Friday, July 18, 2025

Latest Posts

100 ಗಂಟೆ ಕೆಲಸ ಏಕೈಕ ವ್ಯಕ್ತಿ ಮೋದಿ ಮೂರ್ತಿ ಮೆಚ್ಚುಗೆ : ಮೋದಿಯನ್ನು ಹಾಡಿ ಹೊಗಳಿದ ನಾರಾಯಣಮೂರ್ತಿ

- Advertisement -

ಭಾರತ ಕೆಲಸದ ಸಂಸ್ಕೃತಿ ಬದಲಾಗಬೇಕು. ಯುವಜನತೆ ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು. ನಾನು ವಾರಕ್ಕೆ 70 ಗಂಟೆ ದುಡಿಯುತ್ತೇನೆ ಎಂದು ಇನ್ಫೋಸಿಸ್‌ ಸಂಸ್ಥಾಪಕ ಎನ್.ಆರ್‌. ನಾರಾಯಣ ಮೂರ್ತಿ ವಿವಾದ ಸೃಷ್ಟಿಸಿದ್ದರು. ಇದೀಗ ಪ್ರಧಾನಿ ನರೇಂದ್ರ ಮೋದಿಯವರು ಮಾತ್ರ ವಾರಕ್ಕೆ 100 ಗಂಟೆ ಕೆಲಸ ಮಾಡುತ್ತಾರೆ ಎಂದು ನಾರಾಯಣ ಮೂರ್ತಿ ಹಾಡಿ ಹೊಗಳಿದ್ದಾರೆ.

ಕಳೆದ ಜುಲೈ 14 ರಂದು ಮುಂಬೈ-ಬೆಂಗಳೂರು ಇಂಡಿಗೋ ವಿಮಾನದಲ್ಲಿ ನಾರಾಯಣ ಮೂರ್ತಿ ಮತ್ತು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಆಕಸ್ಮಿಕವಾಗಿ ಭೇಟಿ ಆಗಿದ್ದರು. ಈ ಸಂದರ್ಭದಲ್ಲಿ ಇನ್ಫೋಸಿಸ್‌ ನಾರಾಯಣ ಮೂರ್ತಿ ಅವರ ಜತೆಗೆ ನಡೆದ ಸಂವಾದವನ್ನು ತೇಜಸ್ವಿ ಅವರು ತಮ್ಮ X ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇಂದು ಮುಂಬೈನಿಂದ ಬೆಂಗಳೂರಿಗೆ ಹಿಂತಿರುಗುವಾಗ ಮೂರ್ತಿ ಅವರ ಜೊತೆಗೆ ಸ್ಫೂರ್ತಿದಾಯಕ ಮಾತುಕತೆ ನಡೆಯಿತು. ಆ 2 ತಾಸು ಕಲಿಕಾ ಪರ್ವವಾಗಿತ್ತು. ಸಂಭಾಷಣೆಯ ಕೊನೆಯಲ್ಲಿ ಅವರಿಗೆ, ನೀವು ಹಾಕಿರುವ ವಾರಕ್ಕೆ 70 ಗಂಟೆಗಳ ಗುರಿ ತಲುಪಲು ಶ್ರಮಿಸುತ್ತೇನೆ ಎಂದು ಹಾಸ್ಯಮಯವಾಗಿ ಹೇಳಿದೆ. ಅದಕ್ಕೆ ಅವರು ವಾರಕ್ಕೆ 100 ಗಂಟೆಗಳ ಕೆಲಸ ಮಾಡುವ ನನಗೆ ತಿಳಿದಿರುವ ಏಕೈಕ ವ್ಯಕ್ತಿ ಮೋದಿ ಎಂದರು ಎಂದು ತೇಜಸ್ವಿ ಸೂರ್ಯ ಟ್ವೀಟ್‌ ಮಾಡಿದ್ದಾರೆ.

 

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss