Monday, May 12, 2025

Latest Posts

 ಉಗ್ರವಾದವನ್ನು ಸೋಲಿಸಲು ಒಗ್ಗಟ್ಟಾಗೋಣ : ಭಾರತೀಯರಿಗೆ ರಾಗಾ ಕರೆ

- Advertisement -

ನವದೆಹಲಿ : ದೇಶದ ಜನರು ಎಲ್ಲರೂ ಒಂದಾಗಿ ಉಗ್ರವಾದವನ್ನು ಸೋಲಿಸಬೇಕಿದೆ. ಪಹಲ್ಗಾಮ್‌ನ ಉಗ್ರರ ದಾಳಿಯನ್ನು ಎಲ್ಲ ವಿರೋಧ ಪಕ್ಷಗಳು ಒಗ್ಗಟಾಗಿ ಖಂಡಿಸಿವೆ. ಅಲ್ಲದೆ ಈ ವಿಚಾರದಲ್ಲಿ ಕೇಂದ್ರ ಸರ್ಕಾರ ತೆಗೆದುಕೊಳ್ಳುವ ಎಲ್ಲ ನಿರ್ಣಯಗಳನ್ನು ಬೆಂಬಲಿಸುವುದಾಗಿ ಲೋಕಸಭೆಯ ವಿಪಕ್ಷನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಗಾಯಗೊಂಡ ಸಂತ್ರಸ್ತರನ್ನು ಶ್ರೀನಗರದಲ್ಲಿ ಭೇಟಿಯಾಗಿ ಸಾಂತ್ವನ ಹೇಳಿದ ಬಳಿಕ ಮಾತನಾಡಿದ ಅವರು, ಇದೊಂದು ಭಯಾನಕ ದುರಂತವಾಗಿದೆ. ಏನಾಗುತ್ತಿದೆ ಎಂಬುದನ್ನು ಅರ್ಥಮಾಡಿಕೊಂಡು ಇಲ್ಲಿನ ಜನರಿಗೆ ಸಹಾಯ ಮಾಡಲು ನಾನು ಇಲ್ಲಿಗೆ ಬಂದಿದ್ದೇನೆ. ಜಮ್ಮು ಮತ್ತು ಕಾಶ್ಮೀರದ ಇಡೀ ಜನರು ಈ ಭಯಾನಕ ಕೃತ್ಯವನ್ನು ಖಂಡಿಸಿದ್ದಾರೆ. ಅಲ್ಲದೆ ಈ ಸಮಯದಲ್ಲಿ ಅವರ ಜೊತೆ ಇಡೀ ರಾಷ್ಟ್ರದ ಜನರು ನಿಂತಿದ್ದಾರೆ ಎಂದು ತಿಳಿಸಿದ್ದಾರೆ.

ಉಗ್ರರ ಎದೆಯಲ್ಲಿ ನಡುಕ..!

ಈ ಹಿಂದೆ ಏನಾಗಿದೆ ಎನ್ನುವುದನ್ನು ಈಗ ಮತ್ತೆ ಯೋಚನೆ ಮಾಡುವ ಮೂಲಕ ಸಮಾಜವನ್ನು ಒಡೆಯುವ ಕೆಲಸಗಳು ಆಗಬಾರದು. ಬದಲಿಗೆ ಪ್ರತಿಯೊಬ್ಬ ಭಾರತೀಯಯನು ಒಂದಾಗಿ ನಿಲ್ಲುವುದರ ಜೊತೆಗೆ ಉಗ್ರರ ಎದೆಯಲ್ಲಿ ನಡುಕ ಹುಟ್ಟಿಸಬೇಕಿದೆ. ಅಲ್ಲದೆ ದೇಶದ ನಾನಾ ಕಡೆಗಳಲ್ಲಿನ ನನ್ನ ಕಾಶ್ನೀರಿ ಸಹೋದರ ಹಾಗೂ ಸಹೋದರಿಯರ ಮೇಲೆ ದಾಳಿ ನಡೆಸುತ್ತಿರುವುದನ್ನು ನೋಡಿದಾಗ ನಿಜಕ್ಕೂ ನನಗೆ ದುಖಃವಾಗುತ್ತಿದೆ. ಈ ಭಯೋತ್ಪಾದಕತೆಗೆ ತಕ್ಕ ಉತ್ತರ ನೀಡಲು ಎಲ್ಲರೂ ಗಟ್ಟಿಯಾಗಿ ನಿಲ್ಲಬೇಕಿದೆ ಎಂದು ರಾಹುಲ್‌ ಗಾಂಧಿ ಕರೆ ನೀಡಿದ್ದಾರೆ.

ಭಯೋತ್ಪಾದನೆ ಸೋಲಿಸಬೇಕಿದೆ..

