Sunday, October 5, 2025

Latest Posts

ಹಳೆಯ ಸಿದ್ದು ಗತ್ತು ಈಗಿಲ್ಲ- K.N ರಾಜಣ್ಣ ಹೊಸ ಬಾಂಬ್

- Advertisement -

ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರು ಸಿಎಂ ಸಿದ್ದರಾಮಯ್ಯನವರ ಗತ್ತಿನ ಕುರಿತು ಸ್ಫೋಟಕ ಹೇಳಿಕೆ ನೀಡಿದ್ದಾರೆ. ತುಮಕೂರಿನಲ್ಲಿ ನಡೆದ ಹಿಂದುಳಿದ ವರ್ಗಗಳ ಒಕ್ಕೂಟದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2013 ರಿಂದ 2018 ರವರೆಗೆ ಸಿದ್ದರಾಮಯ್ಯನವರು ಹೇಗಿದ್ದರೋ, ಈಗಿನ ಸಿದ್ದರಾಮಯ್ಯ ಅವರು ಅಷ್ಟೇನೂ ಚುರುಕಾಗಿ ಕಾಣಿಸುತ್ತಿಲ್ಲ. ಆಗ ಅವರು ಪಾದರಸದಂತೆ ಚುರುಕಾಗಿ ಕೆಲಸ ಮಾಡುತ್ತಿದ್ದರು. ಆದರೆ ಈಗ ಅವರಲ್ಲಿ ಆ ಗತ್ತು ಕಾಣುತ್ತಿಲ್ಲ. ನನ್ನ ಮಾಹಿತಿಯ ಪ್ರಕಾರ, ಇದೀಗ ಅವರಿಗೆ ಹಲವು ರೀತಿಯ ಒತ್ತಡಗಳು ಇವೆ ಎಂದು ಬಾಂಬ್ ಸಿಡಿಸಿದ್ದಾರೆ.

ಯಾವ ನಾಯಕನಾದರೂ ಕೆಲವೊಮ್ಮೆ ಹೇಳಲಾರದಂತಹ ಒತ್ತಡಗಳಿಗೆ ಒಳಗಾಗಿರಬಹುದು. ಸಿದ್ದರಾಮಯ್ಯನವರಿಗೂ ಈಗ ಅಂತಹ ಪರಿಸ್ಥಿತಿ ಇರಬಹುದು. ಆದರೂ ಅವರು ಮಾಡಿದ ಅತ್ಯಂತ ಮಹತ್ವದ ಕೆಲಸ ಅನ್ನಭಾಗ್ಯ ಯೋಜನೆ. ಈಗಿನ ಯುವ ಪೀಳಿಗೆಗೆ ಹಸಿವಿನ ಕಷ್ಟ ಅಷ್ಟಾಗಿ ಗೊತ್ತಿಲ್ಲ. ಆದರೆ ಹಳೆಯ ಪೀಳಿಗೆಗೆ ಅದರ ಮಹತ್ವ ಚೆನ್ನಾಗಿ ಗೊತ್ತಿದೆ ಎಂದು ರಾಜಣ್ಣ ಪ್ರಶಂಸಿದರು.

ಮುಂದುವರೆದು ಮಾತನಾಡಿದ ರಾಜಣ್ಣ ಅವರು, ನವೆಂಬರ್‌ನಲ್ಲಿ ಯಾವುದೇ ಬದಲಾವಣೆ ಸಂಭವಿಸುವ ಸಾಧ್ಯತೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಜಾತಿ ಸಮೀಕ್ಷೆ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡ ಅವರು, ಜಾತಿ ಗಣತಿ ನಡೆಸುವ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ. ಅದು ಕೇಂದ್ರ ಸರ್ಕಾರದ ವ್ಯಾಪ್ತಿ. ಪ್ರಸ್ತುತ ನಡೆಯುತ್ತಿರುವ ಸರ್ವೇದಲ್ಲಿ, ಯಾರಿಗೆ ಬೇಕಾದರೂ ತಮ್ಮ ಜಾತಿ ಮಾಹಿತಿ ನೀಡಬಹುದು ಅಥವಾ ಬಿಟ್ಟುಕೊಡಬಹುದು. ಇದು ಕೇವಲ ಸೌಲಭ್ಯ ನೀಡುವ ಉದ್ದೇಶದಿಂದ ನಡೆಸಲಾಗುತ್ತಿರುವುದು. ಆದರೆ ಕೆಲವರು ಇದನ್ನು ಜಾತಿ ಸಮೀಕ್ಷೆ ಎಂದು ತಪ್ಪಾಗಿ ಚಿತ್ರಿಸುತ್ತಿದ್ದಾರೆ. ಇಂತಹ ಕ್ರಮಗಳು ಜನರಲ್ಲಿ ಅಸಮಾಧಾನ ಉಂಟು ಮಾಡುತ್ತವೆ, ಇದು ತಪ್ಪು ಎಂದು ಎಚ್ಚರಿಕೆ ನೀಡಿದರು.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss