕಾರವನ್ನು ಕಟ್ಟಿಹಾಕಲು ವಿಪಕ್ಷಗಳು ಅಣಿಯಾಗಿವೆ. ಪ್ರತ್ಯಾಸ್ತ್ರಗಳೊಂದಿಗೆ ಸರ್ಕಾರವೂ ಸಿದ್ಧವಾಗುತ್ತಿದೆ. ಈ ಜಟಾಪಟಿ ಮುಂಗಾರು ಅಧಿವೇಶ ರಣರಂಗವಾಗುವ ಲಕ್ಷಣಗಳು ಕಂಡುಬರುತ್ತಿವೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಗ್ಯಾರಂಟಿ ಬಲದ ಮೇಲೆ ಅಧಿಕಾರಕ್ಕೆ ಬಂದು ಕಾಂಗ್ರೆಸ್ ಸರ್ಕಾರ ಎರಡ ವರ್ಷಗಳನ್ನು ಪೂರೈಸಿದೆ. ಈವರೆಗಿನ ನಾಲ್ಕು ಅಧಿವೇಶನಗಳಿಗೆ ಹೋಲಿಸಿದರೆ ಈ ಬಾರಿ ವಿರೋಧ ಪಕ್ಷಗಳು ಗಟ್ಟಿ ಧ್ವನಿಯಲ್ಲಿ ಸರ್ಕಾರದ ಮೇಲೆ ಮುಗಿಬೀಳುವ ಸಂಭವವಿದೆ. ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಬಲವಾಗಿ ಒಗ್ಗೂಡಿದ್ದು, ಜಂಟಿ ಹೋರಾಟದಲ್ಲಿ ಸರ್ಕಾರವನ್ನು ಮಣಿಸುವ ತಂತ್ರಗಾರಿಕೆಗೆ ಮುಂದಾಗಿವೆ.

ಮುಂಬರುವ ಆಗಸ್ಟ್ ತಿಂಗಳ 11ರಿಂದ 22ರವರೆಗೆ ಕರ್ನಾಟಕ ವಿಧಾನ ಮಂಡಲದ ಮುಂಗಾರು ಅಧಿವೇಶನ ನಡೆಯಲಿದೆ ಎಂದು ರಾಜ್ಯ ಸರ್ಕಾರದ ಸಂಸದೀಯ ವ್ಯವಹಾರಗಳ ಕಾರ್ಯದರ್ಶಿ ಜಿ.ಶ್ರೀಧರ್ ಅಧಿಸೂಚನೆ ಹೊರಡಿಸಿದ್ದಾರೆ.

ಭಾರತ ಸಂವಿಧಾನದ 174ನೇ ಅನುಚ್ಛೇದದ 1ನೇ ಖಂಡದ ಮೂಲಕ ನನಗೆ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ ಥಾವರ್ ಚಂದ್ ಗೆಹ್ಲೋಟ್, ಕರ್ನಾಟಕ ರಾಜ್ಯಪಾಲರು ಆದ ನಾನು 2025ರ ಆಗಸ್ಟ್.11ನೇ ದಿನಾಂಕದಂದು ಸೋಮವಾರ ಪೂರ್ವಾಹ್ನ 11ಕ್ಕೆ ಬೆಂಗಳೂರಿನಲ್ಲಿ ಕರ್ನಾಟಕ ವಿಧಾನಮಂಡಲದ ಅಧಿವೇಶನ ಸಮಾವೇಶಗೊಳಿಸಬೇಕೆಂದು ಈ ಮೂಲಕ ಕರೆಯುತ್ತಿದ್ದೇನೆ ಎಂಬುದಾಗಿ ರಾಜ್ಯಪಾಲರ ಪರವಾಗಿ ತಮ್ಮ ಅಧಿಸೂಚನೆಯಲ್ಲಿ ಅವರು ತಿಳಿಸಿದ್ದಾರೆ. ಇನ್ನೂ ಸದ್ಯಕ್ಕೆ ಕರ್ನಾಟಕ ವಿಧಾನಮಂಡಲದ ಅಧಿವೇಶನದ ತಾತ್ಕಾಲಿಕ ಕಾರ್ಯಕ್ರಮಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು. ದಿನಾಂಕ 11-08-2025ರ ಸೋಮವಾರ ಸರ್ಕಾರಿ ಕಾರ್ಯಕಲಾಪಗಳು ನಡೆಯಲಿವೆ ಎಂಬುದಾಗಿ ತಿಳಿಸಲಾಗಿದೆ.

- Advertisement -

Latest Posts

Don't Miss