ತುಳುನಾಡಿನ ದೈವದ ಕಥೆಯಾಧಾರಿತ ಕಾಂತಾರಾ ಚಾಪ್ಟರ್ 1 ಸಿನಿಮಾ, ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದೆ. ಪ್ರಿಮಿಯರ್ ಶೋಗಳು ಮತ್ತು ಮೊದಲ ದಿನದ ಗಳಿಕೆಯಿಂದ, ಇಷ್ಟು ದೊಡ್ಡ ಮೊತ್ತ ಸಂಪಾದಿಸಿರುವುದು ಹೊಸ ದಾಖಲೆಯಾಗಿದೆ. ಭಾರತದಲ್ಲಿ ಒಟ್ಟು 6,500 ಸ್ಕ್ರೀನ್‌ಗಳಲ್ಲಿ ಸುಮಾರು 12,511ಕ್ಕೂ ಹೆಚ್ಚು ಶೋಗಳು ಪ್ರದರ್ಶನ ಕಂಡಿದೆ.
ಎಲ್ಲಾ ಭಾಷೆಗಳೂ ಸೇರಿ ಭಾರತದಲ್ಲಿ ಅಂದಾಜು 45 ಕೋಟಿ ರೂ.ಗಳಷ್ಟು ಕಲೆಕ್ಷನ್ ಆಗಿದೆ. ಇನ್ನೊಂದು ದಿನದಲ್ಲಿ 100 ಕೋಟಿ ಕ್ಲಬ್ ಸೇರುವ ಸಾಧ್ಯತೆ ಇದೆ. ವೀಕ್ ಎಂಡ್‌ಗಳಲ್ಲಿ ಸಿನಿಮಾ ಅಬ್ಬರಿಸೋದು ಪಕ್ಕಾ ಆಗಿದೆ. ಈಗಾಗಲೇ ಬೆಂಗಳೂರಿನಲ್ಲಿ ವೀಕೆಂಡ್ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿದೆ.
ಕಾಂತಾರಾ ಚಾಪ್ಟರ್ 1 ಚಿತ್ರ, ಊಹೆಗೂ ಮೀರಿದ ಕಲೆಕ್ಷನ್ ಮಾಡಿದೆ. ಈ ಚಿತ್ರದ ಅಬ್ಬರಕ್ಕೆ ಶಾರುಖ್ ಖಾನ್ ನಟನೆ ಪಠಾಣ್ ಸಿನಿಮಾದ, ಬಾಕ್ಸ್ ಆಫೀಸ್ ದಾಖಲೆಯೇ ಉಡೀಸ್ ಆಗಿದೆ. ಈ ಚಿತ್ರದ ಮೂಲಕ ರಿಷಬ್ ಶೆಟ್ಟಿ ಮತ್ತೊಂದು ದೊಡ್ಡ ಗೆಲುವು ಕಂಡಿದ್ದಾರೆ.
ಗುರುವಾರ ಪ್ರತಿ ಗಂಟೆಗೆ 60,000 ಟಿಕೆಟ್ ಬಿಕರಿಯಾಗಿದೆ. ದೆಹಲಿಯಲ್ಲಿ ಗರಿಷ್ಠ ಟಿಕೆಟ್ ದರ 2400 ರೂಪಾಯಿ ಇದ್ರೆ, ಬೆಂಗಳೂರಿನಲ್ಲಿ 1,200 ರೂ. ಗರಿಷ್ಠ ಟಿಕೆಟ್ ದರ ಇದೆ. ಇನ್ನು, ಅಮೆರಿಕ ಒಂದರಲ್ಲೇ ಅಂದಾಜು 4.20 ಕೋಟಿ ರೂ. ಗಳಿಕೆ ಮಾಡಿದೆ. 30 ದೇಶಗಳಲ್ಲಿ ಚಿತ್ರ ಬಿಡುಗಡೆಯಾಗಿದ್ದು, ಕೋಟ್ಯಂತರ ರೂಪಾಯಿ ಗಳಿಕೆ ಅಂದಾಜಿಸಲಾಗಿದೆ.