ತಿಪಟೂರು ನಗರಕ್ಕೆ ಶಾಶ್ವತ ಕುಡಿಯುವ ನೀರು ಪೂರೈಸಲು ನಗರಸಭೆ ವಿಫಲವಾಗಿದೆ. ಕುಡಿಯುವ ನೀರಿಗೆ ಜನರು ಪರದಾಡ ಬೇಕಾದ ಪರಿಸ್ಥಿತಿ ಉಂಟಾಗಿದೆ. ನಗರಸಭೆ ಹಾಗೂ ಸರ್ಕಾರದ ವಿರುದ್ಧ ಜೆಡಿಎಸ್ ಮುಖಂಡ ಕೆ.ಟಿ ಶಾಂತಕುಮಾರ್ ನೇತೃತ್ವದಲ್ಲಿ, ಸಿಂಗ್ರೀ ನಂಜಪ್ಪ ವೃತ್ತದಲ್ಲಿ ಕಾರ್ಯಕರ್ತರು ಮತ್ತು ಸಾರ್ವಜನಿಕರು ಪ್ರತಿಭಟನೆ ನಡೆಸಿದ್ರು.
ಪ್ರತಿಭಟನೆಯಲ್ಲಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಮತ್ತಿಘಟ್ಟ ಶಿವಸ್ವಾಮಿ, ಯುವಘಟಕದ ಅಧ್ಯಕ್ಷ ಸುದರ್ಶನ್, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಇಮ್ರಾನ್, ಮುಖಂಡರಾದ ನಟರಾಜು, ಕೆ.ಎಂ. ತಾತಯ್ಯ, ನಾಗರಾಜು, ಗುರುಮೂರ್ತಿ ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಿದ್ರು.

ಇದೇ ವೇಳೆ ಮಾತನಾಡಿದ ಕೆ.ಟಿ. ಶಾಂತಕುಮಾರ್, ಶಾಸಕರ ಆಡಳಿತ ವೈಫಲ್ಯದ ಪರಿಣಾಮ ನಗರದ ಜನ ಕುಡಿಯುವ ನೀರಿಗೂ ಪರಿತಪಿಸಬೇಕಾಗಿದೆ. ಯುಜಿಡಿ ನೀರು ಈಚನೂರು ಕೆರೆ ಸೇರಿದ ಪರಿಣಾಮ ಕಲುಷಿತ ನೀರು ಸೇವಿಸಬೇಕಾಗಿದೆ.
ಪ್ರತಿವರ್ಷ ಸಾವಿರಾರು ರೂಪಾಯಿ ತೆರಿಗೆ ಪಡೆಯುವ ನಗರಸಭೆ, ಕುಡಿಯುವ ನೀರು ಹಾಗೂ ಮೂಲ ಸೌಕರ್ಯ ಒದಗಿಸಲು ವಿಫಲವಾಗಿದೆ. ಮುಂದಿನ ಮೇ, ಜೂನ್ ತಿಂಗಳಿನಲ್ಲಿ ಜನ ಜಾನುವಾರು, ಕುಡಿಯುವ ನೀರಿಲ್ಲದೆ ಜೀವಕಳೆದುಕೊಳ್ಳುವ ಸ್ಥಿತಿ ಬರಬಹುದು ಎಂದು ವಾಗ್ದಾಳಿ ನಡೆಸಿದ್ದಾರೆ.

