ಬೆಂಗಳೂರು(ಫೆ.11): ವಿಮಾನದಲ್ಲಿ ಹಾರಾಡಬೇಕು ಅಂತ ಅದೆಷ್ಟೋ ಜನರಿಗೆ ಆಸೆ ಇರುತ್ತೆ. ಆದ್ರೆ ಎಲ್ಲರಿಗೂ ಈ ಕನಸನ್ನು ನನಸು ಮಾಡಿಕೊಳ್ಳು ಆಗೋದಿಲ್ಲ. ಕಾರಣ ಹಣದ ಕೊರತೆ. ಇಲ್ಲಿ ಅನೇಕ ಸೌಲಭ್ಯಗಳು ಪ್ರಯಾಣಿಕರಿಗೆ ಒದಗಿಸಲಾಗಿತ್ತದೆ. ಆದರೆ ಇಲ್ಲಿ ಒಂದು ದೇಶದ ಕಥೆಯನ್ನು ಕೇಳಿದ್ರೆ ನಿಜಕ್ಕೂ ಶಾಕ್ ಆಗ್ತೀರ.
ಪ್ರಪಂಚದಲ್ಲಿ ನಮಗೆ ಗೊತ್ತಿರದ ಹಲವು ವಿಭಿನ್ನ, ವಿಸ್ಮಯಕಾರಿ, ವಿಚಿತ್ರ, ತಮಾಷೆ, ವಿಷಯಗಳಿವೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಒಂದಿಲ್ಲೊಂದು ಸುದ್ದಿ ಬರುತ್ತಿರುತ್ತದೆ. ವಿಮಾನದಲ್ಲಿ ಪ್ರಯಾಣಿಸಬೇಕು ಎಂದು ಆಸೆ ಇರುವ ಜನರಿಗೆ ಈ ವಿಷ್ಯ ಕೇಳಿ ಶಾಕ್ ಆಗ್ಬೋದು. ಹೌದು, ಈ ದೇಶದಲ್ಲಿ ಜನರು ತಮ್ಮ ಮನೆಯಲ್ಲಿ ವಿಮಾನಗಳನ್ನು ಇಟ್ಟುಕೊಂಡಿದ್ದಾರೆ. ಈ ಸುದ್ದಿ ಕೇಳಿದಾಕ್ಷಣ ನಮ್ಗೆ ಖಂಡಿತಾ ಶಾಕ್ ಆಗುತ್ತೆ, ನಮ್ ದೇಶದಲ್ಲಿ ಒಂದು ಪುಟ್ಟ ಗಾಡಿ ತಗೋಳೋಕೆ ಕಷ್ಟ ಪಡ್ತೀವಿ ಆದ್ರೆ ಇದೆಂತಹ ವಿಷ್ಯ ಅಂತ.
ಈ ವಿಚಿತ್ರ ಸುದ್ದಿ ಕೇಳಿ, ನಿಮಗೆ ವಿಚಿತ್ರವೆನಿಸಬಹುದು. ಆದರೆ, ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ಒಂದು ಪಟ್ಟಣವಿದೆ. ಅಲ್ಲಿ ಪ್ರತಿಯೊಬ್ಬರೂ ತಮ್ಮ ಮನೆಯ ಮುಂದೆ ವಿಮಾನವನ್ನು ನಿಲ್ಲಿಸುತ್ತಾರಂತೆ. ಅವರು ಎಲ್ಲಿಗೆ ಹೋಗಬೇಕೆಂದರೂ ವಿಮಾನದಲ್ಲಿಯೇ ಹಾರಾಡೋದು. ಕ್ಯಾಲಿಫೋರ್ನಿಯಾದ ಕ್ಯಾಮರೂನ್ ಏರ್ ಪಾರ್ಕ್ ಎಂಬ ಈ ಸ್ಥಳವು ಸಾಮಾನ್ಯ ಹಳ್ಳಿಗಳಿಗಿಂತ ವಿಭಿನ್ನವಾಗಿದೆ. ವಿಮಾನ ನಿಲ್ದಾಣವನ್ನು ತಲುಪಲು ರನ್‌ವೇಗಳಾಗಿ ಬಳಸಲು ಇಲ್ಲಿ ವಿಶಾಲವಾದ ರಸ್ತೆಗಳನ್ನು ನಿರ್ಮಿಸಲಾಗಿದೆ.
ಈ ಊರಿನ ಪ್ರತಿಯೊಬ್ಬರು ಮನೆಯ ಹೊರಗೆ ಗ್ಯಾರೇಜ್‌ನಂತಹ ಹ್ಯಾಂಗರ್‌ಗಳಿವೆ. ಅಲ್ಲಿ ಅವರು ತಮ್ಮ ವಿಮಾನಗಳನ್ನು ನಿಲ್ಲಿಸುತ್ತಾರೆ. ಜನರು ಎಲ್ಲಿಗೆ ಹೋಗಬೇಕು, ಅವರು ವಿಮಾನದಲ್ಲಿ ಹೋಗುತ್ತಾರೆ. ಇಲ್ಲಿ ವಾಸಿಸುವ ಹೆಚ್ಚಿನ ಜನರು ಪೈಲಟ್‌ಗಳು ಮತ್ತು ತಮ್ಮದೇ ಆದ ವಿಮಾನಗಳನ್ನು ಹಾರಾಡಿಸುತ್ತಾರೆ. ಒಂದು ಅಂದಾಜಿನ ಪ್ರಕಾರ, US ನಲ್ಲಿ ಅಂತಹ 610 ಏರ್ ಪಾರ್ಕ್‌ಗಳಿವೆ, ಅಲ್ಲಿ ಪ್ರತಿ ಮನೆಯಲ್ಲೂ ವಿಮಾನವಿದೆ. ವಿಶ್ವ ಸಮರ II ರ ಸಮಯದಲ್ಲಿ ನಿರ್ಮಿಸಲಾದ ಏರ್‌ಫೀಲ್ಡ್‌ಗಳನ್ನು ಪರಿವರ್ತಿಸಲಾಗಿಲ್ಲ ಮತ್ತು ವಸತಿ ಏರ್ ಪಾರ್ಕ್‌ಗಳಾಗಿ ಪರಿವರ್ತಿಸಲಾಗಿಲ್ಲ.
ನಿವೃತ್ತ ಸೇನಾ ಪೈಲಟ್‌ಗಳು ಇಲ್ಲಿ ವಾಸಿಸುತ್ತಿದ್ದಾರೆ. ಅಬ್ಬಬ್ಬಾ,ಈ ವಿಷಯ ಕೇಳಿದ್ರೆ ಎಷ್ಟೊಂದು ವಿಚಿತ್ರ ಅಂತ ಅನ್ಸುತ್ತೆ ಅಲ್ವ? ಇಲ್ಲಿನ ಜನರು ಅಷ್ಟೊಂದು ಶ್ರೀಮಂತರಾ ಅಥವಾ ಇವರ ಜೀವನ ಶೈಲಿ ಹೀಗೆನಾ? ಅಂತ ಸಾವಿರ ಪ್ರಶ್ನೆಗಳು ನಮ್ಮ ಮನದಲ್ಲಿ ಮೂಡುತ್ತದೆ ಅಲ್ವಾ? ಅಭಿವೃದ್ಧಿಯಾಗದ ಹಳ್ಳಿ, ಗ್ರಾಮಗಳನ್ನು ನೋಡಿದ್ರೆ, ಇಂತಹ ವಿಚಿತ್ರ ಘಟನೆಗಳು ಭಾರತದಲ್ಲಿ ನಿಜಕ್ಕೂ ಆಗ್ಬಾರ್ದಾ ಅಂತ ಅನಿಸೋದು ಸಹಜ.