Friday, July 11, 2025

Latest Posts

ಕನ್ನಡಿಗರ ಉದ್ಯೋಗ ಮೀಸಲಾತಿ ವಿಧೆಯಕಕ್ಕೆ ಖಾಸಗಿ ಕಂಪನಿಗಳ ವಿರೋಧಕ್ಕೆ ಕರವೇ ಆಕ್ರೋಶ

- Advertisement -

Political News: ರಾಜ್ಯ ಕಾಂಗ್ರೆಸ್ ಸರ್ಕಾರದ ಜಾರಿಗೆ ತರಲು ಮುಂದಾಗಿರೋ ಕನ್ನಡಿಗರ ಉದ್ಯೋಗ ಮಿಸಲಾತಿ ವಿಧೇಯಕಕ್ಕೆ ಖಾಸಗಿ ಕಂಪನಿಗಳ ವಿರೋಧ ನಡೆ ಖಡಿಸಿ ಹಾಗೂ ಸಹಕಾರ ನೀಡಲು ಅಗ್ರಹಿಸಿ, ಹುಬ್ಬಳ್ಳಿಯಲ್ಲಿ ಕರವೇ ಪ್ರವೀಣ ಶೆಟ್ಟಿ ಬಣದ ಕಾರ್ಯಕರ್ತರು ಆಕ್ರೋಶ ಹೊರಹಾಕಿದರು.

ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣಕುಮಾರ ಶೆಟ್ಟಿ ಬಣ ಸಂಘಟನೆ ನೇತೃತ್ವದಲ್ಲಿ, ನಗರದ ಸಂಗೊಳ್ಳಿರಾಯಣ್ಣ ವೃತದಲ್ಲಿ ಪ್ರತಿಭಟನೆ ಮಾಡಿ ಕರವೇ ಕಾರ್ಯಕರ್ತರು ವಿಧೇಯಕಕ್ಕೆ ವಿರೋಧ ಮಾಡುವ ಖಾಸಗಿ ಕಂಒನಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ‌ಕರ್ನಾಟಕದಲ್ಲಿ ಸಕಲ ಸೌಲತ್ತುಗಳನ್ನು ಪಡೆದುಕೊಂಡು ಖಾಸಗಿ ಕಂಪನಿಗಳನ್ನು ಸ್ಥಾಪಿಸಿಕೊಂಡಿವೆ. ಆದರೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಕೆಲವು ಕಂಪನಿಗಳು ಸ್ಥಳೀಯರಿಗೆ ಒತ್ತು ನೀಡಿಲ್ಲ.

ಇದರ ಪರಿಣಾಮ ರಾಜ್ಯದ ಯುವಕರು ಉದ್ಯೋಗ ಅರಿಸಿ ಬೇರೆ ರಾಜ್ಯಗಳಿಗೆ ಹೋಗುವಂತಾಗಿದೆ. ಸದ್ಯ ರಾಜ್ಯ ಸರ್ಕಾರ ಕನ್ನಡಿಗರಿಗೆ ಖಾಸಗಿ ವಲಯದಲ್ಲಿ 100% ಮೀಸಲಾತಿ ನೀಡುವ ನಿಟ್ಟಿನಲ್ಲಿ ವಿಧೇಯಕ ತರುತ್ತಿರುವುದು ಸ್ವಾಗತಿಸುವ ಅಂಶವಾಗಿದೆ. ಆದರೆ ಇದಕ್ಕೆ ಕೆಲವು ಖಾಸಗಿ ಕಂಪನಿಗಳು ವಿರೋಧ ಮಾಡುತ್ತಿರುವುದು ಸರಿಯಲ್ಲ, ಈ ಕೂಡಲೇ ಖಾಸಗಿ ಕಂಪನಿಗಳು ವಿರೋಧ ನಡೆಯಿಂದ ಹಿಂದೆ ಸರಿದು ರಾಜ್ಯ ಸರ್ಕಾರದ ಕನ್ನಡಿಗರ ಉದ್ಯೋಗ ಮೀಸಲಾತಿ ವಿಧೇಯಕಕ್ಕೆ ಸಹಕಾರ ನೀಡಬೇಕು ಎಂದು ಅಗ್ರಹಿಸಿದರು. ಒಂದು ನೀಡದಿದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

- Advertisement -

Latest Posts

Don't Miss