ಭಯೋತ್ಪಾದಕರ ಉದ್ದೇಶ ಸಮಾಜವನ್ನು ವಿಭಜಿಸುವುದು. ಹೀಗಾಗಿ ಭಯೋತ್ಪಾದಕರು ಯಶಸ್ವಿಯಾಗಲು ನಾವು ಬಿಡಬಾರದು. ಇಡೀ ದೇಶ ಒಟ್ಟಾಗಿ ನಿಂತಿದೆ ಎಂದು ನಾನು ಎಲ್ಲರಿಗೂ ಹೇಳಲು ಬಯಸುತ್ತೇನೆ. ಇಂದು ಏನೇ ನಡೆದಿದ್ದರೂ ಅದರ ಹಿಂದಿನ ಉದ್ದೇಶ ಸಮಾಜವನ್ನು ವಿಭಜಿಸುವುದಾಗಿದೆ. ಅಲ್ಲದೆ ನಾನು ಗಾಯಗೊಂಡ ಸಂತ್ರಸ್ತರನ್ನು ಹಾಗೂ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಮತ್ತು ಎಲ್ ಜಿ ಮನೋಜ್ ಸಿನ್ಹಾ ಅವರನ್ನು ಭೇಟಿ ಮಾಡಿದ್ದೇನೆ. ಕುಟುಂಬ ಸದಸ್ಯರನ್ನು ಕಳೆದುಕೊಂಡವರ ನೋವಿನಲ್ಲಿ ನಾನು ಭಾಗಿಯಾಗಿದ್ದೇನೆ. ಜಮ್ಮು ಮತ್ತು ಕಾಶ್ಮೀರದ ಎಲ್ಲಾ ಜನರು ಈ ದಾಳಿಯನ್ನು ಖಂಡಿಸಿದ್ದಾರೆ ಮತ್ತು ಇಡೀ ದೇಶವನ್ನು ಬೆಂಬಲಿಸಿದ್ದಾರೆ. ದೇಶ ಒಗ್ಗಟ್ಟಿನಿಂದ ನಿಂತಿದೆ ಎಂದು ನಾನು ಎಲ್ಲರಿಗೂ ಹೇಳಲು ಬಯಸುತ್ತೇನೆ. ಮತ್ತು ಪ್ರತಿಯೊಬ್ಬ ಭಾರತೀಯರೂ ಒಗ್ಗಟ್ಟಿನಿಂದ ನಿಲ್ಲುವುದು, ಒಟ್ಟಾಗಿ ನಿಲ್ಲುವುದು ಬಹಳ ಮುಖ್ಯ, ಇದರಿಂದ ನಾವು ಭಯೋತ್ಪಾದಕರು ಮಾಡುತ್ತಿರುವ ಪ್ರಯತ್ನಗಳನ್ನು ವಿಫಲಗೊಳಿಸಬಹುದು ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.

ಕೆಲವರನ್ನು ಭೇಟಿಯಾಗಿದ್ದೇನೆ..!

ಪಹಲ್ಗಾಮ್ ಉಗ್ರರ ದಾಳಿಯಲ್ಲಿ ಗಾಯಗೊಂಡಿರುವ ವ್ಯಕ್ತಿಯೊಬ್ಬರನ್ನು ಭೇಟಿಯಾಗಿದ್ದೆ, ಉಳಿದವರು ತಮ್ಮ ತಮ್ಮ ಊರುಗಳಿಗೆ ವಾಪಸ್ಸು ಹೋಗಿರುವುದರಿಂದ ಭೇಟಿಯಾಗುವುದು ಸಾಧ್ಯವಾಗಲಿಲ್ಲ ಎಂದರು. ಜಮ್ಮು ಮತ್ತು ಕಾಶ್ಮೀರದ ಪ್ರತಿಯೊಬ್ಬ ನಾಗರಿಕ ಈ ಭಯಾನಕ ದಾಳಿಗೆ ವಿಷಾದಿಸಿದ್ದಾನೆ. ಈ ಘಟನೆಯ ಹಿಂದಿನ ಉದ್ದೇಶ ಸಮಾಜವನ್ನು ವಿಭಜಿಸುವುದು, ಸಹೋದರ ಸಹೋದರನ ವಿರುದ್ಧ ಹೋರಾಡುವಂತೆ ಮಾಡುವುದಾಗಿದೆ. ಭಯೋತ್ಪಾದಕರ ಈ ಕೃತ್ಯಕ್ಕೆ ಸೋಲುಂಟು ಮಾಡಲು ಪ್ರತಿಯೊಬ್ಬ ಭಾರತೀಯರೂ ಒಗ್ಗಟ್ಟಿನಿಂದ ನಿಲ್ಲುವುದು, ಒಟ್ಟಾಗಿ ಸಾಗುವುದು ಬಹಳ ಮುಖ್ಯ ಎಂದು ರಾಹುಲ್‌ ಗಾಂಧಿ ಭಯೋತ್ಪಾದಕ ಕೃತ್ಯವನ್ನು ಖಂಡಿಸಿದ್ದಾರೆ.

- Advertisement -

Latest Posts

Don't Miss