Monday, October 6, 2025

Latest Posts

ದನ ಮೇಯಿಸಲು ಹೋದಾಕೆ ಶವವಾಗಿ ಪತ್ತೆ

- Advertisement -

www.karnatakatv.net : ತುಮಕೂರು:  ದನ ಮೇಯಿಸಲು ಹೋಗಿದ್ದ ಮಹಿಳೆಯ ಕೊಲೆ ಮಾಡಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.

ಇಲ್ಲಿನ ಹಿರೇಹಳ್ಳಿ ಸಮೀಪದ ಛೋಟಾಸಬಾರ ಪಾಳ್ಯ ಗ್ರಾಮದ ಜಯಲಕ್ಷ್ಮಿ(35)  ಕೊಲೆಯಾದ ಮಹಿಳೆಯಾಗಿದ್ದಾರೆ. ನಿನ್ನೆ ಬೆಳಗ್ಗೆ ದನ ಮೇಯಿಸಲು ಹೋಗಿದ್ದ ಜಯಲಕ್ಷ್ಮಿ ಸಂಜೆಯಾದ್ರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಆಕೆಯನ್ನು ಹುಡಿಕಿಕೊಂಡು ಹೋದಾಗ ಆಕೆಯ ಶವ ಪತ್ತೆಯಾಗಿದೆ. ಬೆಟ್ಟದ ಬಳಿ ಬಿದ್ದಿದ್ದ ಆಕೆಯ ಮೈಮೇಲಿದ್ದ ಮಾಂಗಲ್ಯಸರವೂ ನಾಪತ್ತೆಯಾಗಿದೆ. ಅಲ್ಲದೆ ಅತ್ಯಾಚಾರವೆಸಗಿರೋ ಬಗ್ಗೆಯೂ ಸಂಶಯ ಮೂಡಿಬಂದಿದ್ದು ಈ ಕುರಿತು ಸ್ಥಳಕ್ಕೆ ಬಂದ ವಿಧಿವಿಜ್ಞಾನ ತಜ್ಞರು ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಸಿದ್ದಾರೆ. ಈ ಕುರಿತು ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.

ಕರ್ನಾಟಕ ಟಿವಿ -ತುಮಕೂರು

- Advertisement -

Latest Posts

Don't Miss