www.karnatakatv.net :ಹುಬ್ಬಳ್ಳಿ: ಅವರೆಲ್ಲಾ ಆ ಶಾಲೆಯಲ್ಲಿ ಕಲಿತು 2 ದಶಕವೇ ಕಳೆದಿದೆ. ಈಗ ಅವರೆಲ್ಲಾ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡ್ತಿದ್ದಾರೆ. ಆದ್ರೆ ಇವ್ರೆಲ್ಲಾ ಮತ್ತೆ ಆ ಶಾಲೆಗೆ ಹೋಗಿ ಮಾಡಿರೋ ಕೆಲ್ಸ ಮಾತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಅವ್ರು ಮಾಡಿದ್ದಾದ್ರೂ ಏನು ಗೊತ್ತಾ.
20 ವರ್ಷಗಳ ಹಿಂದೆ ಒಂದೇ ಶಾಲೆಯಲ್ಲಿ ಇವರೆಲ್ಲ ಕೂಡಿ ಕಲಿತವರು. ತಾವು ಕಲಿತ ಶಾಲೆಯನ್ನು ಅಂದವಾಗಿಸಲು ಇವತ್ತು ಸ್ವತಃ ತಾವೆ ಕೈನಲ್ಲಿ ಬ್ರಷ್ ಹಿಡಿದು ಗೋಡೆಗಳಿಗೆ ಬಣ್ಣ ಹಚ್ಚಿದ್ರು. ಅಂದಹಾಗೆ, ಇದು ಹುಬ್ಬಳ್ಳಿಯ ಸದ್ಗುರು ಶ್ರೀ ಸಿದ್ದಾರೂಢ ಹೈಸ್ಕೂಲ್ ನಲ್ಲಿ ಕಂಡು ಬಂದ ದೃಶ್ಯ. ಒಂದೆ ಬೆಂಜ್ ನಲ್ಲಿ ಕುಳಿತು ಪಾಠ ಕೇಳಿದ ಸಹಪಾಠಿಗಳೆಲ್ಲಾ ತಮ್ಮ ಶಾಲೆಯ ಅಂದ ಹೆಚ್ಚಿಸೋದಕ್ಕೆ ಒಟ್ಟು ಸೇರಿದ್ರು.ಸರ್ಕಾರಿ ಶಾಲೆಗಳನ್ನು ಉಳಿಸೋ ಸಲುವಾಗಿ ಕಳೆದ ಐದು ವರ್ಷದಿಂದ ಈ ತಂಡ ಈ ಕೆಲಸಕ್ಕೆ ಮುಂದಾಗಿದೆ.
ಹೀಗೆ ವಯಸ್ಸಿನ ಹಂಗು ತೊರೆದು ಸರಕಾರಿ ಶಾಲೆಗಳ ಅಭಿವೃದ್ಧಿಗೆಗಾಗಿ ಈ ಹಳೇ ವಿದ್ಯಾರ್ಥಿಗಳು ಅಳಿಲು ಸೇವೆ ಮಾಡ್ತಿದ್ದಾರೆ ಮಾಡುತ್ತಿದ್ದಾರೆ. ಹುಬ್ಬಳ್ಳಿಯ ಇಂಡಿ ಪಂಪ್, ಹೆಗ್ಗೇರಿ, ಆನಂದನಗರ, ನೇಕಾರನಗರ ಸೇರಿದಂತೆಇವರು ಕಲಿತ ಶಾಲೆ ಮಾತ್ರವಲ್ಲದೆ ಪ್ರತಿ ವರ್ಷ ೨೦ಕ್ಕೂ ಹೆಚ್ಚು ಶಾಲೆಗಳಿಗೆ ಬಣ್ಣ,ಸುಣ್ಣವನ್ನು ಹಚ್ಚೋ ಕಾರ್ಯ ಮಾಡ್ತಿದೆ ಈ ತಂಡ. ಜೊತೆಗೆ ಶಾಲೆಯ ಗೋಡೆಗಳನ್ನು ಚಿತ್ರ ಕಲೆಯ ಮೂಲಕ ಸಿಂಗರಿಸಿ ಅವುಗಳ ಅಂದ ಹೆಚ್ಚುವಂತೆ ಮಾಡಿದ್ದಾರೆ.
ಈ ಕಾರ್ಯಕ್ಕೆ ಹಳೇ ವಿದ್ಯಾರ್ಥಿಗಳಾದ ಚಿದಾನಂದ ಅ ತಿಪ್ಪಣ್ಣವರ, ಎ.ಎ.ಮಿರ್ಜಿ,ವಿಶು ಪವಾರ್ ಸೇರಿದಂತೆ ಇನ್ನೂ ಅನೇಕರು ಕೈ ಜೋಡಿಸಿದ್ದಾರೆ.
ಕರ್ನಾಟಕ ಟಿವಿ – ಹುಬ್ಬಳ್ಳಿ