ಜನರನ್ನು ಸ್ಥಳಾಂತರಿಸಲು ಸಕಲ ಸಿದ್ದತೆಗಳನ್ನ ಮಾಡಿಕೊಂಡ NDRF ತಂಡ

www.karnatakatv.net : ಕುಂದರಗಿ ಮಠದ ಪೀಠಾಧಿಪತಿ ಅಮರೇಶ್ವರ ಶ್ರೀಗಳು ಹಾಗೂ ಅವರ ಶಿಷ್ಯರ ರಕ್ಷಣೆಗೆ ತೆರಳಿದ ಎನ್ ಡಿಆರ್ ಎಫ್ ತಂಡ.. ಬೆಳಗಾವಿ ಜಿಲ್ಲೆಯಾಧ್ಯಂತ ಮೂರನಾಲ್ಕು ದಿನಗಳಿಂದ ಭಾರಿ ಪ್ರಮಾಣದ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಮಾರ್ಕಂಡೇಯ ನದಿ ನೀರಿನ ಮಟ್ಟ ಏರಿಕೆಯಾಗಿದೆ. ಸುತ್ತಲಿನ ಜನರ ಜೀವಾ ಅತಂತ್ರವಾದಂತಾಗಿದೆ ಇದರಿಂದ ಜಿಲ್ಲಾಡಳಿತ ಸಾಕಷ್ಟು ಸಕಲ ಸಿದ್ದತೆ ಮಾಡಿಕೊಂಡಿದೆ.

ಪ್ರವಾಹ ಬರುವ ಮುನ್ಸೂಚನೆಯಿಂದ ಜನರನ್ನ ಸ್ಥಳಾಂತರಿಸಲು ಸಕಲ ಸಿದ್ದತೆಗಳನ್ನ NDRF ತಂಡ ಮಾಡಿಕೊಂಡಿದೆ. ಈ ಹಿನ್ನೆಲೆ ಗೋಕಾಕ್ ತಾಲೂಕಿನ ಕುಂದರಗಿ ಅಡವಿಸಿದ್ದೇಶ್ವರ ಮಠ ಜಲಾವೃತವಾಗಿ ಮಠದ ಸುತ್ತಲೂ ಸುತ್ತುವರೆದ ನದಿ ನೀರು ಮಠ ನಡುಗಡ್ಡೆಯಂತಾಗಿದೆ.

ಮುಂಜಾಗೃತ ಕ್ರಮವಾಗಿ ಮಠದಲ್ಲಿನ ಜನರನ್ನು ಬೇರೆಡೆ ಸ್ಥಳಾಂತರ ಮಾಡಲು ತಾಲೂಕಾಡಳಿತ ಸಿದ್ಧತೆ ನಡೆಸಿದ್ದು, ಕುಂದರಗಿ ಮಠದ ಪೀಠಾಧಿಪತಿ ಅಮರೇಶ್ವರ ಶ್ರೀಗಳು ಹಾಗೂ ಅವರ ಶಿಷ್ಯರ ರಕ್ಷಣೆಗೆ ತೆರಳಿದ ಎನ್ ಡಿಆರ್ ಎಫ್ ತಂಡ ರಕ್ಷಿಸಿದೆ.

About The Author